Advertisement
ನಗರದ ಬೆಸೆಂಟ್ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ನವಸಂಕಲ್ಪ ಚಿಂತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕಾಂಗ್ರೆಸ್ ಪಕ್ಷದಿಂದ ಜಾರಿಯಾಗಿತ್ತು.
ಪಕ್ಷದ ಅಂತರಿಕ ವಿಚಾರವಾಗಿದೆ ಎಂದರು.
Related Articles
Advertisement
ವೃಷಭಾವತಿ ನದಿ ಯೋಜನೆ ಮೀನಮೇಷ: ಭೂಮಿ ಕಳೆದುಕೊಂಡ ಯುವಕರಿಗೆ ಉದ್ಯೋಗ ನೀಡಬೇಕು. ಸೂಕ್ತ ತರಬೇತಿಗಳನ್ನು ನೀಡಬೇಕು. ವೃತ್ತಿ ಶಿಕ್ಷಣಕ್ಕೆ ಪ್ರವೇಶ ಪಡೆಯವ ಸಿಇಟಿ ದುರ್ಬಲಗೊಳಿ ಸಲಾಗುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವಂತಾಗಬೇಕು. ರೈತರು ಎದುರಿ ಸುತ್ತಿರುವ ಸವಾಲುಗಳು ಕುರಿಂತೆ ಎತ್ತಿನಹೊಳೆ ಯೋಜನೆ ವಿಳಂಬವಾಗುತ್ತಿದ್ದು, ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಇರುವ ತೊಡಕು ಸರಿಪಡಿಸಬೇಕಿದೆ.
ವೃಷಭಾವತಿ ನದಿ ಯೋಜನೆ ಮೀನಮೇಷ ಎಣಿಸುತ್ತಿರುವುದು ಖಂಡನೀಯ. ರೈತರ ಹೈನುಗಾರಿಕೆಗೆ ಪ್ರೋತ್ಸಾಹ ಧನ, ಎಲ್ಲಾ ವರ್ಗದ ರೈತರಿಂದ ರಾಗಿ ಖರೀದಿ, ಬೆಳೆ ನಷ್ಟ ಪರಿಹಾರ ಹೆಚ್ಚಳ, ಪಿಎಂ ಕಿಸಾನ್ ಸಹಾಯಧನ ಹೆಚ್ಚಳ, ಸಹಕಾರಿ ವ್ಯವಸ್ಥೆ ಬಲಪಡುಸುವಂತೆ ಒತ್ತಾಯಿಸಲಾಗುತ್ತಿದೆ ಎಂದರು.
ಸರ್ಕಾರದ ವೈಫಲ್ಯದ ಬಗ್ಗೆ ಹೋರಾಟ: ಮಹಿಳಾ ಸಬಲೀಕರಣ ಕುರಿತಂತೆ, ಮಹಿಳಾ ಲಿಂಗ ತಾರತಮ್ಯ ಅಸಮಾನತೆ ಹೋಗಬೇಕು. ಆಶಾ ಕಾರ್ಯಕರ್ತೆಯರಿಗೆ ಉದ್ಯೋಗ ಭದ್ರತೆ, ಮಹಿಳೆಯರ ಸ್ವಾವಲಂಭನೆಗೆ ಪೂರಕ ಕಾರ್ಯಕ್ರಮ ರೂಪಿಸಬೇಕಿದೆ. ಹಿಂದುಳಿದ ವರ್ಗ, ಪ.ಜಾತಿ, ಪಂಗಡಗಳಿಗೆ ಸಾಮಾಜಿಕ ನ್ಯಾಯ ದೊರಕಬೇಕು. ಮುಂದೆ ನಮ್ಮ ಸರ್ಕಾರ ಬಂದಾಗ ಈ ಯೋಜನೆ ಜಾರಿಗೆ ತರಲಾಗುವುದು. ಈಗ ಸರ್ಕಾರದ ವೈಫಲ್ಯದ ಬಗ್ಗೆ ಹೋರಾಟ ನಡೆಸಲಾಗುವುದು ಎಂದರು.
ಗುಂಪು ಚರ್ಚೆಗಳಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಶಾಸಕ ಟಿ.ವೆಂಕಟರಮಣಯ್ಯ, ಶರತ್ ಬಚ್ಚೇಗೌಡ, ಮಾಜಿ ಸಚಿವ ಅಂಜನಾಮೂರ್ತಿ, ಮಾಜಿ ಶಾಸಕ ವೆಂಕಟಸ್ವಾಮಿ, ಕೆಪಿಸಿಸಿ ಸದಸ್ಯ ಜಿ. ಲಕ್ಷ್ಮೀಪತಿ, ಮುಖಂಡ ಚೆಲುವರಾಜು, ವಿ.ಮಂಜುನಾಥ್, ಕೆ.ಆರ್.ನಾಗೇಶ್, ಲೋಕೇಶ್, ಮುನಿ ನರಸಿಂಹಯ್ಯ, ಚೇತನ ಗೌಡ, ವಿ.ಪ್ರಸಾದ್, ತಿರುವರಂಗ ನಾರಾಯಣ ಸ್ವಾಮಿ, ಕಮಲಾಕ್ಷಿ ರಾಜಣ್ಣ, ರೇವತಿ ಅನಂತರಾಮ್ ಹಾಗೂ ಮತ್ತಿತರರು ಇದ್ದರು.
ಗೆದ್ದ ಎತ್ತಿನ ಬಾಲ ಹಿಡಿಯುವ ಜೆಡಿಎಸ್ಜೆಡಿಎಸ್ ಪಕ್ಷದವರು ಗೆದ್ದೆತ್ತಿನ ಬಾಲ ಹಿಡಿಯುವವರು. ಅವರ ಬಗ್ಗೆ ಹುಷಾರಾಗಿರಬೇಕು. ಜನವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಹಾಗೂ ರಾಜ್ಯದಲ್ಲಿ ಜಾತಿ ಧರ್ಮಗಳ ಮಧ್ಯ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತೂಗೆಯಬೇಕು. ಕಾಂಗ್ರೆಸ್ ಆಡಳಿತದ ಸರ್ಕಾರದಲ್ಲಿ ರೂಪಿಸಿದ ಜನಕಲ್ಯಾಣ ಕಾರ್ಯ ಕ್ರಮ, ಅದಕ್ಕಾಗಿ ಬಿಡುಗಡೆ ಮಾಡಿದ ಅನುದಾನ, ವ್ಯಯಿಸಿದ ಖರ್ಚುಗಳ ಮಾಹಿತಿ ನೀಡಿ ಕಾರ್ಯಕರ್ತರು ಜನರಿಗೆ ಕಾಂಗ್ರೆಸ್ ಸಾಧನೆ ಮುಟ್ಟಿಸ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.