Advertisement

ಅಂಗಡಿಗಳಿಂದ ಮುಕ್ತವಾದ ಬಸವಣ್ಣ ದೇವರ ಮಠದ ರಸ್ತೆ

01:06 PM Oct 11, 2021 | Team Udayavani |

ನೆಲಮಂಗಲ: ಬಸ್‌ ನಿಲ್ದಾಣದಿಂದ 10ಕ್ಕೂ ಹೆಚ್ಚು ಶಾಲಾ- ಕಾಲೇಜಿಗೆ ಹೋಗುವ ಸಾವಿರಾರು ವಿದ್ಯಾರ್ಥಿಗಳು ರಸ್ತೆಬದಿ ಅಂಗಡಿಗಳಿಂದ ಓಡಾಡಲಾಗದೆ ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ಉದಯವಾಣಿಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ, ನಗರಸಭೆ ಅಧಿಕಾರಿಗಳು ತೆರವು ಮಾಡಿ ವಿದ್ಯಾರ್ಥಿಗಳಿಗೆ ಸಮಸ್ಯೆ ಬಗೆಹರಿಸಿದ್ದಾರೆ.

Advertisement

ನಗರದ ಬಸವಣ್ಣ ದೇವರ ಮಠದ ಮಾರ್ಗವಾಗಿ ಸೊಂಡೆಕೊಪ್ಪ ಬೈಪಾಸ್‌ಗೆ ತೆರಳುವ ರಸ್ತೆಯ ಎರಡು ಬದಿಯಲ್ಲಿ ತರಕಾರಿ ಮತ್ತಿತರ ಅಂಗಡಿಗಳನ್ನಿಟ್ಟು ಬೀದಿಬದಿ ವ್ಯಾಪಾರಿಗಳು ಪ್ರತಿನಿತ್ಯ ವ್ಯಾಪಾರ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಖರೀದಿ ನೆಪದಲ್ಲಿ ಬಂದ ಪುಂಡರು ಚುಡಾಯಿಸುವ ಜತೆಗೆ ವಾಹನ ದಟ್ಟಣೆಯಿಂದ ಓಡಾಡಲು ಸಮಸ್ಯೆಯಾಗಿತ್ತು, ಇದರ ಬಗ್ಗೆ ಶಿಕ್ಷಣ ಸಚಿವರಿಗೂ ದೂರು ನೀಡಿದ್ದರೂ ಸಮಸ್ಯೆ ಬಗೆಹರಿಸಿರಲಿಲ್ಲ.

ಆದ್ದರಿಂದ ಉದಯವಾಣಿಯಲ್ಲಿ ಸೆ.20ರಂದು ಸಮಸ್ಯೆಯ ಕುರಿತಾಗಿ ವಿಸ್ತೃತವಾಗಿ ವರದಿ ಪ್ರಕಟ ಮಾಡಲಾಗಿತ್ತು, ವರದಿ ಬಂದ ಎರಡೇ ದಿನದಲ್ಲಿ ಅಂಗಡಿ ತೆರವು ಮಾಡುವಂತೆ ಆಟೋ ಮೂಲಕ ಮೈಕ್‌ನಲ್ಲಿ ಸೂಚನೆ ನೀಡಿ ಗಡುವು ನೀಡಿದ್ದರು. ವರದಿ ಬಂದ ನಂತರ ಶಾಸಕರಿಗೆ ಕಾಲೇಜಿನ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಶೀಘ್ರದಲ್ಲಿ ತೆರವು ಮಾಡುವಂತೆ ಮನವಿ ಪತ್ರ ನೀಡಿದ್ದರು. ನಂತರ ನಗರಸಭೆ ಅಧಿಕಾರಿಗಳು ಅಂಗಡಿಗಳನ್ನು ತೆರವು ಮಾಡಿದ್ದಾರೆ.

ಇದನ್ನೂ ಓದಿ;- ಮುದ್ದೇಬಿಹಾಳದಲ್ಲಿ ಸರಣಿ ಕಳ್ಳತನ: 7 ಮನೆಗಳ ಬೀಗ ಮುರಿದು ನಗ ನಾಣ್ಯ ದೋಚಿದ ಕಳ್ಳರು

Advertisement

ವ್ಯಾಪಾರ ಸ್ಥಳಕ್ಕೆ ಮನವಿ: ಬೀದಿಬದಿ ವ್ಯಾಪಾರಿಗಳಿಗೆ ನಗರಸಭೆ ಅಧಿಕಾರಿಗಳು ಪ್ರತ್ಯೇಕ ಸ್ಥಳದ ಅವಕಾಶ ನೀಡಲು ವ್ಯಾಪಾರಿಗಳು ಮನವಿ ಮಾಡಿದ್ದು, ಸ್ಥಳವನ್ನು ಗುರುತು ಮಾಡಿ ಆ ಸ್ಥಳದಲ್ಲಿ ಸಂತೆ ಮಾಡಲು ಹಾಗೂ ಪ್ರತಿನಿತ್ಯ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ನಗರಸಭೆ ಆಯುಕ್ತ ಮಂಜುನಾಥ್‌ ಭರವಸೆ ನೀಡಿದ್ದಾರೆ. ಹಲವು ವರ್ಷದಿಂದ ಎದುರಾಗಿದ್ದ ಸಮಸ್ಯೆ ಉದಯವಾಣಿ ವರದಿಯಿಂದ ಶೀಘ್ರದಲ್ಲಿ ಬಗೆಹರಿದಿದ್ದು ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಥಳೀಯ ಜನರು ಪತ್ರಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next