ಸೌಥಂಪ್ಟನ್: 144 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಟೆಸ್ಟ್ ಕ್ರಿಕೆಟ್ ನ ಪ್ರಪ್ರಥಮ ವಿಶ್ವಕಪ್ ಫೈನಲ್ ಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಅಣಿಯಾಗಿದೆ. ಕ್ರಿಕೆಟ್ ವಿಶ್ವವೇ ಕಾದು ಕುಳಿತಿದ್ದ ಅಭೂಪೂರ್ವ ಫೈನಲ್ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದ್ದು, ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಶುಕ್ರವಾರವೇ ಪಂದ್ಯ ಆರಂಭವಾಗಬೇಕಿತ್ತು. ಆದರೆ ನಿನ್ನೆ ಇಡೀದಿನ ಮಳೆಯ ಕಾರಣ ಒಂದೂ ಎಸೆತ ಕಾಣದೆ ಮೊದಲ ದಿನದ ಪಂದ್ಯ ರದ್ದಾಗಿತ್ತು. ಇದೀಗ ವರುಣ ಕೃಪೆ ತೋರಿದ್ದು ಸೌಥಂಪ್ಟನ್ ನ ದಿ ರೋಸ್ ಬೌಲ್ ಅಂಗಳದಲ್ಲಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಆರಂಭವಾಗಿದೆ.
ತಟಸ್ಥ ತಾಣವಾಗಿರುವ ಕಾರಣ ಎರಡೂ ತಂಡಗಳಿಗೂ ಇದು ಹೊಸ ಅನುಭವ. ದಿ ರಿಯಲ್ ಕ್ರಿಕೆಟ್ ಎಂದು ಕರೆಯಲ್ಪಡುವ ಟೆಸ್ಟ್ ಕ್ರಿಕೆಟ್ ನ ‘ವಿಜೇತರ ಗದೆ’ ಎತ್ತಲು ಎರಡೂ ತಂಡಗಳು ಸನ್ನದ್ಧವಾಗಿದೆ.
ಭಾರತ ತಂಡ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.
ನ್ಯೂಜಿಲ್ಯಾಂಡ್ ತಂಡ: ಡೆವೊನ್ ಕಾನ್ವೇ, ಟಾಮ್ ಲಾಥಮ್, ಕೇನ್ ವಿಲಿಯಮ್ಸನ್ (ನಾ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿ.ಜೆ.ವಾಟ್ಲಿಂಗ್ (ವಿ.ಕೀ), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜಾಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಟ್ರೆಂಟ್ ಬೌಲ್ಟ್