Advertisement
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಚ್.ಎಸ್.ಗೋಪಿನಾಥ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 2023ರ ಮೇ ಅಂತ್ಯಕ್ಕೆ 754 ಮಂದಿ ವಿದೇಶಿಯರು ವೀಸಾ ಅವಧಿ ಮುಕ್ತಾಯಗೊಂಡ ಬಳಿಕವೂ ಇಲ್ಲೇ ನೆಲೆಸಿದ್ದು, ಈ ಮಾಹಿತಿಯನ್ನು ಎಫ್ಆರ್‌ಆರ್‌ಒ ಬೆಂಗಳೂರು ಕಚೇರಿಗೆ ನೀಡಲಾಗಿದೆ. ಇವರ ಪತ್ತೆಗೆ ತಂಡಗಳನ್ನು ರಚಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಅವಧಿ ಮೀರಿ ವಾಸವಾಗುವ ವಿದೇಶಿ ಪ್ರಜೆಗಳನ್ನು ಅವರ ದೇಶದ ವಿದೇಶ ಮಂತ್ರಾಲಯಕ್ಕೆ ಮಾಹಿತಿ ನೀಡಲಾಗುತ್ತದೆ. ಗಡೀಪಾರು ಮಾಡುವ ತನಕ ಅವರನ್ನು ಡಿಟೆನ್ಷನ್ ಸೆಂಟರ್‌ಗಳಲ್ಲಿಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 501 ವಿದೇಶಿ ಪ್ರಜೆಗಳು ಡ್ರಗ್ಸ್, ದರೋಡೆ ಮತ್ತಿತರ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಬೆಂಗಳೂರಿನಲ್ಲಿ ನೆಲೆಸಿದವರ ಸಂಖ್ಯೆ 451 ಆಗಿದೆ. ಅಲ್ಲದೆ ವಿದ್ಯಾರ್ಥಿ ವೀಸಾ ಅಡಿಯಲ್ಲಿ ರಾಜ್ಯದಲ್ಲಿ 4,890 ವಿದೇಶಿಯರಿದ್ದು, ಆ ಪೈಕಿ 2 ಸಾವಿರಕ್ಕೂ ಅಧಿಕ ಮಂದಿ ವೀಸಾ ಅವಧಿ ಮುಗಿದ ಬಳಿಕವೂ ಇಲ್ಲೇ ವಾಸವಾಗಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು.