Advertisement

ಪಂಚಾಯ್ತಿ ಹಂತದಲ್ಲೇ ಜೀವ ವೈವಿಧ್ಯ ತಾಣ ಗುರುತಿಸಿ

04:49 PM Jan 06, 2021 | Team Udayavani |

ದಾವಣಗೆರೆ: ಜೀವ ವೈವಿಧ್ಯ ತಾಣಗಳನ್ನು ಪಂಚಾಯಿತಿ ಹಂತದಲ್ಲಿಯೇ ಗುರುತಿಸುವಕೆಲಸವಾಗಬೇಕು. ಸ್ಥಳೀಯ ಬೆಟ್ಟ, ಗುಡ್ಡ, ಕೆರೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜೀವ ವೈವಿಧ್ಯ ತಾಣಗಳನ್ನಾಗಿ ಮಾಡಬಹುದಾಗಿದೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅಭಿಪ್ರಾಯಿಸಿದರು.

Advertisement

ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿನಡೆದ ಅರಣ್ಯ ಪರಿಸರ ಮತ್ತು ಜೀವ ವೈವಿಧ್ಯ ಸಂರಕ್ಷಣೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮೇ 22ರ ದಿನವನ್ನು ಜೀವ ವೈವಿಧ್ಯ ದಿನವಾಗಿ ಎಲ್ಲೆಡೆ ಆಚರಿಸುವ ಮೂಲಕಆ ವರ್ಷದಲ್ಲಿ ಏನೇನು ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಬೇಕೆಂಬ ನೀಲನಕ್ಷೆಯನ್ನುತಯಾರಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು.ಜಿಲ್ಲೆಯ ಸುಸ್ಥಿರ ಅಭಿವೃದ್ಧಿಗೆ ಹಾಗೂ ನೈಸರ್ಗಿಕಸಂಪನ್ಮೂಲ ರಕ್ಷಣೆಗೆ ಜಿಲ್ಲಾ, ತಾಲೂಕು ಹಾಗೂಗ್ರಾಪಂ ಮಟ್ಟಗಳಲ್ಲಿ ಈಗಾಗಲೇ ರಚನೆಯಾಗಿರುವಸಮಿತಿಗಳು ಕಾರ್ಯ ಚಟುವಟಿಕೆ ನಡೆಸುತ್ತಿದ್ದುವರದಿ ಕೂಡ ನೀಡಿವೆ. ಈ ಕೆಲಸಗಳು ಮತ್ತಷ್ಟು ಪರಿಣಾಮಕಾರಿಯಾಗಿ ಆಗಬೇಕು ಎಂದರು.

ಜೀವ ವೈವಿಧ್ಯತೆಗೆ ಪೂರಕವಾಗಿ ಬಯೋಗ್ಯಾಸ್‌ತಯಾರಿಸುವ ಘಟಕಗಳನ್ನು ನಿರ್ಮಿಸಲು ಈಗಾಗಲೇತರಬೇತಿ ನೀಡಲಾಗಿದೆ. ಇದರಿಂದ ತ್ಯಾಜ್ಯ ವಿಲೇವಾರಿಸುಲಭವಾಗಲಿದ್ದು, ಸಾಕಷ್ಟು ಇಂಧನ ಕೂಡದೊರೆಯಲಿದೆ. ಹೋಟೆಲ್‌ಗ‌ಳು, ಹಾಸ್ಟೆಲ್‌ಗ‌ಳು ಕಲ್ಯಾಣ ಮಂಟಪಗಳಲ್ಲಿ ಉಳಿಯುವ ತ್ಯಾಜ್ಯಗಳಿಂದಬಯೋಗ್ಯಾಸ್‌ ಉತ್ಪಾದಿಸುವುದರಿಂದ ಪರಿಸ ರಕ್ಷಣೆಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಕೃಷಿ ಚಟುವಟಿಕೆಗೆ ಹೆಚ್ಚಾಗಿ ಕೀಟನಾಶಕ ಬಳಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮವಾಗುತ್ತಿದ್ದು, ಕೃಷಿ ಅಧಿಕಾರಿಗಳು ಈಕುರಿತು ಗಮನಹರಿಸಬೇಕು. ಪ್ರಾಣಿ- ಪಕ್ಷಿ ಸಂಕುಲಸತ್ತಾಗ ಅದಕ್ಕೆ ಕಾರಣ ಹುಡುಕಿದಾಗ ಈ ಕೀಟನಾಶಕ ಗೋಚರವಾಗುತ್ತದೆ. ಈಗಾಗಲೇ ನಿಷೇಧಿಸಿರುವ ಕೀಟನಾಶಕಗಳು ಅಂಗಡಿಗಳಲ್ಲಿ ಮಾರಾಟವಾಗದಂತೆಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌,ನಮ್ಮ ಜಿಲ್ಲೆಯಲ್ಲಿ ನಿಷೇಧಿತ ಕೀಟ ನಾಶಕಗಳು ಮಾರಾಟವಾಗುತ್ತಿಲ್ಲ ಎಂದು ತಿಳಿಸಿದರು.

