Advertisement
ಮಂಗಳೂರಿನದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಈ ವಿಚಾರವಾಗಿ ಸರಕಾರಗಳು ಸರ್ವೋಚ್ಚ ನ್ಯಾಯಲಯದ ನಿರ್ದೇಶನವನ್ನು ಅನುಷ್ಟಾನಕ್ಕೆ ತರಬೇಕು. ದೇವಸ್ಥಾನಗಳಿಗೆ ಭಕ್ತರೇ ನೀಡಿರುವ ಸಂಪತ್ತು ಭಕ್ತರಿಗೇ ಪುನಃ ಸಿಗಬೇಕು. ಹಾಗಾದಾಗ ಮಾತ್ರ ಪ್ರತಿ ದೇವಾಲಯದಲ್ಲೂ ಶಿಕ್ಷಣ -ವೈದ್ಯಕೀಯ ಸಂಸ್ಥೆ ನಿರ್ಮಾಣ ಮಾಡಲು ಸಾಧ್ಯವಿದೆ. ಆ ಮೂಲಕ ಸಮಾಜದ ಉದ್ಧಾರವೂ ಸಾಧ್ಯವಿದೆ ಎಂದರು.
ಅಯೋಧ್ಯೆಯಲ್ಲಿ ಕಾಮಗಾರಿಗಳು ಮತ್ತೆ ಪ್ರಾರಂಭವಾಗಿವೆ. ಪ್ರಾಣ ಪ್ರತಿಷ್ಠಯ ಮರುದಿನದಿಂದಲೇ ಬೇಕಾದ ತಯಾರಿಗಳನ್ನು ಮಾಡಿಕೊಂಡು ಕಾಮಗಾರಿಯ ಮುಂದುವರಿದ ಭಾಗ ನಡೆಯುತ್ತಲೇ ಇದೆ. ನಾಲ್ಕೈದು ದಿನದ ಹಿಂದೆ ಅಯೊಧ್ಯೆಗೆ ಹೋಗಿ ಬಂದಿದ್ದೇವೆ ಎಂದರು.