Advertisement
ನೆಹರು ಮೈದಾನದಲ್ಲಿ ಶನಿವಾರ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಬೇಕೆಂದು ಸರಕಾರವನ್ನು ಒತ್ತಾಯಿಸಲು ಹಮ್ಮಿಕೊಂಡಿದ್ದ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ಮಾತನಾಡಿ, ಸುಮಾರು 28 ವರ್ಷಗಳ ಹೋರಾಟ ಇದಾಗಿದೆ. ಮೀಸಲಾತಿಗಾಗಿ ಅಂದಿನಿಂದ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಪಂಚಮಸಾಲಿ ಸಮಾಜದಿಂದಲೇ ಬಹುತೇಕರು ರಾಜಕಾರಣ ಮಾಡುತ್ತಿದ್ದು, ಈ ಬಾರಿ ಮೀಸಲಾತಿ ನೀಡದಿದ್ದಲ್ಲಿ ಅವರೆಲ್ಲರೂ ಪಲ್ಟಿ ಹೊಡೆಯುವುದು ಶತಸಿದ್ಧ ಎಂದರು.
ನಂತರ ನೆಹರೂ ಮೈದಾನದಿಂದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಕಾಲ ವೃತ್ತ ಬಂದ್ ಮಾಡಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್. ಎಸ್. ಶಿವಶಂಕರ ಮಾತನಾಡಿ, ರಾಜಕಾರಣಿಗಳು ಅಧಿಕಾರಕ್ಕಾಗಿ, ಸಂಘ ಸಂಸ್ಥೆಗಳು ಸೌಲಭ್ಯಕ್ಕಾಗಿ ಹೋರಾಟ ನಡೆಸಿದರೆ ಶ್ರೀಗಳು ಹಗಲು ರಾತ್ರಿ ಎನ್ನದೇ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನಮ್ಮ ಮಕ್ಕಳಿಗಾಗಿ ಈ ಹೋರಾಟ ಎಂಬುದನ್ನು ಮರೆಯಬಾರದು. ನಮ್ಮ ಹೋರಾಟ ಹತ್ತಿಕ್ಕಲು ಹಲವು ರೀತಿಯ ಪ್ರಯತ್ನ ಮಾಡಿದರು. ಹಲವು ಪೀಠ ಮಾಡಿದರು. ಆದರೆ ಅದ್ಯಾವುದಕ್ಕೂ ನಾವು ಜಗ್ಗದೇ ಮೀಸಲಾತಿಗೆ ನಮ್ಮ ಹೋರಾಟ ನಿರಂತರ ಎಂದರು.
ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ, ಬಸವರಾಜ ಪಾಟೀಲ ಯತ್ನಾಳ ಅವರ ಪುತ್ರ ರಾಮನಗೌಡ ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ, ಶಿವಲೀಲಾ ಕುಲಕರ್ಣಿ, ವಿಜಯ ಕುಲಕರ್ಣಿ, ನಾಗರಾಜ ಗೌರಿ ಇನ್ನಿತರರು ಮಾತನಾಡಿದರು.
ಶಿವಾನಂದ ಅಂಬಡಗಟ್ಟಿ, ಶಾಸಕ ಅರವಿಂದ ಬೆಲ್ಲದ, ವೀರೇಶ ಉಂಡಿ, ಗುರುರಾಜ ಹುಣಸಿಮರದ, ಸಚಿನ ಪಾಟೀಲ, ರತ್ನವ್ವ ಕಳ್ಳಿಮನಿ, ಶಶಿಕಾಂತ ಪಡಸಲಗಿ, ಪುಟ್ಟಸ್ವಾಮಿ, ದೀಪಾ ಗೌರಿ, ನಾಗರಾಜ ಗೌರಿ, ರಾಜಶೇಖರ ಮೆಣಸಿನಕಾಯಿ, ನಂದಕುಮಾರ ಇನ್ನಿತರರಿದ್ದರು.