Advertisement

ಬೂತ್‌ನಲ್ಲಿ ಬಿಜೆಪಿ ಸೋತರೆ ಮೋದಿ ಸೋತಂತೆ

12:31 PM Aug 11, 2017 | Team Udayavani |

ಧಾರವಾಡ: ಬೂತ್‌ ಮಟ್ಟದಲ್ಲಿ ಬಿಜೆಪಿ ಸೋಲಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸದಂತೆಯೇ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ಯಂ ಟ್ಯಾಗೋರ ಹೇಳಿದರು. ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹು-ಧಾ ಕಾಂಗ್ರೆಸ್‌ ಜಿಲ್ಲಾಮಟ್ಟದ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹು-ಧಾ ಪಶ್ಚಿಮ ಮತ ಕ್ಷೇತ್ರದ ರಾಣಿಚನ್ನಮ್ಮ ಮತ್ತು ನವನಗರ ಕ್ಷೇತ್ರದ ಬ್ಲಾಕ್‌ ಸಮಿತಿ ಬೂತ್‌ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.

Advertisement

ಬೂತ್‌ ಮಟ್ಟದಲ್ಲಿಯೇ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಸೋಲಿಸಿದರೆ ಮಾತ್ರವೇ ಕಾಂಗ್ರೆಸ್‌ ಗೆಲುವು ನಿಶ್ಚಿತವಾಗುತ್ತದೆ. ಬೂತ್‌ ಮಟ್ಟದ ಪದಾಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಡೆಸುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವಿಗೆ ಶ್ರಮಿಸಬೇಕು. ಪ್ರತಿ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಬಲವಾಗಿ ಸಂಘಟಿಸಿದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸಾಧ್ಯ.

ಬಿಜೆಪಿಯನ್ನು ಹೆಚ್ಚಿನ ಅಂತರದಿಂದ ಸೋಲಿಸುವುದು ಮುಖ್ಯವಾಗಿದೆ. ಇದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೇ ಸೋಲಿಸಿದಂತಾಗುತ್ತದೆ ಎಂದರು. ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲಕ್ಕಿಂತ ಶಿಸ್ತು ಮುಖ್ಯವಾಗಿದ್ದು, ಅಶಿಸ್ತು ನಾನೆಂದಿಗೂ ಸಹಿಸುವುದಿಲ್ಲ. ಶಿಸ್ತನ್ನು ಉಲ್ಲಂ ಸಿದ ಹಿರಿಯ, ಕಿರಿಯ ಮುಂಖಡರು ಸೇರಿದಂತೆ ಪಕ್ಷದ ಯಾವುದೇ ಕಾರ್ಯಕರ್ತನಿರಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇನೆ. 

ಇದಲ್ಲದೇ ಪಕ್ಷದಲ್ಲಿ ಸಂಘರ್ಷಕ್ಕೆ ಕಾರಣರಾದವರ ಮೇಲೂ ಸಹ ಗುರುತಿಸಿ ಅವರನ್ನು ಪಕ್ಷದಿಂದ ಹೊರ ಹಾಕಲಾಗುವುದು  ಎಂದು ಮಾಣಿಕ್ಯಂ ಎಚ್ಚರಿಕೆ ನೀಡಿದರು. ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲೇ ವಿವಿಧ ಯೋಜನೆಗಳನ್ನು ನೀಡುವ ಮೂಲಕ ಜನಪರ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಇದನ್ನು ಮುಂದುವರಿಸುವ ನಿಟ್ಟಿನಲ್ಲಿ ಸಂಘಟನೆ ಬಲಿಷ್ಠವಾಗಬೇಕು. ಹೀಗಾಗಿ ಸರ್ಕಾರದ ಯೋಜನೆಗಳನ್ನು ಬೂತ್‌ ಮಟ್ಟದ ಪದಾಧಿಕಾರಿಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿ, ಎಸ್‌.ಆರ್‌. ಮೋರೆ ಮಾತನಾಡಿ, ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕಿದೆ.

Advertisement

ಅದಕ್ಕಾಗಿ ಪಕ್ಷ ಸಂಘಟನೆಗೆ ಬೂತ್‌ ಮಟ್ಟದ ಸಮಾವೇಶಗಳು ಅಗತ್ಯವಾಗಿದೆ ಎಂದರು. ಇಸ್ಮಾಯಿಲ್‌ ತಮಟಗಾರ, ಎಫ್.ಎಚ್‌. ಜಕ್ಕಪ್ಪನವರ, ದೇವಕಿ ಯೋಗಾನಂದ, ಸುರೇಶ ನಾಯ್ಕರ, ವೀರಕುಮಾರ ಪಾಟೀಲ ಮಾತನಾಡಿದರು. ಪಾಲಿಕೆ ಸದಸ್ಯರಾದ ಸುಭಾಷ ಶಿಂಧೆ, ದೀಪಾ ಗೌರಿ, ಮಾಜಿ ಮೇಯರ್‌ ಅನಿಲಕುಮಾರ ಪಾಟೀಲ, ಮುಖಂಡರಾದ ಯಲ್ಲಮ್ಮ ನಾಯ್ಕರ, ಪ್ರಕಾಶ ಘಾಟಗೆ,

-ವಿ.ಡಿ. ಕಾಮರೆಡ್ಡಿ, ರಾಬರ್ಟ್‌ ದದ್ದಾಪುರಿ, ದಾಕ್ಷಾಯಿಣಿ ಬಸವರಾಜ, ದಾನಪ್ಪ ಕಬ್ಬೇರ, ಬುರಾನ್‌ ಗೌಳಿ, ಸ್ವಾತಿ ಮಳಗಿ, ಶಾಂತವ್ವ ಗುಂಜಾಳ, ಆನಂದ ಜಾಧವ, ಹೇಮಂತ ಗುರ್ಲಹೊಸೂರ, ಅಲಿ ಗೊವನಕೊಳ್ಳ, ಪಾಲಿಕೆ ಸದಸ್ಯರು, ಬ್ಲಾಕ್‌, ಬೂತ್‌ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.  ದೀಪಕ ಚಿಂಚೋರೆ ಸ್ವಾಗತಿಸಿದರು. ನಾಗರಾಜ ಗೌರಿ ವಂದಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next