Advertisement

ಮಾತೃಭಾಷೆ ಪಕ್ಕಾ ಬಂದರೆ ಶೇ.40 ಸಂಸ್ಕೃತ ಕಲಿತಂತೆ: ಭಾಗವತ್‌

08:10 PM Apr 23, 2023 | Team Udayavani |

ಸಬರ್ಖಂಥ (ಗುಜರಾತ್‌): ಮಾತೃಭಾಷೆಯನ್ನು ಸರಿಯಾಗಿ ಕಲಿತರೆ ಶೇ.40ರಷ್ಟು ಸಂಸ್ಕೃತವನ್ನು ಕಲಿತಂತೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದ್ದಾರೆ. ಯಾಜ್ಞವಲ್ಕ್ಯ ವೇದತಣ್ತೀಜ್ಞಾನ ಯೋಗಾಶ್ರಮ ಟ್ರಸ್ಟ್‌ ಗುಜರಾತ್‌ನ ಸಬರ್ಖಂಥ ಜಿಲ್ಲೆಯ ಮುದೆತಿ ಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

“ಭಾರತ ವಿಶ್ವಗುರು ಆಗಬೇಕಾದರೆ ವೇದ ಮತ್ತು ಸಂಸ್ಕೃತದ ಜ್ಞಾನ ಅಗತ್ಯ. ಭಾರತೀಯ ಸಂಸ್ಕೃತಿ ಕರ್ಮಠವಲ್ಲ, ಕಾಲಕಾಲಕ್ಕೆ ಬದಲಾಗಿದೆ. ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನೇ ಚರ್ಚಿಸುವ ವ್ಯವಸ್ಥೆಯಲ್ಲ. ಅಮೆರಿಕ, ರಷ್ಯಾ, ಚೀನಾದಂತೆ ಅಧಿಕಾರದಾಹಿ ಸೂಪರ್‌ ಪವರ್‌ ಆಗುವುದು ಭಾರತದ ಗುರಿಯಲ್ಲ. ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲ, ಶಾಂತಿಯ ಮಾರ್ಗ ತೋರಬಲ್ಲ ಗುರು ಆಗಬೇಕು” ಎಂದು ಭಾಗವತ್‌ ಹೇಳಿದರು.

ಇದಕ್ಕಾಗಿಯೇ ವೇದವನ್ನು ಅರಿಯಬೇಕಾಗಿದೆ. ವೇದಜ್ಞಾನ ಸಂಸ್ಕೃತದಲ್ಲಿದೆ. ಆದ್ದರಿಂದಲೇ ಈ ಭಾಷೆಯನ್ನು ಕಲಿಯಬೇಕು. ಮಾತೃಭಾಷೆ ಕಲಿತರೆ ಶೇ.40 ಸಂಸ್ಕೃತ ಬಂದಂತೆ ಎಂದು ಭಾಗವತ್‌ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next