Advertisement
ಪಾಕಿಸ್ಥಾನ ವಿರುದ್ಧ ಭಾರತದ್ದು ಈವರೆಗೆ ಅಜೇಯ ದಾಖಲೆ ಎಂಬುದನ್ನು ಮರೆಯುವಂತಿಲ್ಲ. ಆಡಿದ ಹತ್ತೂ ಪಂದ್ಯಗಳನ್ನು ಭಾರತ ಜಯಿಸಿದೆ. ಇದರಲ್ಲಿ ಎರಡು ಗೆಲುವು ಏಕದಿನ ವಿಶ್ವಕಪ್‌ನಲ್ಲಿ ಬಂದಿವೆ.
2005 ಮತ್ತು ಕಳೆದ ಸಲದ ರನ್ನರ್ ಅಪ್ ಆಗಿರುವ ಭಾರತಕ್ಕೆ ಕಪ್ ಒಲಿಯಬೇಕಾದರೆ ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಕಂಡುಬರಬೇಕಾದ ಅಗತ್ಯವಿದೆ. ಮೌಂಟ್ ಮೌಂಗನುಯಿ ಟ್ರ್ಯಾಕ್ ಬ್ಯಾಟಿಂಗಿಗೆ ನೆರವಾಗುವ ಸಾಧ್ಯತೆ ಹೆಚ್ಚು. ಹಾಗೆಯೇ ಚೇಸಿಂಗ್ ಕೂಡ ಕಠಿನವಲ್ಲ. ಇಂಥ ಸ್ಥಿತಿಯಲ್ಲಿ ಬೌಲಿಂಗ್ ಹೆಚ್ಚು ಪರಿಣಾಮಕಾರಿ ಆಗಿರಬೇಕು. ವೇಗದ ವಿಭಾಗದಲ್ಲಿ ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್; ಸ್ಪಿನ್ ವಿಭಾಗದಲ್ಲಿ ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮ ಅವರಂಥ ಸ್ಟಾರ್ ಬೌಲರ್ ಇದ್ದಾರೆ. ಬ್ಯಾಟಿಂಗ್‌ನಲ್ಲಿ ಶಫಾಲಿ ವರ್ಮ, ಹರ್ಮನ್‌ಪ್ರೀತ್ ಕೌರ್ ಲಯ ಕಂಡುಕೊಂಡರೆ ಭಾರತಕ್ಕದು ಬೋನಸ್. ಮಂಧನಾ, ಮಿಥಾಲಿ, ಯಾಸ್ತಿಕಾ, ದೀಪ್ತಿ, ರಿಚಾ ಈಗಾಗಲೇ ನ್ಯೂಜಿಲ್ಯಾಂಡ್ ಟ್ರ್ಯಾಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
Related Articles
Advertisement