Advertisement

ಚುಡಾಯಿಸಿದರೆ ಬೀಳುತ್ತೇ ಕೇಸ್‌

09:14 PM Aug 02, 2019 | Team Udayavani |

ಚಿಕ್ಕಬಳ್ಳಾಪುರ: ನಗರದ ಪ್ರಮುಖ ರಸ್ತೆಗಳು, ಶಾಲಾ- ಕಾಲೇಜುಗಳ ಆವರಣ, ಬಸ್‌ ನಿಲ್ದಾಣ, ಉದ್ಯಾನ, ಚಿತ್ರಮಂದಿರ ಸೇರಿದಂತೆ ಹೆಣ್ಣುಮಕ್ಕಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ, ಕಿರುಕುಳ ನೀಡುವ ಪುಂಡು ಪೋಕಿರಿಗಳ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಿ, ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ರಚಿಸಿರುವ ಓಬವ್ವ ಪಡೆಗೆ ಜಿಲ್ಲಾ ಕೇಂದ್ರದಲ್ಲಿ ಚಾಲನೆ ಸಿಕ್ಕಿದೆ.

Advertisement

ನಗರದ ಜೂನಿಯರ್‌ ಕಾಲೇಜು ಆವರಣದಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್‌ಪಿ ಪ್ರಭುಶಂಕರ್‌, ಓಬವ್ವ ಪಡೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಓಬವ್ವ ಪಡೆ, ಇನ್ಮೆàಲೆ ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ತರಬೇತಿ: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಅವುಗಳನ್ನು ತಡೆಗಟ್ಟಲು ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ರಕ್ಷಣೆಗಾಗಿ ಜಿಲ್ಲಾದ್ಯಂತ ಇಲಾಖೆ ಓಬವ್ವ ಪಡೆಗಳನ್ನು ರಚಿಸಿ ಸೂಕ್ತ ತರಬೇತಿ ಸಹ ನೀಡಲಾಗಿದೆ ಎಂದು ತಿಳಿಸಿದರು.

ಮಾಹಿತಿ ನೀಡಿ: ವಿದ್ಯಾರ್ಥಿನಿಯರು ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡಬಾರದು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಶಿಕ್ಷಕರು ಇಲ್ಲವೇ ಹತ್ತಿರದ ಪೊಲೀಸ್‌ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಇದರಿಂದ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಹೆಣ್ಣುಮಕ್ಕಳನ್ನು ಕಾಪಾಡುವ ಹೊಣೆ ಪೊಲೀಸ್‌ ಇಲಾಖೆಗೆ ಮಾತ್ರ ಸೇರಿಲ್ಲ. ಕುಟುಂಬ, ಶಾಲೆಗಳ ಮೇಲೂ ಇದೆ. ಈ ನಿಟ್ಟಿನಲ್ಲಿ ಓಬವ್ವ ಪಡೆ ಹೆಣ್ಣು ಮಕ್ಕಳ ಮೇಲೆ ನಡೆಯುವ ಎಲ್ಲಾ ತರದ ದೌರ್ಜನ್ಯಗಳನ್ನು ತಡೆಯಲು ಕಾರ್ಯನಿರ್ವಹಿಸಲಿದೆ.

ಸಾರ್ವಜನಿಕರು ಓಬವ್ವ ಪಡೆಯನ್ನು ಸಂಪರ್ಕಿಸಲು 9742226531, 8156272262 ಕಂಟೊ›àಲ್‌ ರೂಂ 08156 262600, 272262 ಈ ಸಂಖ್ಯೆಗಳಿಗೆ ಕರೆ ಮಾಡಿ ನೆರವು ಪಡೆಯಬಹುದು ಎಂದು ತಿಳಿಸಿದರು.

Advertisement

ಕಾನೂನು ಪಾಠ: ಚಿಕ್ಕಬಳ್ಳಾಪುರ ನಗರ ಠಾಣೆ ಪಿಎಸ್‌ಐ ವರುಣ್‌ ಕುಮಾರ್‌ ಮಾತನಾಡಿ, ಪೊಲೀಸ್‌ ಇಲಾಖೆ ರಚಿಸಿರುವ ಓಬವ್ವ ಪಡೆ ಸಿಬ್ಬಂದಿ ಮಹಿಳಾ ಕಾನೂನುಗಳ ಬಗ್ಗೆ ಸಾರ್ವಜನಿಕರ ಜತೆಗೆ ಶಾಲೆ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸುವ ಕೆಲಸ ಮಾಡಲಿ¨ªಾರೆ. ಮಕ್ಕಳು, ಯುವತಿಯರು ಹಾಗೂ ಮಹಿಳೆಯರಿಗೆ ಯಾವ ರೀತಿಯ ಅಪಾಯಗಳು ಎದುರಾಗುತ್ತವೆ ಮತ್ತು ದೌರ್ಜನ್ಯ ಎಸಗಲು ಬರುವವರಿಂದ ತಪ್ಪಿಸಿಕೊಳ್ಳುವ ರೀತಿ ಹಾಗೂ ಅವರನ್ನು ಮಣಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಿದೆ ಎಂದು ತಿಳಿಸಿದರು.

ಓಬವ್ವ ಪಡೆಯು ನಗರದ ಮುಖ್ಯ ರಸ್ತೆಗಳಲ್ಲಿ ನಿರಂತರವಾಗಿ ಗಸ್ತು ತಿರುಗಲಿದೆ. ಓಬವ್ವ ಪಡೆ ವಾಹನದಲ್ಲಿ 5 ಮಹಿಳಾ ಪೊಲೀಸ್‌ ಪೇದೆಗಳು, ಒಬ್ಬ ಪುರುಷ ಸಹಾಯಕ ಸಿಬ್ಬಂದಿ ಇರುತ್ತಾರೆ. ವಿಶೇಷ ತರಬೇತಿ ಪಡೆದಿರುವ ಮಹಿಳಾ ಪೇದೆಗಳು ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳ ಕುರಿತು ವಿಶೇಷ ತಿಳುವಳಿಕೆ ಹೊಂದಿದ್ದಾರೆ.
-ವರುಣ್‌ ಕುಮಾರ್‌, ಪಿಎಸ್‌ಐ, ಚಿಕ್ಕಬಳ್ಳಾಪುರ ನಗರ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next