Advertisement
ಸೋಲುವ ಭೀತಿಒಂದು ವೇಳೆ 2,000 ಕೋ.ರೂ. ಅನುದಾನ ತಂದು ನಂ. 1 ಶಾಸಕರಾಗಿರುವುದು ಹೌದಾದರೆ ಇನ್ನೊಂದು ಪಕ್ಷದ ಬಾಗಿಲು ಬಡಿಯುವ ಸ್ಥಿತಿ ಅವರಿಗೆ ಏಕೆ ಬಂತು? ತಾನು ಸೋಲುತ್ತೇನೆ ಎಂಬುದು ಅವರಿಗೆ ಗೊತ್ತಾಗಿದೆ. ಅದಕ್ಕಾಗಿ ಬಾಗಿಲು ಬಡಿಯುತ್ತಿರಬಹುದು. ನಾನು ಅವರನ್ನು ತಡೆದಿಲ್ಲ. ಒಂದು ವೇಳೆ ಮಾಜಿಗಳು ಅವರನ್ನು ತಡೆಯುತ್ತಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದರೆ ಮಾಜಿ ಶಾಸಕರಾದ ಯು.ಆರ್. ಸಭಾಪತಿ ಮತ್ತು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಮನೋರಮಾ ಮಧ್ವರಾಜ್ ಅವರನ್ನು ಕೇಳಲಿ ಎಂದು ಭಟ್ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಕಾರ್ಯಕರ್ತರ ಬಳಿಯಲ್ಲಿ ಒಂದು ರೀತಿಯ ಹೇಳಿಕೆ, ಮಾಧ್ಯಮದವರ ಬಳಿ ಇನ್ನೊಂದು ರೀತಿಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರು ಕಾಂಗ್ರೆಸ್, ಬಿಜೆಪಿ ಮತ್ತು ಜನರಿಗೂ ಮೋಸ ಮಾಡುತ್ತಿದ್ದಾರೆ. ಅವರು ಬಿಜೆಪಿಗೆ ಬಂದು ಬಿಜೆಪಿಗೆ ಏನೂ ಆಗಬೇಕಾಗಿಲ್ಲ. ಅವರನ್ನು ಸೋಲಿಸಲು ಬಿಜೆಪಿ ಕಾರ್ಯಕರ್ತರು ಇದ್ದಾರೆ ಎಂದರು. ತರುವ ಪ್ರಯತ್ನವೂ ಇಲ್ಲ, ತಡೆಯೂ ಇಲ್ಲ
ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಪ್ರತಿಕ್ರಿಯಿಸಿ, ನಾವು ಸಚಿವ ಪ್ರಮೋದ್ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನವನ್ನೂ ಮಾಡಿಲ್ಲ, ಬರುವುದಾದರೆ ತಡೆಯುವುದೂ ಇಲ್ಲ. ಆದರೆ ಅವರು ಅವರ ಕಾಂಗ್ರೆಸ್ ಪಕ್ಷಕ್ಕೆ ಗರಿಷ್ಠ ನಷ್ಟ ಉಂಟು ಮಾಡುತ್ತಿದ್ದಾರೆ. ನಾನು ಒಂದು ವೇಳೆ ಕೆಪಿಸಿಸಿ ಅಧ್ಯಕ್ಷನಾಗಿದ್ದರೆ ಅವರನ್ನು ಜೀವಿತಾವಧಿ ಕಾಲಕ್ಕೆ ಪಕ್ಷದಿಂದ ತೆಗೆದುಹಾಕುತ್ತಿದ್ದೆ ಎಂದು ಹೇಳಿದರು. ಪಕ್ಷದ ಮುಖಂಡರಾದ ಪ್ರಭಾಕರ ಪೂಜಾರಿ, ಉಪೇಂದ್ರ ನಾಯಕ್, ಶ್ರೀಶ ನಾಯಕ್, ಗಿರೀಶ್ ಅಂಚನ್, ಅಕ್ಷಿತ್ ಶೆಟ್ಟಿ, ಕಪ್ಪೆಟ್ಟು ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.