ದುಬೈ: ನಿಮ್ಮ ತಂಡ ಟ್ರೋಫಿ ಗೆಲ್ಲದಿದ್ದರೆ, ನೀವು ಗಳಿಸುವ ರನ್ ಗಳು, ಶತಕಗಳಿಗೆ ಯಾವುದೇ ಅರ್ಥವಿರುವುದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದರು.
ಐಸಿಸಿ ಮಾಧ್ಯಮಕ್ಕೆ ಮಾತನಾಡಿದ ರೋಹಿತ್, 2016ರಿಂದ ಇಲ್ಲಿಯವರೆಗೆ ನಾನು ಬಹಳ ಅನುಭವಗಳಿಂದ ಕಲಿತಿದ್ದೇನೆ. ಓರ್ವ ಬ್ಯಾಟ್ಸಮನ್ ಆಗಿ ಬಹಳಷ್ಟು ಮಾಗಿದ್ದೇನೆ. ಆಟದ ಬಗ್ಗೆ ತಿಳುವಳಿಕೆ, ತಂಡಕ್ಕೆ ಏನು ಬೇಕು ಎಂದು ಅರಿತಿದ್ದೇನೆ. ಯಾಕೆಂದರೆ ಯಾವಾಗಲೂ ವೈಯಕ್ತಿಕ ಆಟಕ್ಕಿಂತ ತಂಡದ ಹಿತ ಮೊದಲು. ಆ ಸಮಯದಲ್ಲಿ ತಂಡಕ್ಕೆ ಏನು ಬೇಕು ಎಂದು ನೋಡಬೇಕು. ಈಗ ನಾನು ಒಂದು ಕ್ಷಣ ಈ ಹಂತದಲ್ಲಿ ತಂಡಕ್ಕೆ ಇದು ಅಗತ್ಯವಿದೆಯೇ ಎಂದು ಯೋಚಿಸಿ ನಾನು ಶಾಟ್ ಆಡಲು ಹೋಗುತ್ತಿದ್ದೇನೆ” ಎಂದು ಹೇಳಿದರು.
ಇದನ್ನೂ ಓದಿ:ಅಫ್ಘಾನಿಸ್ಥಾನ ವಿರುದ್ಧದ ಟೆಸ್ಟ್ ಪಂದ್ಯವನ್ನು ಮುಂದೂಡಿದ ಕ್ರಿಕೆಟ್ ಆಸ್ಟ್ರೇಲಿಯಾ
” ನೀವು ಇನ್ನಿಂಗ್ಸ್ ಪ್ರಾರಂಭಿಸಿದಾಗ ಗರಿಷ್ಠ ಎಸೆತಗಳನ್ನು ಎದುರಿಸಲು ನಿಮಗೆ ಉತ್ತಮ ಅವಕಾಶವಿದೆ. ಸಾಧ್ಯವಾದಷ್ಟು ಹೆಚ್ಚು ರನ್ ಗಳಿಸಲು ಅವಕಾಶ ಇರುತ್ತದೆ. ಆದ್ದರಿಂದ ಅಗ್ರ ಮೂರು ಬ್ಯಾಟರ್‌ಗಳು ಟಿ20 ಕ್ರಿಕೆಟ್ ನಲ್ಲಿ ಹೆಚ್ಚು ಶತಕಗಳನ್ನು ಬಾರಿಸುವುದನ್ನು ನೀವು ನೋಡುತ್ತೀರಿ. ನನ್ನ ಕೆಲಸವೂ ಅದೇ” ಎಂದು ರೋಹಿತ್ ಹೇಳಿದರು.
ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಮೊದಲೆರಡು ಪಂದ್ಯಗಳನ್ನು ಸೋತು ಸೆಮಿ ಫೈನಲ್ ರೇಸಿನಿಂದ ಬಹಳ ದೂರವಿದೆ. ಇಂದು ಸ್ಕಾಟ್ಲೆಂಡ್ ವಿರುದ್ಧ ನಾಲ್ಕನೇ ಪಂದ್ಯವನ್ನು ಟೀಂ ಇಂಡಿಯಾ ಆಡಲಿದೆ.