ಬೆಂಗಳೂರು : ಡೈರಿ ನನಗೆ ಸೇರಿದ್ದಲ್ಲ..ನಾನು ತಪ್ಪು ಮಾಡಿಲ್ಲ, ಅರೋಪ ಸಾಬೀತಾದ್ರೆ ನನ್ನನ್ನ ಪಕ್ಷದ ಕಚೇರಿಯ ಮುಂದೆಯೇ ನೇಣಿಗೆ ಹಾಕಿ ..ಇದು ಬಿಜೆಪಿ ಎಂಎಲ್‌ಸಿ ಲೆಹರ್ ಸಿಂಗ್ ಅವರ ಹೇಳಿದ ಮಾತು.
ಗೋವಿಂದರಾಜು ಡೈರಿ’ಗೆ ಪ್ರತ್ಯುತ್ತರ ಎಂಬಂತೆ ಕಾಂಗ್ರೆಸ್ ಶನಿವಾರ, ಬಿಜೆಪಿ ವರಿಷ್ಠರಿಗೆ “ಕಪ್ಪ’ ನೀಡಲಾಗಿದೆ ಎನ್ನಲಾಗುವ ಮಾಹಿತಿ ಇರುವ ಲೆಹರ್ ಸಿಂಗ್ ಅವರ ಡೈರಿ ಬಿಡುಗಡೆ ಸಂಬಂಧ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
4 ವರ್ಷಗಳ ಬಳಿಕ ಗುಂಡುರಾವ್ ಅವರಿಗೆ ನನ್ನ ಪತ್ರ ನೆನಪಾಗಿದೆ. ಅವರು ಮೊದಲು ಎಲ್ಲಿ ಹೋಗಿದ್ದರು.ಅಡ್ವಾಣಿ ಅವರು ನನ್ನ ತಂದೆಯ ಸಮಾನ. ಪತ್ರ ನಮ್ಮ ಕೌಟುಂಬಿಕ ವಿಚಾರ ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಲೆಹರ್‌ಸಿಂಗ್, 2013ರ ಮೇ 13ರಂದು ಎಲ್.ಕೆ. ಆಡ್ವಾಣಿ ಅವರಿಗೆ ಬರೆದ ಪತ್ರವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದರು.
ಲೆಹರ್‌ಸಿಂಗ್ ಅವರದು ಎನ್ನಲಾದ ಡೈರಿಯಲ್ಲಿ “ಸಿಎಂಒ+ಆರ್‌ಎ 67 ಕೋಟಿ, ಎಂ. ನಿರಾಣಿ 128 ಕೋಟಿ, ರೇಣು 13 ಕೋಟಿ, ಜೆಎಸ್ 9 ಕೋಟಿ, ಎಸ್‌ಕೆ 3 ಕೋಟಿ, ಎಸ್‌ಆರ್ 1.8 ಕೋಟಿ, ಆರ್‌ಎ+ಕೆಎಸ್‌ಈ 31 ಕೋಟಿ, ಡಿವಿಎಸ್+ಪಿಎಸ್ 11 ಕೋಟಿ, ಇತರ ಕಂಪೆನಿಗಳು ಮತ್ತು ಗುತ್ತಿಗೆದಾರರು 128 ಕೋಟಿ ರೂ. ಸಹಿತ 391.8 ಕೋಟಿ ರೂ. ಸ್ವೀಕರಿಸಲಾಗಿದೆ ಎಂದು ಬರೆಯಲಾಗಿದೆ.
ಅದೇ ರೀತಿ, ಎಸ್ 34 ಕೋಟಿ, ಬಿಎಸ್‌ವೈ 69 ಕೋಟಿ, ನಮೋ 120 ಕೋಟಿ, ಎಸ್‌ಎಸ್7 ಕೋಟಿ, ಎಕೆ 18 ಕೋಟಿ, ಎಂ.ಡಿ. ರಾವ್ 4.8 ಕೋಟಿ, ಡಿಪಿ 9 ಕೋಟಿ, ಪಾರ್ಟಿ ಫಂಡ್ 90 ಕೋಟಿ, ಮೀಡಿಯಾ (ಪಿಟಿವಿ) 10 ಕೋಟಿ, ಎಚ್‌ವಿ (ದೆಹಲಿ ಎಲೆಕ್ಷನ್) 32 ಕೋಟಿ ರೂ. ಈ ರೀತಿ ಒಟ್ಟು 391.8 ಕೋಟಿ ರೂ.ಗಳನ್ನು ಕೇಂದ್ರದ ಬಿಜೆಪಿ ನಾಯಕರಿಗೆ ಪಾವತಿಸ ಲಾಗಿದೆ ಎಂದು ಡೈರಿಯ ಹಾಳೆಯಲ್ಲಿ ಕೈಬರಹದಿಂದ ನಮೂದಿಸಲಾಗಿದ್ದು, ಇದರಲ್ಲಿ ಲೆಹರ್‌ಸಿಂಗ್ ಅವರ ಹಸ್ತಾಕ್ಷರ ಇದೆ ಎಂದು ಅವರು ಆರೋಪಿಸಿದ್ದರು.