Advertisement

WTA Player of the Year: ರಿನಾ ಸಬಲೆಂಕಾ ವರ್ಷದ ಆಟಗಾರ್ತಿ

11:02 PM Dec 10, 2024 | Team Udayavani |

ಲಂಡನ್‌: ಬೆಲರೂಸ್‌ನ ಅರಿನಾ ಸಬಲೆಂಕಾ 2024ನೇ ಸಾಲಿನ ವರ್ಷದ ಡಬ್ಲ್ಯುಟಿಎ ವರ್ಷದ ಆಟ ಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರಿಗೆ ಈ ಪ್ರಶಸ್ತಿ ಒಲಿದದ್ದು ಇದೇ ಮೊದಲು.

Advertisement

26 ವರ್ಷದ ಸಬಲೆಂಕಾ ವರ್ಷಾ ರಂಭದ ಆಸ್ಟ್ರೇಲಿಯನ್‌ ಓಪನ್‌ ಹಾಗೂ ವರ್ಷಾಂತ್ಯದ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಜಯಿಸಿದ್ದರು. ಜತೆಗೆ ಇತರ ಎರಡು ಪ್ರಶಸ್ತಿಗಳೂ ಒಲಿದಿದ್ದವು. 2024ರಲ್ಲಿ 56-14 ಅಂತರದ ಗೆಲುವಿನ ದಾಖಲೆ ಸಬಲೆಂಕಾ ಅವರದ್ದಾಗಿದೆ. ಅಕ್ಟೋಬರ್‌ನಲ್ಲಿ ಇಗಾ ಸ್ವಿಯಾಟೆಕ್‌ ಅವರನ್ನು ಹಿಂದಿಕ್ಕಿ ವಿಶ್ವದ ನಂ.1 ಆಟಗಾರ್ತಿ ಎನಿಸಿದ್ದರು.

ಉಳಿದ ಪ್ರಶಸ್ತಿಗಳು
ಉಳಿದಂತೆ ಎಮ್ಮಾ ನವಾರೊ “ಮೋಸ್ಟ್‌ ಇಂಪ್ರೂವ್‌x ಪ್ಲೇಯರ್‌’, ಪೌಲಾ ಬಡೋಸಾ “ಕಮ್‌ಬ್ಯಾಕ್‌ ಪ್ಲೇಯರ್‌’, ಲುಲು ಸನ್‌ “ನ್ಯೂ ಕಮರ್‌ ಆಫ್ ದ ಇಯರ್‌’ ಮತ್ತು ಸಾರಾ ಎರಾನಿ-ಜಾಸ್ಮಿನ್‌ ಪೌಲ್‌ “ಡಬಲ್ಸ್‌ ಟೀಮ್‌ ಆಫ್ ದ ಇಯರ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಲ್ಲಿ ಇಟಲಿಯ ಎರಾನಿ-ಜಾಸ್ಮಿನ್‌ ಪ್ಯಾರಿಸ್‌ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next