Advertisement

ಅಕ್ರಮ ವಿರುದ‍್ಧ ನಿರ್ದಾಕ್ಷಿಣ್ಯ ಕ್ರಮ: ಡಿವೈಎಸ್ಪಿ ಶಿರೂರ

10:54 AM Mar 25, 2022 | Team Udayavani |

ಆಳಂದ: ಕಾನೂನು ಬಾಹಿರ ಅಕ್ರಮ ಚಟುವಟಿಕೆಗಳು ಗಮನಕ್ಕೆ ತಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ರವಿಂದ್ರ ಶಿರೂರ ಹೇಳಿದರು.

Advertisement

ತಾಲೂಕಿನ ಕೋರಳ್ಳಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗುರುವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಹಮ್ಮಿಕೊಳ್ಳಲಾಗಿದ್ದ “ನಿಮ್ಮ ಮನೆ ಬಾಗಿಲಿಗೆ ಪೊಲೀಸ್‌’ ಗ್ರಾಮಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಪ್ಪು ತಿಳಿವಳಿಕೆಯಿಂದ ಘಟಿಸಿದ ಸಣ್ಣಪುಟ್ಟ ಕಲಹಗಳನ್ನು ಸ್ಥಳೀಯ ಮಟ್ಟದಲ್ಲೇ ಇತ್ಯರ್ಥಪಡಿಸಿಕೊಂಡು ಸಹೋದರತೆಯಿಂದ ಬಾಳ್ವೆ ನಡೆಸಬೇಕು ಎಂದು ಸಲಹೆ ನೀಡಿದರು.

ಇದೆ ವೇಳೆ ತುರ್ತು ಸೇವೆ 112 ಸಂಖ್ಯೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಗ್ರಾಮದ ಮುಖಂಡರು ಶಾಲೆ ಕಟ್ಟಡ ಮತ್ತು ಜಮೀನಿನ ದಾಖಲೆಗಳು ದೊರೆಯದೆ ಸಮಸ್ಯೆ ಆಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು. ಈ ಕುರಿತು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಡಿವೈಎಸ್‌ಪಿ ಭರವಸೆ ನೀಡಿದರು.

ಸಿಪಿಐ ಮಂಜುನಾಥ ಶಿಲವರೆ ಮಾತನಾಡಿ, 371(ಜೆ)ನೇ ಕಲಂ ಜಾರಿಯಿಂದ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಅನುಕೂಲವಾಗಿದೆ. ಇದರ ಲಾಭ ಪಡೆಯಿರಿ ಎಂದರು. ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾಯ ಕೆ. ಬಿರಾದಾರ ಮಾತನಾಡಿದರು.

Advertisement

ರೈತ ಪರಮೇಶ್ವರ ಕಂಬಾರ ಮಾತನಾಡಿ, ಹೊಲದ ಸರ್ವೇಗೆ ಹಾಕಿದ್ದೇವೆ, ಕೆಲಸ ಆಗುತ್ತಿಲ್ಲ ಎಂದಾಗ ಡಿವೈಎಸ್‌ಪಿ ತಹಶೀಲ್ದಾರ್‌ ಗಮನಕ್ಕೆ ತರಲಾಗುವುದು ಎಂದರು. ಗ್ರಾಪಂ ಅಧ್ಯಕ್ಷ ಸುಭಾಷ ಸೇವು ರಾಠೊಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಶರಣಬಸಪ್ಪ ಅಂಬಾಜಿ, ಕೇಶವ ರಾಠೊಡ, ಶ್ರೀಮಂತ ಎಂ. ದೇವ, ಪಿಎಸ್‌ಐ ತಿರುಮಲ್ಲೇಶ, ನಿಜಲಿಂಗಪ್ಪ ರಾಮಶೆಟ್ಟಿ, ರಾಜಶೇಖರ ರಾಮಶೆಟ್ಟಿ, ಚಂದ್ರಶೇಖರ ಬಿ. ಪಾಟೀಲ, ಶಿವಶರಣಪ್ಪ ಬಿರಾದಾರ, ಪರಶುರಾಮ ಮೇತ್ರೆ, ಶ್ರೀಕಾಂತ ವಾರದ, ಲೌಕುಮಾರ ಮಂಗನ್‌, ಪ್ರಗತಿಪರ ರೈತ ಬಸವರಾಜ ಎಸ್‌. ಪಾಟೀಲ, ಕಲ್ಲಯ್ನಾ ಸ್ವಾಮಿ ಮತ್ತಿತರರು ಇದ್ದರು.

ಆಶಾ ಕಾರ್ಯಕರ್ತೆ ಚನ್ನಮ್ಮ ಬಿಲಗುಂದಿ, ದೇವಮ್ಮಾ ಘೋಡಕೆ, ಕನ್ಯಾಕುಮಾರಿ ಮೇತ್ರೆ, ಶಾಂತಾಬಾಯಿ ಜಮಾದಾರ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಮದಗುಣಕಿ, ಸುಧಾ ದೇವ, ಭೀಂಬಾಯಿ, ಪೊಲೀಸ್‌ ಶೇಖರ ಕಾರಬಾರಿ, ಸಿದ್ಧರಾಮ ಬಿರಾದಾರ, ಗಣಪತಿ ಘಂಟೆ, ರತ್ನನ ಚವ್ಹಾಣ, ಗಸ್ತು ಪೇದೆ ಲಿಂಗಪ್ಪ ಹಾಜರಿದ್ದರು. ಬಿಲ್‌ ಕಲೆಕ್ಟರ್‌ ಹಣಮಂತರಾಯ ಕೆ. ಮದಗುಣಕಿ ನಿರೂಪಿಸಿದರು, ಬಸವರಾಜ ಆರ್‌. ಮಡಿವಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next