ನಿರ್ಭಯಾ ಅತ್ಯಾಚಾರಿಗಳಿಗೆ ನೇಣಿಗೇರಿಸಿದ ಹಿನ್ನೆಲೆಯಲ್ಲಿ ಇಡೀ ದೇಶವೇ ಸಂಭ್ರಮ ಪಟ್ಟಿದೆ. ಎಲ್ಲಾ ಕ್ಷೇತ್ರದಿಂದಲೂ ನ್ಯಾಯ ದೊರಕಿದ್ದಕ್ಕೆ ಸಂತಸ ವ್ಯಕ್ತವಾಗಿದೆ. ಹಾಗೆಯೇ ಸಿನಿಮಾ ರಂಗದಿಂದಲೂ ಕೂಡ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕನ್ನಡ ನಟಿ ಮಾಳವಿಕ ಕೂಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಆಗಿರುವುದನ್ನು ಸ್ವಾಗತಿಸಿರುವ ನಟಿ ಮಾಳವಿಕಾ, ಸಂತಸ ವ್ಯಕ್ತಪಡಿಸಿದ್ದಾರೆ. “ಕೊನೆಗೂ ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗಿದೆ. ಒಂದು ವೇಳೆ ನಿರ್ಭಯಾ ಅವರ ಕುರಿತು ಯಾರಾದರೂ ಸಿನಿಮಾ ಮಾಡಿದರೆ, ನಿರ್ಭಯಾ ಅವರ ತಾಯಿ ಆಶಾದೇವಿ ಪಾತ್ರವನ್ನು ನನಗೆ ಕೊಡಿ. ನಾನು ಮಾಡುತ್ತೇನೆ’ ಎಂದು ತಮ್ಮ ಮನದಾಳದ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಸತತ ಏಳು ವರ್ಷಗಳ ಕಾಲ ಹೋರಾಟ ಮಾಡಿರುವ ಆಶಾದೇವಿ ಅವರು ತನ್ನ ಮಗಳಿಗೆ ಆದಂತಹ ಅನ್ಯಾಯದ ವಿರುದ್ಧವಾಗಿ ಹೋರಾಟ ಮಾಡುತ್ತಲೇ ಬಂದಿದ್ದರು. ಆಶಾದೇವಿ ಅವರ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ ಎಂದು ಆಶಾದೇವಿ ಅವರ ಹೋರಾಟವನ್ನು ಹೊಗಳಿರುವ ಮಾಳವಿಕಾ ಅವರು, ಆಶಾದೇವಿ ಅವರನ್ನು ಮನಃಪೂರ್ವಕವಾಗಿ ಮೆಚ್ಚಿಕೊಂಡಿದ್ದಾರೆ.