ಮಂಗಳೂರು ತಾಲೂಕು ಉಳಾಯಿಬೆಟ್ಟು ಗ್ರಾಮದ ಖಾಸಗಿ ವ್ಯಕ್ತಿಯ ಜಾಗದಲ್ಲಿ, ಫಲ್ಗುಣಿ ನದಿ ಮತ್ತು ನದಿಯ ತೀರದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಾಮರಾವ್, ರೌಡಿ ನಿಗ್ರಹ ದಳದ ಸಿಬಂದಿ ಮತ್ತು ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಸಿದ್ದ ಗೌಡ ಎಚ್. ಭಜಂತ್ರಿ, ಪಿಎಸ್‌ಐ ವೆಂಕಟೇಶ ಐ., ಎಎಸ ಐ ಹರೀಶ್ ಮತ್ತು ಸಿಬಂದಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ಪದ್ಮಶ್ರೀ ಹಾಗೂ ಅಧಿಕಾರಿ ಮೂರ್ತಿ ಮತ್ತು ಸಿಬಂದಿ ಸಂಯುಕ್ತವಾಗಿ ದಾಳಿ ನಡೆಸಿದರು. ಸ್ಥಳ ದಿಂದ 42 ದೋಣಿಗಳು,5 ಟಿಪ್ಪರ್ ಲಾರಿಗಳು, 3 ಡೋಜರ್ ಮತ್ತು ದಕ್ಕೆಯಲ್ಲಿ ಸಂಗ್ರಹಿಸಿಟ್ಟಿದ್ದ ಮರಳನ್ನು ವಶಪಡಿಸಿಕೊಂಡಿದ್ದಾರೆ.ಇವುಗಳ ಮೌಲ್ಯ ಸುಮಾರು 1 ಕೋಟಿ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ .ತುಂಬೆಯಲ್ಲಿ ಮರಳು ತುಂಬಿಸಿದ ಒಂದು ಟಿಪ್ಪರ್ ಲಾರಿ ಪರವಾನಿಗೆ ಉಲ್ಲಂಘಿಸಿ ಅರ್ಕುಳದ ಕಡೆ ಬಂದ ಹಿನ್ನೆಲೆಯಲ್ಲಿ ಅದನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 10,20,000 ರೂ. ಆಗಿರುತ್ತದೆ.
Advertisement
ಮತ್ತೂಂದು ಪ್ರಕರಣದಲ್ಲಿ ಅಕ್ರಮವಾಗಿ ಮರಳನ್ನು ಕೇರಳ ರಾಜ್ಯ ಕಡೆಗೆ ಸಾಗಿಸುತ್ತಿದ್ದ 5 ಟಿಪ್ಪರ್‌ಗಳನ್ನು ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ರೌಡಿ ನಿಗ್ರಹದಳ ಸಿಬಂದಿ ವಶಪಡಿಸಿಕೊಂಡಿದ್ದಾರೆ.