Advertisement
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸರಕಾರ ರಾಜ್ಯದಲ್ಲಿ ದುರಾಡಳಿತದಲ್ಲಿ ನಿರತವಾಗಿದೆ. ಅದರ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದರು.
Related Articles
ರೈತರಿಗಾಗಿ ರಸಗೊಬ್ಬರಕ್ಕೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ಮುಂದುವರಿಕೆ ಮೂಲಕ ಕೇಂದ್ರ ಸರಕಾರ ಹೊಸ ವರ್ಷದಂದು ಕೊಡುಗೆ ನೀಡಿದೆ. ರಸಗೊಬ್ಬರದ ಮೂಲವಸ್ತು ಖನಿಜವಾದ್ದರಿಂದ ನಮ್ಮಲ್ಲಿ ಕೊರತೆ ಇದೆ, ಹಾಗಾಗಿ ರಸಗೊಬ್ಬರ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
Advertisement
ಅಲ್ಲದೆ ಬೆಳೆವಿಮೆ ಸರ್ವೆಯಲ್ಲಿ ಇರುವ ನ್ಯೂನತೆಗಳನ್ನು ಪರಿಹರಿಸಿ ತಂತ್ರಜ್ಞಾನ ಬಳಕೆ ಮಾಡಿ, ರೈತಸ್ನೇಹಿಯಾಗಿಸಲು ಕ್ರಮ ಕೈಗೊಳ್ಳಲಾಗಿದೆ, ಅದಕ್ಕಾಗಿಯೇ 824 ಕೋಟಿ ರೂ. ಮೀಸಲಿರಿಸಲಾಗಿದೆ ಎಂದೂ ತಿಳಿಸಿದರು.
ಪ್ರಿಯಾಂಕ್ ಖರ್ಗೆ ವಿರುದ್ಧ ಕಾನೂನಾತ್ಮಕ ಹೋರಾಟಸಚಿವ ಪ್ರಿಯಾಂಕ್ ಖರ್ಗೆ ಅವರಂತೂ ಎಷ್ಟು ಕೆಳಗಿಳಿಯಬಹುದೋ ಅಷ್ಟು ಕೆಳಗಿಳಿದು ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ. ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರೂ ಇದುವರೆಗೆ ಇಂತಹ ದುರಹಂಕಾರದ ಹೇಳಿಕೆ ಕೊಟ್ಟಿಲ್ಲ. ಆದರೆ ಅಹಂಕಾರ ಪ್ರಿಯಾಂಕ್ ತಲೆಗೇರಿದೆ, ಅವರಿಗೆ ಜನ ಸೂಕ್ತ ಪಾಠ ಕಲಿಸುತ್ತಾರೆ. ಅವರ ವಿರುದ್ಧ ಕಾನೂನು- ರಾಜಕೀಯ ಹೋರಾಟ ಮಾಡುತ್ತೇವೆ ಎಂದು
ಜೋಷಿ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷರ ಪದವಿಗೂ ಚುನಾವಣೆ
ಮಂಗಳೂರು : ಪ್ರಸ್ತುತ ಪಕ್ಷದಲ್ಲಿ ಬೂತ್ ಅಧ್ಯಕ್ಷರ ಆಯ್ಕೆ ಆಗಿದ್ದು, ಮಂಡಲ ಅಧ್ಯಕ್ಷರ ಚುನಾವಣೆ ಚಾಲ್ತಿಯಲ್ಲಿದೆ. ಅದೇ ರೀತಿ ಜಿಲ್ಲಾ ಅಧ್ಯಕ್ಷರು, ರಾಜ್ಯ ಅಧ್ಯಕ್ಷರ ಚುನಾವಣೆ ಕೂಡ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ. ಬಿಜೆಪಿಯೊಳಗಿನ ಬಣಗಳ ತಿಕ್ಕಾಟ, ರಾಜ್ಯಾಧ್ಯಕ್ಷರ ಬದಲಾವಣೆ, ಆಯ್ಕೆ ಇತ್ಯಾದಿ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ರಾಜ್ಯದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಇದೆ ಎಂದು ನಾನು ಹೇಳಲಾರೆ. ದೇಶಾದ್ಯಂತ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಭಾಗವಾಗಿ ರಾಜ್ಯಾಧ್ಯಕ್ಷರೂ ಸೇರಿದಂತೆ ವಿವಿಧ ಘಟಕಗಳ ಚುನಾವಣ ಪ್ರಕ್ರಿಯೆ ನಡೆಯುತ್ತಿದೆ. ಅದರಂತೆಯೇ ಇಲ್ಲೂ ನಡೆಯಲಿದೆ ಎಂದು ಹೇಳಿದರು. ಈ ಹಿಂದೆ ವಿಜಯೇಂದ್ರ ಅವರನ್ನು ಚುನಾವಣೆ ಯಲ್ಲಿ ಆಯ್ಕೆ ಮಾಡಿರಲಿಲ್ಲ, ಆಗಿನ ಪರಿಸ್ಥಿತಿಯಲ್ಲಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಈಗ ಮತ್ತೆ ಚುನಾವಣೆ ನಡೆದು ಅವರೇ ಆಯ್ಕೆಯಾಗಲೂ ಬಹುದು ಎಂದರು.
ಚುನಾವಣೆ ನಡೆಸುವುದಕ್ಕಾಗಿ ರಾಜ್ಯದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ. ನನಗೆ ಕೇರಳದ ಹೊಣೆ ಕೊಡಲಾಗಿದೆ. ನಮ್ಮಲ್ಲಿ ಪಕ್ಷದ ಆಂತರಿಕ ಚುನಾವಣೆ ಪಾರದರ್ಶಕವಾಗಿ ನಡೆಯಲಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಹೇಳಿದರು.