Advertisement

ದೂರಿದ್ದರೆ ದೆಹಲಿಗೆ ಹೋಗಿ ಕೊಡಿ, ನನಗೇನು ಅಭ್ಯಂತರವಿಲ್ಲ: ಬಿಎಸ್ ವೈ ಖಡಕ್ ನುಡಿ

11:04 AM Jan 14, 2021 | Team Udayavani |

ಬೆಂಗಳೂರು: ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡಿರುವ ಶಾಸಕರು ಹಗುರವಾಗಿ ಮಾತನಾಡುವುದು ಬೇಡ. ಅಸಮಾಧಾನ ಇದ್ದವರು ದೆಹಲಿಗೆ ಹೋಗಿ ವರಿಷ್ಠರ ಜತೆ ಮಾತಾಡಲಿ. ಇದಕ್ಕೆ ನನ್ನ ಅಭ್ಯಂತರವೇನೂ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಯಾವುದೇ ಶಾಸಕರಿಗೆ ವಿರೋಧವಿದ್ದರೆ ದೆಹಲಿಗೆ ಹೋಗಲಿ. ಅಲ್ಲಿ ವರಿಷ್ಠರಿಗೆ ದೂರು ಕೊಡಲಿ. ಇಲ್ಲಿ ಮಾತಾಡಿ‌ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಶಾಸಕರು ಮಾಡುವುದು ಬೇಡ ಎಂದರು.

ಇದನ್ನೂ ಓದಿ:ಹಗರಣ ಮಾಡಿದವರಿಗೆ,ವಿಷಬೀಜ ಬಿತ್ತಿದವರಿಗೆ ಸ್ಥಾನ ನೀಡಿದ್ದಾರೆ: ದಿಲ್ಲಿಗೆ ಹೊರಟ ರೇಣುಕಾಚಾರ್ಯ

ಶಾಸಕರು ಏನೇ ಮಾಹಿತಿ ಇದ್ದರೂ ದೆಹಲಿಗೆ ಹೋಗಿ ದೂರು ಕೊಡಲಿ. ವರಿಷ್ಠರು ಸರಿ ತಪ್ಪು ಯಾವುದು ಎಂಬ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next