ಅರಣ್ಯ ಇಲಾಖೆಯವರು ಅರಣ್ಯ ಕೃಷಿಗೆ ಪ್ರೋತ್ಸಾಹನೀಡಬೇಕು. ಜಿಪಂನವರು ನರೇಗಾ ಮೂಲಕ ಹೆಚ್ಚುಗಿಡಗಳನ್ನು ನೆಡಲು ಮುಂದಾಗಬೇಕು. ತೋಟಗಾರಿಕೆಇಲಾಖೆಯವರು ಜೇನು ಸಾಕಾಣಿಕೆಗೆ ಹೆಚ್ಚು ಒತ್ತುನೀಡಿದಲ್ಲಿ ರೈತರಿಗೆ ಆದಾಯ, ಪರಿಸರ ರಕ್ಷಣೆ,ರೈತ ಬೆಳೆಯುವ ಬೆಳೆಗೆ ಪರಾಗ ಸ್ಪರ್ಶ ಕ್ರಿಯೆಗೆ ಅನುಕೂಲವಾಗಲಿದೆ ಎಂದರು.

Advertisement

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು ಜೀವ ವೈವಿಧ್ಯ ದಾಖಲಾತಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಸಾಕಷ್ಟು ಜೀವವೈವಿಧ್ಯದ ಹಾಟ್‌ಸ್ಪಾಟ್‌ಗಳಿದ್ದು, ಕೊಮಾರನಹಳ್ಳಿಗುಡ್ಡ ಅತ್ಯಂತ ಮೌಲ್ಯಯುತ ಜೀವ ವೈವಿಧ್ಹೊಂದಿದೆ. ಕುಂದುವಾಡ ಕೆರೆ ಪ್ರಮುಖ ಜೀವ ವೈವಿಧ್ಯ ತಾಣವಾಗಿದ್ದು, ಹಲವು ಬಗೆಯ ಪಕ್ಷಿಸಂಕುಲಗಳು ಕಂಡು ಬರುತ್ತವೆ. ಈ ಕೆರೆಯನ್ನು ರೂ.18 ಕೋಟಿ ವೆಚ್ಚದಲ್ಲಿಅಭಿವೃದ್ಧಿಪಡಿಸಲಾಗುತ್ತಿದೆ  ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ದಾವಣಗೆರೆ ಸಮೀಪವಿರುವ ಬಾತಿ ಗುಡ್ಡವನ್ನು

ಅಭಿವೃದ್ಧಿಪಡಿಸಿದರೆ ತುಮಕೂರಿನ ಸಿದ್ದರ ಬೆಟ್ಟದಂತೆ ಅಭಿವೃದ್ಧಿಪಡಿಸಬಹುದಾಗಿದೆ ಎಂದರು. ಜಿಪಂ ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ,ಚನ್ನಗಿರಿಯ ದಾಗಿನಕಟ್ಟೆ, ದಿದ್ದಿಗಿ, ಹರಿಹರದ ಸಾರಥಿ ಈ ಪ್ರದೇಶಗಳಲ್ಲಿ ಹಸಿರನ್ನು ಕಾಪಾಡಿ,ನರೇಗಾ ಯೋಜನೆಯಡಿ ಹೆಚ್ಚೆಚ್ಚು ಗಿಡಗಳನ್ನು ಬೆಳೆಸಲಾಗುತ್ತಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿನಜ್ಮಾ, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next