ಗಯಾನಾ: ಐಸಿಸಿ ಟಿ20 ವಿಶ್ವಕಪ್ 2024ರ ಗುಂಪು ಹಂತದ ಪಂದ್ಯಗಳು ಮುಗಿಯುವ ಹಂತ ಬಂದಿದೆ. ಗುಂಪು ಹಂತದಲ್ಲಿ ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿರುವ ವೆಸ್ಟ್ ಇಂಡೀಸ್- ಅಫ್ಘಾನಿಸ್ತಾನ ನಡುವಿನ ಪಂದ್ಯ ಕೊನೆಯದಾಗಿರಲಿದೆ. ಮಂಗಳವಾರ ರಾತ್ರಿಯಿಂದ ಸೂಪರ್ 8 ಕದನಗಳು ಆರಂಭವಾಗಲಿದೆ.
ಈ ಬಾರಿಯ ವಿಶ್ವಕಪ್ ಗುಂಪು ಹಂತ, ಸೂಪರ್ 8, ಸೆಮಿ ಫೈನಲ್ ಮತ್ತು ಫೈನಲ್ ಮಾದರಿಯಲ್ಲಿ ನಡೆಯಲಿದೆ. 20 ತಂಡಗಳಿಂದ ಆರಂಭವಾದ ಕೂಟದಲ್ಲಿ ಇದೀಗ ಎಂಟು ತಂಡಗಳು ಉಳಿದಿದೆ. ಸೂಪರ್ 8 ಹಂತದಲ್ಲಿ ಎರಡು ಗುಂಪುಗಳಿದ್ದು, ಎ ಗುಂಪಿನಲ್ಲಿ ನಾಲ್ಕು ತಂಡಗಳು ಮತ್ತು ಬಿ ಗುಂಪಿನಲ್ಲಿ ನಾಲ್ಕು ತಂಡಗಳಿವೆ.
ಸೂಪರ್ 8ನಲ್ಲಿ ಪ್ರತಿ ತಂಡಗಳು ತನ್ನ ಗುಂಪಿನ ಉಳಿದ ಮೂರು ತಂಡಗಳ ವಿರುದ್ದ ಆಡಲಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿ ಫೈನಲ್ ಗೆ ಪ್ರವೇಶಿಸಿದೆ.
ಸೂಪರ್ 8 ನಲ್ಲಿರುವ ತಂಡಗಳು
ಗುಂಪು 1: ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ
ಗುಂಪು 2: ಯುಎಸ್ಎ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ
ಭಾರತದ ಪಂದ್ಯಗಳು (ಎಲ್ಲಾ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭ)
ಜೂನ್ 20: ಅಫ್ಘಾನ್ ವಿರುದ್ದ: ಬಾರ್ಬಡಾಸ್
ಜೂನ್ 22: ಬಾಂಗ್ಲಾ ವಿರುದ್ದ: ಆ್ಯಂಟಿಗಾ
ಜೂನ್ 24: ಆಸ್ಟ್ರೇಲಿಯಾ ವಿರುದ್ದ: ಗ್ರಾಸ್ ಐಲೆಟ್