ಹುಣಸೂರು: ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ಸಮೀಕ್ಷೆಯಲ್ಲಿ ನೋಂದಾಯಿಸಿಕೊಂಡಿದ್ದರೆ ಮಾತ್ರ ಈ ವರ್ಷದ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಮಾರಾಟ ಮಾಡಲು ಅವಕಾಶ ಸಿಗಲಿದೆ ಎಂದು ಹನಗೋಡು ಜಿಲ್ಲಾ ಪಂಚಾಯ್ತಿ ಸದಸ್ಯ ಕಟ್ಟನಾಯಕ ತಿಳಿಸಿದರು.
ತಾಲೂಕಿನ ಹನಗೋಡು ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಟಾರ್ಪಲ್ ವಿತರಣಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ಹಳ್ಳಿಗೆ ಕೃಷಿ ಇಲಾಖೆ ವತಿಯಿಂದ ಪಿ.ಆರ್.ಗಳನ್ನು (ಪ್ರೈವೇಟ್ ರೆಸಿಡೆನ್ಸ್) ನೇಮಿಸಲಾಗಿದೆ. ಇವರು ರೈತರ ಜಮೀನು ಗಳಲ್ಲಿ ಬೆಳೆದಿರುವ ಬೆಳೆಯ ಫೋಟೋಗಳನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಇದರಿಂದ ಅತಿವೃಷ್ಟಿ, ಅನಾವೃಷ್ಟಿ ಮತ್ತಿತರ ಹಾನಿ ಸಂದರ್ಭದಲ್ಲಿ ಬೆಳೆ ಪರಿಹಾರ ಪಡೆದುಕೊಳ್ಳಲು ಹಾಗೂ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮತ್ತಿತರ ಮಾರುಕಟ್ಟೆಗಳಲ್ಲಿ ಸರ್ಕಾರ ಘೋಷಿಸುವ ಬೆಂಬಲ ಬೆಲೆ ಮೂಲಕ ಮಾರಾಟ ಮಾಡಲು ಮತ್ತು ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.
ಹನಗೋಡು ಕೃಷಿ ಸಹಾಯಕ ಅಧಿಕಾರಿ ಯಾದವ್‌ಬಾಬು ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ನಮ್ಮ ಹನಗೋಡು ಹೋಬಳಿಗೆ 355 ಟಾರ್ಪಲ್ ಬಂದಿದ್ದು, ಈ ಪೈಕಿ 304 ಟಾರ್ಪಲ್ ಲಭ್ಯವಿದ್ದು, ಪ್ರತಿ ಟಾರ್ಪಲ್ ಗೆ 1100 ರೂ. ಸಾಮಾನ್ಯ ವರ್ಗದವರಿಗೆ, ಪರಿಶಿಷ್ಟ ಜಾತಿಯರಿಗೆ 38, ಪರಿಶಿಷ್ಟ ಪಂಗಡದವರಿಗೆ13 ಯುನಿಟ್ ಮೀಸಲಿದ್ದು, ಇವರಿಗೆ 300 ರೂ. ನಿಗದಿ ಪಡಿಸಲಾಗಿದೆ ಎಂದರು.
ಅರ್ಜಿ ಸಲ್ಲಿಸಿದ್ದ 304 ಸಾಮಾನ್ಯ ವರ್ಗದ ರೈತರಿಗೆ ಟಾರ್ಪಲ್ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿಯಡಿ 163 ಅರ್ಜಿಗಳು ಬಂದಿದ್ದರಿಂದ ಪಂಚಾಯಿತಿ ವಾರುಲಾಟರಿಮೂಲಕಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ನಂತರ ಜನಪ್ರತಿನಿಧಿಗಳು ಹಾಗೂ ರೈತರ ಸಮ್ಮಖದಲ್ಲಿ ಲಾಟರಿ ಎತ್ತಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಎಪಿಎಂಸಿ ಅಧ್ಯಕ್ಷ ಮುದಗನೂರು ಸುಭಾಸ್, ದೊಡ್ಡಹೆಜ್ಜೂರು ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಜಿಲ್ಲಾ ಎಸ್ಸಿ , ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಗ್ರಾಪಂ ಮಾಜಿ ಸದಸ್ಯ ನಾಗೇಶ್‌ಕೆ.ಡಿ.ಕುಮಾರ್, ಮುಖಂಡ ರಾದ ವಿಶ್ವನಾಥ್, ರುದ್ರಪ್ಪ, ಸ್ವಾಮಿ ನಾಯಕ, ಕಣಗಾಲು ರಾಘು ಸೇರಿದಂತೆ ಮತ್ತಿತರರು ಹಾಜರಿದ್ದರು.