Advertisement
ನವರಾತ್ರಿ ಸಂದರ್ಭ ನಡೆಸಿದ “ನವರೂಪ’ ಅದೃಷ್ಟಶಾಲಿ ಬಂಪರ್ ಬಹುಮಾನ ವಿಜೇತರಿಗೆ ಶನಿವಾರ ಮಣಿಪಾಲದ ಪ್ರಧಾನ ಕಚೇರಿಯಲ್ಲಿ ಜರಗಿದ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹೊಸ ಪರಿಕಲ್ಪನೆಯ ಮೂಲಕ ಆಯೋಜಿಸಲ್ಪಟ್ಟ ಈ ಸ್ಪರ್ಧೆಯಿಂದ ನಮ್ಮ ಸಂಸ್ಕೃತಿಯೊಂದಿಗೆ ಮಹಿಳೆಯರಲ್ಲಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ಕೈಂಕರ್ಯವನ್ನು “ಉದಯವಾಣಿ’ ಮಾಡಿಕೊಂಡು ಬಂದಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಮುಂದಿನ ವರ್ಷ ಇನ್ನೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಯಶಸ್ಸುಗೊಳಿಸಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದರು.
Related Articles
Advertisement
ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ.ನ ಎಚ್‌ಆರ್ ವಿಭಾಗದ ಸೀನಿಯರ್ ಮ್ಯಾನೇಜರ್ ಉಷಾರಾಣಿ ಕಾಮತ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸ್ಥಾನಿಕ ಸಂಪಾದಕ ಕೃಷ್ಣ ಭಟ್ ಅಳದಂಗಡಿ ವಂದಿಸಿದರು.
ಬಂಪರ್ ಬಹುಮಾನ ವಿಜೇತರುದಿವ್ಯಾ ಮತ್ತು ಬಳಗ ಕೊಟ್ಟಾರ, ವಂದನಾ ಮತ್ತು ಬಳಗ ಬಂಟಕಲ್ಲು, ವೀರ ಮಾರುತಿ ಭಜನ ಮಂದಿರದ ಸದಸ್ಯೆಯರು ಮಡಿಕಲ್ ಉಪ್ಪುಂದ. ಸ್ಪರ್ಧಾತ್ಮಕತೆ ಬೆಳೆಸಿತು
“ಬಹುಮಾನ ಲಭಿಸಿದ್ದು ನಮಗೂ ನಮ್ಮ ಊರಿನವರಿಗೂ ಅತ್ಯಂತ ಖುಷಿ ತಂದಿದೆ. ನಮ್ಮ ಅದೆಷ್ಟೋ ಸ್ನೇಹಿತರು ಮುಂದಿನ ವರ್ಷ ನಾವೂ ಸ್ಪರ್ಧೆಯಲ್ಲಿ ಭಾಗವಹಿಸುತ್ತೇವೆ ಎನ್ನುವುದರ ಮಟ್ಟಿಗೆ ನವರೂಪ ಸ್ಪರ್ಧೆ ಎಲ್ಲರ ಮೇಲೆ ಪ್ರಭಾವ ಬೀರಿದೆ. “ಉದಯವಾಣಿ’ ಆಯೋಜನೆಯ ಈ ಸ್ಪರ್ಧೆಯಿಂದ ನಮ್ಮಂತಹ ಅದೆಷ್ಟೋ ಮಹಿಳೆ ಯರಿಗೆ ಸ್ಪರ್ಧಾತ್ಮಕ ಸಮಾಜಕ್ಕೆ ತೆರೆದುಕೊಳ್ಳಲು ಅನುವು ಮಾಡಿದೆ.” -ಮುಕ್ತಾ, ಮಡಿಕಲ್ ಉಪ್ಪುಂದ ಸಂಭ್ರಮ ಹೆಚ್ಚಿಸಿದ ಬಹುಮಾನ
“ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸುವುದು ವಿರಳ. ಆದರೆ ಅಪಾರ್ಟ್‌ಮೆಂಟ್‌ನ ಮಹಿಳೆಯರೆಲ್ಲರೂ ಒಂದು ಗ್ರೂಪ್ ರಚಿಸಿಕೊಂಡು ಪ್ರತಿದಿನ ಫೋಟೋ ತೆಗೆದು “ಉದಯವಾಣಿ’ ಗೆ ಕಳುಹಿಸುತ್ತಿದ್ದೆವು. ಬಂಪರ್ ಬಹುಮಾನ ಲಭಿಸಬಹುದೆನ್ನುವ ಕಲ್ಪನೆ ನಮಗಿರಲಿಲ್ಲ. ಇದು ನಿಜಕ್ಕೂ ಅಚ್ಚರಿಯ ಬಹುಮಾನ.” -ದಿವ್ಯಾ, ಮಂಗಳೂರು ಇಮ್ಮಡಿಯಾದ ಖುಷಿ
“ನವರಾತ್ರಿ ಆರಂಭದ ಮೊದಲೇ ಗುಂಪು ಕಟ್ಟಿಕೊಂಡು ಸೀರೆಯೊಂದಿಗೆ ಸಿದ್ಧರಾಗಿದ್ದೆವು. ನವರಾತ್ರಿ ಸಂದರ್ಭ ಪ್ರತಿದಿನ ಫೋಟೋ ತೆಗೆಸಿ ಕಳುಹಿಸುವುದೇ ನಮಗೊಂದು ಸಂಭ್ರಮ. ಪ್ರತಿದಿನ ಒಟ್ಟಾಗಿ ಫೋಟೋ ತೆಗೆಸಿಕೊಳ್ಳುವಲ್ಲಿ ಹೆಚ್ಚು ಖುಷಿ ಪಟ್ಟಿದ್ದೇವೆ. ಬೆಳಗ್ಗೆ ಮಾಡುವ ಮೊದಲ ಕೆಲಸವೇ “ಉದಯವಾಣಿ’ ಓದುವುದು ಹಿಂದಿನಿಂದಲೂ ಬಂದ ರೂಢಿ. ಅಂತಹ ಅಗ್ರ ಪಂಕ್ತಿಯ ಪತ್ರಿಕೆ ಆಯೋಜಿಸಿದ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದು ನಿಜಕ್ಕೂ ನಮ್ಮ ಅದೃಷ್ಟ.” –ಅಶ್ವಿನಿ, ಬಂಟಕಲ್ಲು