ನವದೆಹಲಿ: ವ್ಯಕ್ತಿಯೊಬ್ಬನ ಶ್ವಾಸಕೋಶಕ್ಕೆ ಚುಚ್ಚಿಕೊಂಡಿದ್ದ ದಬ್ಬಳ(ಐಸ್ ಪಿಕ್)ವನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸಣ್ಣ ಪ್ರಮಾಣದ ವಿಡಿಯೋ ಕ್ಯಾಮೆರಾ ಬಳಸಿ ಇನ್‌ವೇಸಿವ್ ಥೊರಾಸಿಕ್ ಸರ್ಜರಿ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಅದಕ್ಕಾಗಿ ವಿಶೇಷ ವೈದ್ಯಕೀಯ ಉಪಕರಣಗಳನ್ನು ಬಳಸಲಾಗಿದೆ. ಸಾಮಾನ್ಯ ವಾಗಿ ಇಂಥ ಪ್ರಕರಣಗಳು ಬಂದಾಗ ಶಸ್ತ್ರಚಿಕಿತ್ಸೆ ಮೂಲಕ ಎದೆಯನ್ನು ಬಿಡಿಸಿ ನೇರವಾಗಿಯೇ ಚುಚ್ಚಿರುವ ವಸ್ತುವನ್ನು ತೆಗೆಯಲಾಗುತ್ತದೆ. ಐದಿಚಿಂನ ಐಸ್ ಪಿಕ್ ಆತನ ಬೆನ್ನಿನ ಮೂಲಕ ಬಂದು
ಶ್ವಾಸಕೋಶದ ಎಡಭಾಗದಲ್ಲಿ ಚುಚ್ಚಿಕೊಂಡಿತ್ತು.
ಈ ಬಗ್ಗೆ ಮಾತನಾಡಿದ ಏಮ್ಸ್‌ನ ಟ್ರಾಮಾ ಸೆಂಟರ್ ಮುಖ್ಯಸ್ಥ ಡಾ. ರಾಜೇಶ್ ಮಲ್ಹೋತ್ರಾ ಕೇವಲ ಒಂದು ಗಂಟೆಯಲ್ಲಿ ಪ್ರಕ್ರಿಯೆ ಮುಕ್ತಾಯವಾಗಿದೆ. ಸೂಕ್ತ ಸಮಯ ದಲ್ಲಿ ಬಂದು ಚಿಕಿತ್ಸೆ ಪಡೆಯದೇ ಇರುತ್ತಿದ್ದರೆ, ಆಂತರಿಕವಾಗಿ ರಕ್ತ ಸ್ರಾವವಾಗಿ ಅಸುನೀಗುವ ಸಾಧ್ಯತೆ ಇತ್ತು ಎಂದಿದ್ದಾರೆ.