Advertisement

ಬಿಲ್‌ ಕೊಡದಿದ್ದರೆ, ಹಣ ಕೊಡಬೇಡಿ

12:30 AM Jan 05, 2019 | Team Udayavani |

ಹೊಸದಿಲ್ಲಿ: “ದಯವಿಟ್ಟು ಟಿಪ್ಸ್‌ ಕೊಡಬೇಡಿ, ನಿಮ್ಮ ಊಟಕ್ಕೆ ಬಿಲ್‌ ನೀಡದಿದ್ದರೆ, ಅದಕ್ಕೆ ಹಣವನ್ನೂ ಪಾವತಿಸಬೇಡಿ.’  ಮಾರ್ಚ್‌ ತಿಂಗಳಿಂದ ಇಂಥದ್ದೊಂದು ಫ‌ಲಕವನ್ನು ನೀವು ರೈಲುಗಳಲ್ಲಿ ಕಾಣಬಹುದು. ಹೀಗೆಂದು ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ಮಾಹಿತಿ ನೀಡಿದ್ದಾರೆ. ಕೆಟರಿಂಗ್‌ ಸೇವೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಎಲ್ಲ ವಲಯಗಳಿಗೂ ಸುತ್ತೋಲೆ ಕಳುಹಿ ಸಲಾಗಿದೆ. ಅದರಂತೆ, ಮಾರ್ಚ್‌ನಿಂದ ರೈಲುಗಳೊಳಗೆ ಈ ರೀತಿಯ ಬೋರ್ಡ್‌ ಮತ್ತು ಪಕ್ಕದಲ್ಲೇ ಮೆನುವಿನ ದರ ಪಟ್ಟಿಯನ್ನು ಅಳವಡಿಸಲಾಗುತ್ತದೆ.

Advertisement

ಉನ್ನತ ಮಟ್ಟದ ಅಧಿಕಾರಿಗಳ ಜತೆ ನಡೆದ ಸಭೆಯ ಬಳಿಕ ಗೋಯೆಲ್‌ ಈ ಮಾಹಿತಿ ನೀಡಿದ್ದಾರೆ. ಅಲ್ಲದೆ, ಪ್ರಸಕ್ತ ತಿಂಗಳಾಂತ್ಯದೊಳಗೆ ಪ್ರಯಾಣಿಕರ ಅನುಕೂಲತೆ ಗಾಗಿ ಭದ್ರತೆ ಹೊರತಾದ ದೂರುಗಳನ್ನು ನೀಡಲು ಒಂದೇ ಸಹಾಯವಾಣಿ ಸಂಖ್ಯೆಯನ್ನು ಪರಿಚಯಿಸಲೂ ನಿರ್ಧರಿಸಲಾಗಿದೆ. ಸದ್ಯ 723 ನಿಲ್ದಾಣಗಳಲ್ಲಿ ವೈಫೈ ಇದ್ದು, ಇದನ್ನು 2000 ನಿಲ್ದಾಣಗಳಿಗೆ ವಿಸ್ತರಿಸಲು ನಿರ್ಧರಿ ಸಲಾಗಿದೆ. ಯಾರು ಈ ಕಾರ್ಯವನ್ನು ಬೇಗನೆ ಪೂರ್ಣ ಗೊಳಿಸುತ್ತಾರೋ ಅಂಥ ವಿಭಾಗೀಯ ರೈಲ್ವೆ ಮ್ಯಾನೇ ಜರ್‌ಗೆ ಬಹುಮಾನ ನೀಡಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next