Advertisement

ಖಾಸಗಿ ಶಿಕ್ಷಣ ಸಂಸ್ಥೆ ಕಡೆಗಣನೆ

06:57 AM Jun 24, 2020 | Lakshmi GovindaRaj |

ಕೋಲಾರ: ಖಾಸಗಿ ಶಿಕ್ಷಣ ಸಂಸ್ಥೆಗಳ ಕುರಿತು ಸರ್ಕಾರ ಮಲತಾಯಿ ಧೋರಣೆ ಅನುಸರಿಸದೇ, ಕೂಡಲೇ ಪ್ಯಾಕೇಜ್‌ ಘೋಷಿಸಬೇಕು ಎಂದು ಆಗ್ರಹಿಸಿ ಕೋಲಾರ ಅಸೋಸಿಯೇಟೆಡ್‌ ಮ್ಯಾನೇ ಜ್‌ಮೆಂಟ್ಸ್‌ ಆಫ್‌ ಸ್ಕೂಲ್ಸ್‌ (ಕ್ಯಾಮ್ಸ್‌) ಪದಾಧಿಕಾರಿಗಳು ಶಿಕ್ಷಣಾಧಿ ಕಾರಿ ಸಿ.ಆರ್‌.ಅಶೋಕ್‌ಗೆ ಮನವಿ ಸಲ್ಲಿಸಿದರು.

Advertisement

ನಗರದ ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕ್ಯಾಮ್ಸ್‌ ಪದಾಧಿಕಾರಿಗಳು, ಶಿಕ್ಷಕರ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದ ಮಾಜಿ ಎಂಎಲ್‌ಸಿ  ರಮೇಶ್‌ಬಾಬು, ಖಾಸಗಿ ಶಾಲೆಗಳು ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ, ಹಲವು ವೃತ್ತಿಪರರಿಗೆ ಪರಿಹಾರಧನ ಘೋಷಿಸಿರುವ ಸರ್ಕಾರ, ಖಾಸಗಿ ಶಾಲೆಗಳ ಈ ಸಿಬ್ಬಂದಿಯನ್ನು ಕಡೆಗಣಿಸಿದೆ ಎಂದು ದೂರಿದರು.

ಕ್ಯಾಮ್ಸ್‌ ಜಿಲ್ಲಾಧ್ಯಕ್ಷ  ಎ.ಸದಾನಂದ ಮಾತನಾಡಿ, ಶಾಲೆಯ ವಾಹನಗಳ ವಿಮೆ, ತೆರಿಗೆ, ಶಿಕ್ಷಕರಿಗೆ ಪಿಎಫ್‌, ಇಎಸ್‌ಐ, ಕಟ್ಟಡ ನಿರ್ವಹಣಾ ವೆಚ್ಚಗಳಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಸರ್ಕಾರ ಆದಷ್ಟು ಶೀಘ್ರ 2019-20ನೇ ಸಾಲಿನ ಆರ್‌ಟಿಇ ಶುಲ್ಕದ  ಬಾಕಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ನಗರಸಭೆ ಸದಸ್ಯ ಮುಭಾರಕ್‌, ಅಮರ ಜ್ಯೋತಿ ಮುನಿಯಪ್ಪ, ಸಲಹೆಗಾರರಾದ ಮುನಿಸ್ವಾಮಿ,

ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಎಸ್‌. ಜಗದೀಶ್‌, ಜಿಲ್ಲಾ ಉಪಾಧ್ಯಕ್ಷ ನಾಗಭೂಷಣ್‌, ಸತೀಶ್‌ಕುಮಾರ್‌, ಮುರಾಂಡಹಳ್ಳಿ ಗೋಪಾಲಪ್ಪ, ಜಮೀರ್‌ ಅಹಮದ್‌, ಶೈಲೇಶ್‌ಕುಮಾರ್‌, ಹನುಮಂತಪ್ಪ, ಮುನಿಶಾಮಿಗೌಡ, ಜಿ.ಕೆ. ಹರಿಪ್ರಸಾದ್‌, ವೈ.ಸಿ.ಮುನೇಗೌಡ, ಆರ್‌.ಅಶೋಕ್‌ ಕುಮಾರ್‌, ಜೋಸೆಫ್‌, ಆರ್‌.ಶಂಕರಪ್ಪ, ಜೆ.ಎನ್‌.  ರಾಮಕೃಷ್ಣ, ಶಶಿಕಿರಣ್‌, ಚಿನ್ಮಯಾನಂದ  ಅವಧೂತರು, ಸೋಮಶೇಖರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next