Advertisement
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲ್ಯಾಂಡ್ 5 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಲಷ್ಟೇ ಶಕ್ತವಾಯಿತು.
Related Articles
Advertisement
ಈವರೆಗೆ ಆಸ್ಟ್ರೇಲಿಯ (6 ಸಲ), ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ (ತಲಾ ಒಮ್ಮೆ) ಮಾತ್ರ ಪ್ರಶಸ್ತಿ ಎತ್ತಿದ್ದವು. ‘ಆಸ್ಟ್ರೇಲಿಯವನ್ನು ಸೋಲಿಸಿ ದವರಿಗೆ ವಿಶ್ವಕಪ್’ ಎಂಬುದು ಈ ಪಂದ್ಯಾವಳಿಗೂ ಅನ್ವಯಿಸಿದ ಮಾತಾಗಿತ್ತು. ಅದು ಸತತ 3 ಬಾರಿಯ ವಿಶ್ವ ಚಾಂಪಿಯನ್ ಎಂಬ ಹಿರಿಮೆಯೊಂದಿಗೆ ಕಣಕ್ಕಿಳಿದಿತ್ತು. ಇಲ್ಲಿ ಹರಿಣಗಳ ಪಡೆ ಕಾಂಗರೂ ಕತೆಯನ್ನು ಸೆಮಿಫೈನಲ್‌ನಲ್ಲಿ ಮುಗಿಸಿ ಫೈನಲ್‌ಗೆ ಲಗ್ಗೆ ಹಾಕಿತ್ತು. ಇದು ದಕ್ಷಿಣ ಆಫ್ರಿಕಾ ಕಾಣುತ್ತಿರುವ ಸತತ 2ನೇ ಫೈನಲ್ ಸೋಲು. ಕಳೆದ ಸಲ ಆಸ್ಟ್ರೇಲಿಯ ವಿರುದ್ಧ ತವರಿನ ಕೇಪ್‌ಟೌನ್ ಅಂಗಳದಲ್ಲೇ 19 ರನ್ನಿನಿಂದ ಸೋತು ಕಣ್ಣೀರು ಸುರಿಸಿತ್ತು. ಈ ಬಾರಿ ನ್ಯೂಜಿಲ್ಯಾಂಡ್ ಸವಾಲನ್ನು ಎದುರಿಸಲಾಗದೆ ಸೋಲಿಗೆ ಶರಣಾಗಿದೆ.