Advertisement

ಅಕ್ರಮವಾಗಿ ಆನೆ ದಂತ ಮಾರಾಟ: ಗುಂಡ್ಲುಪೇಟೆಯಲ್ಲಿ ಐವರ ಬಂಧನ

10:43 PM Dec 11, 2022 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಅಕ್ರಮವಾಗಿ ಆನೆ ದಂತ ಮಾರಾಟ ಮಾಡಲು ಯತ್ನಿಸಿದ್ದ ಐವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿರುವ ಘಟನೆ ತಾಲೂಕಿನ ಮೈಸೂರು-ಊಟಿ ರಾಷ್ಟ್ರೀಯ ಹೆದ್ಧಾರಿ-181ರ ಬಸವಾಪುರ ಗ್ರಾಮದ ಸಮೀಪದ ಒಂಟೆ ಫಾಮ್ ಬಳಿ ನಡೆದಿದೆ.

Advertisement

ತಮಿಳುನಾಡು ಮೂಲದ ರಂಗಸ್ವಾಮಿ(35), ಸಂಜೀವಕುಮಾರ್(41), ಎನ್.ವಿನೋತ್(36), ಕತಿರೇಸನ್(45), ಸೆಲ್ವನಾಯಗಂ(44) ಬಂಧಿತ ಆರೋಪಿಗಳು. ಈ ಐವರು ಆನೆದಂತ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್‍ಕುಮಾರ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಕಾರಿನಲ್ಲಿ ಅನುಮಾಸ್ಪದವಾಗಿ ಬರುತ್ತಿದ್ದಾಗ ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಆನೆಯ ಎರಡು ದಂತ ಸಿಕ್ಕಿದೆ. ನಂತರ ಕಾರಿನ ಸಮೇತ ಮೂವರು ಆರೋಪಿಗಳನ್ನು ಬಂಧಿಸಿಲಾಯಿತು.

ಎಸಿಎಫ್ ರವೀಂದ್ರ ಹಾಗೂ ಆರ್ ಎಫ್‍ಓ ನವೀನ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಿ, ತಮಿಳುನಾಡಿನ ಮಸಣಿಗುಡಿ ಬಸ್ ನಿಲ್ದಾಣದ ಬಳಿ ಓರ್ವನನ್ನು ಹಾಗೂ ಗುಂಡ್ಲುಪೇಟೆ ಬಸ್ ನಿಲ್ದಾಣದ ಹತ್ತಿರ ಮತ್ತೋರ್ವನನ್ನು ಬಂಧಿಸಲಾಯಿತು. ಒಟ್ಟು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಕೆ ಮಾಡಿದ್ದ ಕಾರನ್ನು ವಶಕ್ಕೆ ಪಡೆದು ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಗಾಗಿದೆ.

ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳಾದ ಮುದ್ದುರಾಜ್, ಭರತ್, ಕಿರಣ್ ಕುಮಾರ್, ರಮೇಶ್ ಮಠಪತಿ, ಶ್ರೀಪಾಲ್, ಶಿವಕುಮಾರ್, ಪ್ರವೀಣ್ ಕುಮಾರ್, ಸಿದ್ದು, ನಾಗೇಂದ್ರ, ನಾಗೇಶ್, ಕುಮಾರ, ಅಭಿಲಾಶ್, ಶೇಖರ ರಾಮಪ್ಪ ಜಾಧವ, ಪರಸಪ್ಪ ಎಚ್.ಮಾದರ, ಶಂಕರ, ಶ್ರೀಕಾಂತ್, ಅಬ್ದುಲ್ ಹನೀಫ್, ರಾಘವೇಂದ್ರ, ಸುರೇಶ್ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next