Advertisement

ಐಸಿಸಿ ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ಇಂದಿನಿಂದ ರೇಸ್‌

12:13 AM Oct 17, 2021 | Team Udayavani |

ದುಬಾೖ: ಐಪಿಎಲ್‌ ಮುಗಿದಿದೆ. ಇನ್ನು ಐಸಿಸಿ ಟಿ20 ವಿಶ್ವಕಪ್‌ ಪರ್ವ. ಇದರ 7ನೇ ಆವೃತ್ತಿಗೆ ರವಿವಾರದಿಂದ ಮೊದಲ ಹಂತದ ಚಾಲನೆ ಲಭಿಸಲಿದೆ.

Advertisement

ಕೂಟದ ಪ್ರಮುಖ ರೌಂಡ್‌ ಆಗಿ ರುವ “ಸೂಪರ್‌-12′ ಹಂತವನ್ನು ಪ್ರವೇಶಿಸಲಿರುವ 4 ತಂಡಗಳನ್ನು ನಿರ್ಧರಿಸುವ ಗ್ರೂಪ್‌ ಪಂದ್ಯಗಳು ಕಾವೇರಿಸಿಕೊಳ್ಳಲಿವೆ. ಇಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ 8 ತಂಡಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿವೆ.

ಈ ತಂಡಗಳನ್ನು ಎ-ಬಿ ಎಂದು ವಿಂಗಡಿಸಲಾಗಿದೆ. ಎರಡೂ ಗ್ರೂಪ್‌ಗ್ಳಲ್ಲಿ ತಲಾ 4 ತಂಡಗಳಿವೆ. ಇಲ್ಲಿ ಮೊದಲೆರಡು ಸ್ಥಾನ ಪಡೆದ ತಂಡ ಗಳು ಸೂಪರ್‌-12 ಹಂತವನ್ನು ಪ್ರವೇಶಿಸಲಿವೆ.

“ಎ’ ವಿಭಾಗದಲ್ಲಿ ಐರ್ಲೆಂಡ್‌, ನಮೀಬಿಯಾ, ನೆದರ್ಲೆಂಡ್ಸ್‌ ಮತ್ತು ಶ್ರೀಲಂಕಾ; “ಬಿ’ ವಿಭಾಗದಲ್ಲಿ ಬಾಂಗ್ಲಾ ದೇಶ, ಒಮಾನ್‌, ಪಪುವಾ ನ್ಯೂ ಗಿನಿ ಮತ್ತು ಸ್ಕಾಟ್ಲೆಂಡ್‌ ತಂಡಗಳಿವೆ.

8 ತಂಡಗಳಿಗೆ ನೇರ ಪ್ರವೇಶ
ಸೂಪರ್‌-12 ಹಂತದಲ್ಲಿ 8 ತಂಡ ಗಳಿಗೆ ನೇರ ಪ್ರವೇಶ ಲಭಿಸಿದೆ. ಒಂದನೇ ವಿಭಾಗದಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳಿವೆ. ಎ-1 ಮತ್ತು ಬಿ-2 ತಂಡಗಳು ಈ ವಿಭಾಗಕ್ಕೆ ಸೇರ್ಪಡೆಗೊಳ್ಳಲಿವೆ.


ಎರಡನೇ ವಿಭಾಗದಲ್ಲಿರುವ ತಂಡಗಳೆಂದರೆ ಭಾರತ, ಪಾಕಿಸ್ಥಾನ, ನ್ಯೂಜಿಲ್ಯಾಂಡ್‌ ಮತ್ತು ಅಫ್ಘಾನಿಸ್ಥಾನ. ಎ-2 ಮತ್ತು ಬಿ-1 ತಂಡಗಳು ಈ ವಿಭಾಗದಲ್ಲಿ ಸೆಣಸುವ ಅರ್ಹತೆ ಸಂಪಾದಿಸಲಿವೆ.

Advertisement

ಇದನ್ನೂ ಓದಿ:ಭಾರತದಲ್ಲೇ ಮುಂದಿನ ಐಪಿಎಲ್‌: ಗಂಗೂಲಿ

ರವಿವಾರದಿಂದ ದಿನಕ್ಕೆ ಎರಡು ಪಂದ್ಯಗಳಂತೆ ಅ. 22ರ ತನಕ ಅರ್ಹತಾ ಸುತ್ತು ನಡೆಯಲಿದೆ. ಅ. 23 ರಿಂದ ಕೂಟ ಕಾವೇರಿಸಿಕೊಳ್ಳಲಿದ್ದು, ಅಂದು ಸೂಪರ್‌-12 ಸ್ಪರ್ಧೆ ಮೊದಲ್ಗೊಳ್ಳುತ್ತದೆ.

ಆಸ್ಟ್ರೇಲಿಯ- ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯದಲ್ಲಿ ಕಾಣಿಸಿಕೊಳ್ಳಲಿವೆ. ಅಂದು ರಾತ್ರಿ ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌ ಮುಖಾಮುಖಿ ಯಾಗಲಿವೆ.

ಅ. 24ರ ರವಿವಾರ ಕೂಟದ ಹೈ ವೋಲ್ಟೇಜ್ ಸ್ಪರ್ಧೆ ನಡೆಯಲಿದೆ. ದುಬಾೖಯಲ್ಲಿ ಭಾರತ-ಪಾಕಿಸ್ಥಾನ ಕಣಕ್ಕಿಳಿಯಲಿವೆ! ಚೊಚ್ಚಲ ವಿಶ್ವಕಪ್‌ನಲ್ಲಿ ಪಾಕಿಸ್ಥಾನವನ್ನೇ ಮಣಿಸಿ ಚಾಂಪಿಯನ್‌ ಆಗಿದ್ದ ಭಾರತ, ಈ ಬಾರಿ ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ಥಾನವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next