Advertisement

JDS ಅಧ್ಯಕ್ಷ ನಾನಾಗಿದ್ದರೆ ಕುಮಾರಸ್ವಾಮಿಯನ್ನು ಪಕ್ಷದಿಂದ ಉಚ್ಛಾಟಿಸುತ್ತಿದ್ದೆ: ವಿಶ್ವನಾಥ್

06:07 PM Oct 17, 2023 | Team Udayavani |

ಮೈಸೂರು: ರಾಜ್ಯ ರಾಜಕಾರಣದ ಇಂದಿನ ಪರಿಸ್ಥಿತಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತೆಗೆದುಕೊಂಡಿರುವ ನಿಲುವು ಸರಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ನಿಲುವು ಸರಿಯಾಗಿದೆ. ಅವರು ಜೆಡಿಎಸ್ ರಾಷ್ಟ್ರಾಧ್ಯಕ್ಷರಿಗೆ ವಿಧೇಯನಾಗಿರುತ್ತೇನೆ ಎಂದಿದ್ದಾರೆ. ಜಾತ್ಯಾತೀತವಾದವನ್ನು ಕೊಲೆ ಮಾಡಿ ಜಾತಿವಾದಿ ಕೋಮುವಾದಿಗಳ ಜೊತೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮದುವೆಯಾದರೆ ಒಪ್ಪಲು ಸಾಧ್ಯವೇ? ಹಾಗಾಗಿ ರಾಜ್ಯಾಧ್ಯಕ್ಷರಾಗಿ ಸಿ.ಎಂ‌.ಇಬ್ರಾಹಿಂ ಅವರಿಗೆ ಸಂಪೂರ್ಣ ಅಧಿಕಾರ ಇದ್ದು ಕುಮಾರಸ್ವಾಮಿ ಅವರ ಮೇಲೆ ಕ್ರಮ ಜರುಗಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:Pakistan Cricket Team; ಬಾಬರ್ ಅಜಂ ನಾಯಕತ್ವ ತೊರೆಯಲಿ: ಶೋಯೆಬ್ ಮಲಿಕ್

ನಾನು ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದರೆ ಜಾತ್ಯಾತೀತ ವಾದವನ್ನು ಬದಿಗೊತ್ತಿ ಮತೀಯವಾದಿಗಳ ಜೊತೆ ಕೈ ಜೋಡಿಸಿರುವ ಎಚ್.ಡಿ‌.ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡುತ್ತಿದ್ದೆ. ಈಗ ಇಬ್ರಾಹಿಂ ಅವರಿಗೆ ಆ ಅಧಿಕಾರವಿದ್ದು, ಅವರು ಕುಮಾರಸ್ವಾಮಿ ವಿರುದ್ಧ ಕ್ರಮ ಜರುಗಿಸಲಿದ್ದಾರೆ ಎಂದು ವಿಶ್ವನಾಥ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next