ಇಸ್ಲಾಮಾಬಾದ್ : ಪಾಕಿಸ್ಥಾನ ಕ್ರಿಕೆಟ್ ಲೋಕದಲ್ಲಿ ಸದ್ಯ ಭಾರೀ ಕೋಲಾಹಲದ ಸ್ಥಿತಿ ನಿರ್ಮಾಣವಾಗಿತ್ತು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಬಾಬರ್ ಅಜಮ್ (Babar Azam) ಅವರನ್ನು ಕೈ ಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಪಾಕ್ ಕ್ರಿಕೆಟಿಗ ಫಖರ್ ಜಮಾನ್( Fakhar Zaman) ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಫಖರ್ ಜಮಾನ್ ”ಬಾಬರ್ ಆಜಮ್ ಅವರನ್ನು ಕೈಬಿಡುವ ಕುರಿತಾಗಿ ಸಂಬಂಧಿಸಿದ್ದಾಗಿದ್ದು 2020 ಮತ್ತು 2023 ರ ನಡುವೆ ವಿರಾಟ್ ಕೊಹ್ಲಿ ಕ್ರಮವಾಗಿ 19.33, 28.21, ಮತ್ತು 26.50 ರ ಸರಾಸರಿಯಲ್ಲಿದ್ದಾಗ ಭಾರತ ಅವರನ್ನು ಬೆಂಚ್ ಮಾಡಲಿಲ್ಲ.ನಾವು ನಮ್ಮ ಪ್ರೀಮಿಯರ್ ಬ್ಯಾಟ್ಸ್‌ಮನ್ ಅನ್ನು ಬದಿಗಿಡಲು ಪರಿಗಣಿಸುತ್ತಿದ್ದರೆ, ವಾದಯೋಗ್ಯವಾಗಿ ಪಾಕಿಸ್ಥಾನ ಇದುವರೆಗೆ ನಿರ್ಮಿಸಿದ ಅತ್ಯುತ್ತಮ, ತಂಡಕ್ಕೆ ಅತ್ಯಂತ ಆಳವಾದ ನಕಾರಾತ್ಮಕ ಸಂದೇಶವನ್ನು ಕಳುಹಿಸಿದಂತಾಗುತ್ತದೆ. ಪ್ಯಾನಿಕ್ ಬಟನ್ ಒತ್ತುವುದನ್ನು ತಪ್ಪಿಸಲು ಇನ್ನೂ ಸಮಯವಿದೆ; ನಮ್ಮ ಪ್ರಮುಖ ಆಟಗಾರರನ್ನು ದುರ್ಬಲಗೊಳಿಸುವ ಬದಲು ಅವರನ್ನು ರಕ್ಷಿಸಲು ನಾವು ಗಮನಹರಿಸಬೇಕು” ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಪಾಕ್ ಆಯ್ಕೆ ಸಮಿತಿ ಮೂಲಗಳು ಫಖರ್ ಅವರ ಧ್ವನಿಯನ್ನು ವಿವಾದ ರೂಪದಲ್ಲಿ ಪರಿಗಣಿಸಿವೆ. ಹೊಸದಾಗಿ ಸೇರ್ಪಡೆಗೊಂಡ ಆಯ್ಕೆಗಾರರಲ್ಲಿ ಒಬ್ಬರಾದ ಮಾಜಿ ನಾಯಕ ಅಜರ್ ಅಲಿ ಶನಿವಾರ ಬಾಬರ್ ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದಾರೆ ಮತ್ತು ಎರಡು ಟೆಸ್ಟ್‌ಗಳಿಗೆ ಅವರಿಗೆ ವಿಶ್ರಾಂತಿ ನೀಡುವ ನಿರ್ಧಾರವನ್ನು ಅವರಿಗೆ ವಿವರಿಸಿದ್ದಾರೆ ಎಂದು ಹೇಳಿದೆ.
“ಪಾಕಿಸ್ಥಾನ ಕ್ರಿಕೆಟ್‌ನ ಭವಿಷ್ಯ ಮತ್ತು ಯೋಜನೆಯಲ್ಲಿ ಅವರು ಅವಿಭಾಜ್ಯ ಅಂಗವಾಗಿ ಉಳಿದಿದ್ದಾರೆ” ಎಂದು ಬಾಬರ್ ಅವರಿಗೆ ಅಜರ್ ಸ್ಪಷ್ಟಪಡಿಸಿದ್ದಾರೆ” ಎಂದು ಮೂಲಗಳು ತಿಳಿಸಿವೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ಥಾನ ಹೀನಾಯವಾಗಿ ಸೋತ ನಂತರ ಏಕಾಏಕಿ ಬಾಬರ್ ಅಜಂ ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರ ಪಾಕ್ ಕ್ರಿಕೆಟ್ ನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.