Advertisement
“ಇಂಗ್ಲೆಂಡ್ ಪರ ಕ್ರಿಕೆಟ್ ಆಡಿದರೆ ನಿನ್ನನ್ನು ಶೂಟ್ ಮಾಡುತ್ತೇವೆ ಎಂಬಂಥ ಬೆದರಿಕೆ ಕರೆಗಳು ನನಗೆ ಬಂದಿದ್ದವು. ಇದರಿಂದ ನಾನು ತೀವ್ರ ಆತಂಕಕ್ಕೆ ಒಳಗಾಗಿದ್ದೆ. ಗಮನ ವನ್ನು ಕ್ರಿಕೆಟ್ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ…’ ಎಂಬುದಾಗಿ 54 ವರ್ಷದ ಡಿಫ್ರೀಟಸ್ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.
“ನ್ಯಾಶನಲ್ ಫ್ರಂಟ್‌ನಿಂದ ಅದಷ್ಟೋ ಸಲ ಬೆದರಿಕೆ ಪತ್ರಗಳು, ಕರೆಗಳು ಬಂದಿದ್ದವು. ಹೀಗಾಗಿ ಮನೆಗೆ ಪೊಲೀಸ್ ಕಾವಲು ಹಾಕಿಸಿಕೊಂಡೆ. ನನ್ನ ಹೆಸರನ್ನು ಹೊಂದಿದ್ದ ಸ್ಪಾನ್ಸರ್ ಕಾರೊಂದು ಇತ್ತು, ಅದನ್ನು ಮಾರಿದೆ. ಏಕೆಂದರೆ ಲಂಡನ್ ಬೀದಿಯಲ್ಲಿ ಈ ಕಾರಿನಲ್ಲಿ ಸಂಚರಿಸುವ ಧೈರ್ಯ ನನ್ನಲ್ಲಿರಲಿಲ್ಲ’ ಎಂದು ಅಂದಿನ ಭೀತಿಯ ದಿನ ಗಳ ಬಗ್ಗೆ ಹೇಳಿದರು. ಆದರೆ ತಾನು ಕ್ರಿಕೆಟ್ ಆಡುವ ದಿನಗಳಲ್ಲಿ ಇದನ್ನು ಯಾರಲ್ಲೂ ಹೇಳಿಕೊಂಡಿರಲಿಲ್ಲ ಎಂದೂ ತಿಳಿಸಿದರು. “ಲಾರ್ಡ್ಸ್ ಟೆಸ್ಟ್‌ನಲ್ಲಿ ಆಡ ಬೇಕೋ ಬೇಡವೋ ಎಂದು ಎರಡು ದಿನಗಳ ಕಾಲ ಹೊಟೇಲ್ ಕೋಣೆಯಲ್ಲಿ ಕುಳಿತು ಯೋಚಿಸಿದ್ದೆ. ಕೊನೆಗೊಂದು ಗಟ್ಟಿ ನಿರ್ಧಾರ ಮಾಡಿದೆ. ಇಂಥ ಸ್ಥಿತಿಯಲ್ಲಿ ನಾನು 11 ವರ್ಷಗಳ ಕಾಲ ಇಂಗ್ಲೆಂಡ್ ಪರ ಆಡಿದ್ದು ನಿಜಕ್ಕೂ ಅಸಾಮಾನ್ಯ ಸಾಧನೆಯೇ ಆಗಿದೆ…’ ಡಿಫ್ರೀಟಸ್ ಹೇಳಿದರು.
Related Articles
44 ಟೆಸ್ಟ್‌ಗಳಿಂದ 140 ವಿಕೆಟ್ ಮತ್ತು 103 ಏಕದಿನ ಪಂದ್ಯಗಳಿಂದ 115 ವಿಕೆಟ್ ಉರುಳಿಸಿದ ಸಾಧನೆ ಇವರದಾಗಿದೆ.
Advertisement
ಡೊಮಿನಿಕಾ ಮೂಲದ ಕಪ್ಪು ಕ್ರಿಕೆಟಿಗನಾಗಿ ರುವ ಡಿಫ್ರೀಟಸ್ 1986ರ ಆ್ಯಶಸ್ ಸರಣಿಯ ವೇಳೆ ಬ್ರಿಸ್ಬೇನ್‌ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿ ದ್ದರು. 1995ರಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಎದುರು ಲೀಡ್ಸ್‌ನಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿದರು.