Advertisement
2010-11ರಿಂದ 2015 -16ರ ವರೆಗೆ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿ ಇನ್ನೂ ಮುಗಿಯದ ಮನೆಗಳನ್ನು ಶೀಘ್ರ ಪೂರ್ಣಗೊಳಿಸ ದಿದ್ದರೆ ಅನುದಾನವನ್ನು ಬಡ್ಡಿ ಸಹಿತ ವಸೂಲಿ ಮಾಡಲು ವಸತಿ ನಿಗಮವು ಪಿಡಿಒಗಳಿಗೆ ಸೂಚಿಸಿದೆ.
ಫಲಾನುಭವಿಗಳಿಂದ ಅನುದಾನವನ್ನು ವಾರ್ಷಿಕ ಶೇ. 11ರ ಬಡ್ಡಿ ಸಮೇತ ವಸೂಲಿ ಮಾಡಲು, ಒಂದು ವೇಳೆ ಅನುದಾನ ವಾಪಸ್ ಮಾಡದಿದ್ದಲ್ಲಿ “ಭೂ ಕಂದಾಯ ಬಾಕಿ’ ಎಂಬುದಾಗಿ ಪರಿಗಣಿಸಿ ಗ್ರಾ.ಪಂ., ಸ್ಥಳೀಯ ನಗರಾಡಳಿತ ಸಂಸ್ಥೆಗಳ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
Related Articles
Advertisement
ಇದನ್ನೂ ಓದಿ:2023 ಕ್ಕೆ ರಾಜಕೀಯ ಪ್ರವೇಶದ ಸುಳಿವು ನೀಡಿದ ಗಾಲಿ ಜನಾರ್ಧನ ರೆಡ್ಡಿ
ಬಾಕಿ ನಡುವೆ ಹೊಸ ಮನೆ ಹಳೆಯ ಬಾಕಿ ಇರುವ ನಡು ವೆಯೂ ಸರಕಾರ ಈಗ ಹೊಸ ದಾಗಿ ಮನೆಗಳನ್ನು ಮಂಜೂರು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 8,090 ಮನೆಗಳ ಗುರಿ ನಿಗದಿ ಪಡಿಸ ಲಾಗಿದೆ. ಗ್ರಾ.ಪಂ.ಗಳ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮೂರು ವಿಭಾಗದಲ್ಲಿ ಮನೆ ಹಂಚಿಕೆ ನಡೆಯಲಿದ್ದು, 25 ಸದಸ್ಯರಿದ್ದರೆ ಆ ಗ್ರಾ.ಪಂ.ಗೆ 50 ಮನೆಗಳು, 15ರಿಂದ 20 ಸದಸ್ಯರಿದ್ದರೆ 40 ಮನೆ, 15ಕ್ಕಿಂತ ಕಡಿಮೆ ಸದಸ್ಯರಿದ್ದರೆ 30 ಮನೆ ಮಂಜೂರಾಗಲಿದೆ. ಉಡುಪಿ ಜಿಲ್ಲೆಗೂ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಗುರಿ ನಿಗದಿಪಡಿಸಲಾಗಿದೆ. ಐದು ತಿಂಗಳ ಹಿಂದೆ ಅಮೃತ ಗ್ರಾಮೀಣ ವಸತಿ ಯೋಜನೆಯಡಿ ದ.ಕ., ಉಡುಪಿ ಜಿಲ್ಲೆಗಳ ಒಟ್ಟು 46 ಗ್ರಾ.ಪಂ.ಗಳನ್ನು ಆಯ್ಕೆ ಮಾಡಲಾಗಿದ್ದು, ಈ ಯೋಜನೆ ಯಡಿಯೂ ಫಲಾನು ಭವಿಗಳ ಆಯ್ಕೆ ನಡೆಯುತ್ತಿದೆ. ಅಲ್ಲದೆ ಈಗ 3 ವರ್ಷಗಳ ಅನಂತರ ಅಂಬೇಡ್ಕರ್ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡವರಿಗೆ ಮನೆ ಮಂಜೂರು ಮಾಡುವ ಪ್ರಕ್ರಿಯೆ ಕೂಡ ಆರಂಭಿಸಲಾಗಿದೆ. ಹತ್ತಾರು ವರ್ಷಗಳಿಂದ ಮನೆ ಪೂರ್ಣಗೊಳಿಸದ ಅನೇಕ ಮಂದಿ ಇದ್ದಾರೆ. ಅವರಿಗೆ ತಿಳಿವಳಿಕೆ, ನೋಟಿಸ್ ನೀಡಲಾಗಿದೆ. ಆದರೂ ಕೆಲವರು ಆಸಕ್ತಿ ತೋರಿಲ್ಲ. ತಳಪಾಯ ಹಂತದಲ್ಲಿಯೇ ಬಾಕಿ ಇಟ್ಟವರೂ ಇದ್ದಾರೆ. ಅವರಿಂದ ಅನುದಾನ ವಾಪಸ್ ಪಡೆಯಲು ನಿಗಮ ಸೂಚಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು.
-ಡಾ| ಕುಮಾರ್, ದ.ಕ. ಜಿ.ಪಂ. ಸಿಇಒ 2010-11ರಿಂದ ಅನುದಾನ ನೀಡಿದರೂ ಮನೆ ಕಟ್ಟಿಸಿಕೊಳ್ಳದವರಿಗೆ 3-4 ಬಾರಿ ನೋಟಿಸ್‌ನೀಡಿ ಆದಷ್ಟು ಶೀಘ್ರ ಪೂರ್ಣಗೊಳಿಸಲು ತಿಳಿಸಲಾಗಿದೆ. ದಂಡ ವಸೂಲಿ ಮಾಡುವ ಪ್ರಕ್ರಿಯೆ ಸದ್ಯ ಆರಂಭಿಸಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ಆರಂಭಿಸುತ್ತೇವೆ.
-ಡಾ| ನವೀನ್ ಭಟ್, ಉಡುಪಿ ಜಿ.ಪಂ. ಸಿಇಒ - ಸಂತೋಷ್ ಬೊಳ್ಳೆಟ್ಟು