ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತದ ಬೆಂಕಿ ಶಿವಮೊಗ್ಗದಲ್ಲಿ ಹೊತ್ತಿ ಉರಿಯುತ್ತಿದ್ದು, ನಾಯಕರುಗಳ ದಿನಕ್ಕೊಂದು ಹೇಳಿಕೆಗಳು ಬಿಕ್ಕಟ್ಟು ಇನ್ನಷ್ಟು ಹೆಚ್ಚಸುತ್ತಿವೆ.
ಬಿಜೆಪಿ ಮುಖಂಡ, ಮಾಜಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ರಾಜ್ಯಾಧ್ಯಕ್ಷರಾಗಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಕೂಡಲೇ ಬದಲಿಸಿ ಈಶ್ವರಪ್ಪ ಅವರನ್ನು ನೇಮಕ ಮಾಡಬೇಕು. ಅವರು ರಾಜ್ಯಾಧ್ಯಕ್ಷರಾದರೆ ಬಿಜೆಪಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 160 ಸೀಟು ಖಚಿತ ಎಂದು ವ್ಯಂಗವಾಡಿದರು.
ಈಶ್ವರಪ್ಪ ವಿರುದ್ಧ ಆಕ್ರೋಶ ಹೊರ ಹಾಕಿದ ಆಯನೂರು ‘ಮೊದಲು ನೀವು ಶಿವಮೊಗ್ಗ ಜಿಲ್ಲೆಯ 7ಕ್ಕೆ 7 ಸ್ಥಾನಗಳನ್ನು ಗೆದ್ದು ತೋರಿಸಿ’ ಎಂದು ಸವಾಲು ಹಾಕಿದರು.
ಯಾರೇ ಪಕ್ಷದಲ್ಲಿದ್ದರೂ, ಪಕ್ಷದ ನಿಷ್ಠೆ ಮುಖ್ಯ.ರಾಜ್ಯದ ಜನ ಯಡಿಯೂರಪ್ಪ ಅಥವಾ ಈಶ್ವರಪ್ಪ ಅವರನ್ನು ನೋಡಿ ಮತ ಹಾಕುವುದಿಲ್ಲ. ಪಕ್ಷ ನೋಡಿ ಮತ ಹಾಕುತ್ತಾರೆ. ಇದನ್ನುಯಡಿಯೂರಪ್ಪ ಅವರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದ ಈಶ್ವರಪ್ಪ ಅವರಿಗೆ ತಿರುಗೇಟಾಗಿ ಈ ಹೇಳಿಕೆ ನೀಡಿದ್ದಾರೆ.
ಆಯನೂರು ಅವರು ಯಡಿಯೂರಪ್ಪ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಸಾಂಧರ್ಭಿಕ ಚಿತ್ರ ಮಾತ್ರ