ನವದೆಹಲಿ: ನೀಟ್-ಪರೀಕ್ಷೆಯನ್ನು ರದ್ದು ಮಾಡಿದರೆ ಅದು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಸಾರ್ವಜನಿಕ ಹಿತಾಸಕ್ತಿಗೆ ಭಾರೀ ಧಕ್ಕೆಯಾಗಲಿದೆ. ವಿಶೇಷವಾಗಿ ಪರೀಕ್ಷೆಯನ್ನು ಪಾಸು ಮಾಡಿದವರ ಮೇಲೆ ಪರಿಣಾಮ ಬೀರಲಿದೆ ಎಂದು ರಾಷ್ಟ್ರೀಯ ಪರೀಕ್ಷೆ ಸಂಸ್ಥೆ (ಎನ್ ಟಿಎ) ಸುಪ್ರೀಂ ಕೋರ್ಟ್‌ಗೆ ಹೇಳಿದೆ.
ಇದನ್ನೂ ಓದಿ:BSP ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣ; 8 ಶಂಕಿತರನ್ನು ಬಂಧಿಸಿದ ತಮಿಳುನಾಡು ಪೊಲೀಸ್
ಈ ಬಗ್ಗೆ ಅಫಿಡವಿಟ್ ಸಲ್ಲಿಸಿದ ಎನ್ ಟಿಎ, ಪ್ರಸಕ್ತ ಸಾಲಿನ ನೀಟ್-ಯುಜಿ ಪರೀಕ್ಷೆ ಸಂಪೂರ್ಣ ನ್ಯಾಯಸಮ್ಮತವಾಗಿ ನಡೆಸಲಾ ಗಿದೆ. ಯಾವುದೇ ಅಕ್ರಮಕ್ಕೆ ಅವಕಾಶ ಕಲ್ಪಿಸ ಲಿಲ್ಲ. ಸಾಮೂಹಿಕ ನಕಲು ಆರೋಪ ನಿರಾಧಾರವಾಗಿದ್ದು, ತಪ್ಪು ದಾರಿಗೆಳೆಯುವ ಆರೋಪವಾಗಿದೆ ಎಂದು ಹೇಳಿದೆ.
ಆ.11ಕ್ಕೆ ನೀಟ್-ಪಿಜಿ ಪರೀಕ್ಷೆ: ಹೊಸ ದಿನಾಂಕ ನೀಟ್-ಪಿಜಿ ಪರೀಕ್ಷೆಗಳನ್ನು 2 ಪಾಳಿಗಳಲ್ಲಿ ಆ.11ರಂದು ನಡೆಸುವುದಾಗಿ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೆಳಿದೆ.
ಈ ಹಿಂದೆ ಜೂ.23ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ನೀಟ್ -ಯುಜಿ ಹಗರಣದ ಹಿನ್ನೆಲೆಯಲ್ಲಿ ಪರೀಕ್ಷೆ
ಮುಂದೂಡಲಾಗಿತ್ತು.