ಡೆಹ್ರಾಡೂನ್: ಪ್ರಸಿದ್ಧ ಚಾರ್‌ಧಾಮ್ ಯಾತ್ರೆಗೆ ಇನ್ನು ಸಾದಾ ಸೀದ ಹೋಗುವಂತಿಲ್ಲ. ಯಾತ್ರಾರ್ಥಿಗಳು ಫೋಟೋ ಇರುವ ಗುರುತಿನ ಚೀಟಿಯನ್ನು ಒಯ್ಯುವುದು ಕಡ್ಡಾಯ.
ಭದ್ರತೆ ಮತ್ತು ನೂಕುನುಗ್ಗಲು ಇತ್ಯಾದಿಗಳ ಸಂದರ್ಭ ಗುರುತು ಹಿಡಿಯಲು ಸುಲಭವಾ ಗುವ ನಿಟ್ಟಿನಲ್ಲಿ ಗುರುತು ಚೀಟಿ ಕಡ್ಡಾಯಗೊಳಿ ಸಲು ಉತ್ತರಾಖಂಡ ಸರ್ಕಾರ ಚಿಂತಿಸಿದೆ. ಇದ ರೊಂದಿಗೆ ಯಾತ್ರಾರ್ಥಿಗಳಿಗೆ ಮದ್ಯ ಸೇವನೆ ಪರೀಕ್ಷೆಯನ್ನೂ ನಡೆಸಲು ಉದ್ದೇಶಿಸಿದೆ.
ಗಂಗೋತ್ರಿ, ಯಮುನೋತ್ರಿ, ಕೇದಾರ, ಬದರಿನಾಥ ದರ್ಶನದ ಚಾರ್‌ಧಾಮ್ ಯಾತ್ರೆ ಈ ಬಾರಿ ಏ.28ರಿಂದ ಆರಂಭವಾಗಲಿದ್ದು, ವಿವಿಧೆಡೆ ಯಾತ್ರಾರ್ಥಿಗಳ ಗುರುತು ಚೀಟಿ, ಜೊತೆಗೆ ಮದ್ಯ ಸೇವಿಸಿದ್ದಾರೆಯೇ ಎಂದು ತಪಾಸಣೆ ಮಾಡಲಾಗುತ್ತದೆ. ಕಾಲ್ನಡಿಗೆ ಪ್ರದೇಶಗಳಲ್ಲಿ ಹಲವು ಯಾತ್ರಿಗಳು ಮದ್ಯ ಸೇವಿಸಿ ಆಗಮಿಸುತ್ತಾರೆ. ಇದು ಯಾತ್ರೆಯ ಉದ್ದೇಶಕ್ಕೇ ಧಕ್ಕೆ ತಂದಂತೆ. ಜೊತೆಗೆ ಮದ್ಯ ಸೇವನೆಯಿಂದ ಅಹಿತಕರ ಘಟನೆಗಳನ್ನು ತಡೆಯಲು ಸಾಧ್ಯ ಎಂದು ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಹೇಳಿದ್ದಾರೆ. ಮದ್ಯ ಸೇವಿಸಿ ಯಾತ್ರೆಗೆ ಹೋಗುವುದನ್ನು ನಿಷೇಧಿಸಲಾಗುವುದು. ಯಾತ್ರೆ ಮಾರ್ಗದಲ್ಲಿ ಮಾತ್ರ ನಿಷೇಧ ಇದ್ದು, ಯಾತ್ರಾರ್ಥಿಗಳ ವಾಸಗಳಲ್ಲಿ ಮದ್ಯ ಸೇವನೆಗೆ ಅಡ್ಡಿ ಇಲ್ಲ ಎಂದಿದ್ದಾರೆ. ಇದೇ ವೇಳೆ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ದೇಗುಲಗಳಲ್ಲಿ ಮದ್ಯಸೇವಿಸಿದವರಿಗೆ ಅವಕಾಶ ಇಲ್ಲ ಎನ್ನುವುದು ಸರಿ. ಆದರೆ ದಾರಿಮಧ್ಯೆ ಸೇವಿಸು ವಂತಿಲ್ಲ ಎನ್ನುವುದು ಹಕ್ಕು ಕಸಿದಂತೆ. ಜೊತೆಗೆ ದಾರಿ ಮಧ್ಯ ಇರುವ ಮದ್ಯದಂಗಡಿಗಳ ಕಥೆ ಏನಾಗುತ್ತದೆ ಎಂದು ಪ್ರಶ್ನಿಸಿದೆ.