ಸೌಥಂಪ್ಟನ್: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ವೇಳೆ ಅನಪೇಕ್ಷಣೀಯ ಘಟನೆಯೊಂದು ನಡೆದಿದೆ. ನ್ಯೂಜಿಲೆಂಡ್ ಕ್ರಿಕೆಟಿಗರತ್ತ ಅಸಭ್ಯವಾಗಿ ಬೈಯುತ್ತಿದ್ದ ಇಬ್ಬರು ಪ್ರೇಕ್ಷಕರನ್ನು ಮಂಗಳವಾರ ಏಜಸ್ ಮೈದಾನದಿಂದ ಹೊರಹಾಕಲಾಗಿದೆ. ಇದು ಜನಾಂಗೀಯ ನಿಂದನೆಯಾಗಿತ್ತು, ಇದನ್ನೆಲ್ಲ ತಾನು ಸಹಿಸಿಕೊಳ್ಳುವುದಿಲ್ಲ ಎಂದು ಐಸಿಸಿ ಹೇಳಿದೆ.
ಏಜಎಸ್ ಬೌಲ್ ಮೈದಾನದ ಎಂ ಬ್ಲಾಕ್‌ನಲ್ಲಿದ್ದ ಇಬ್ಬರು ಪ್ರೇಕ್ಷಕರು ನ್ಯೂಜಿಲೆಂಡ್‌ನ ರಾಸ್ ಟೇಲರ್ ರನ್ನೇ ಗುರಿಯಾಗಿಸಿಕೊಂಡು ಅಣಕಿಸುತ್ತಿದ್ದರು. ಇದು ಟ್ವಿಟರ್ ಮೂಲಕ ಐಸಿಸಿ ಗಮನಕ್ಕೆ ಬಂದಿದೆ.
ಇದನ್ನೂ ಓದಿ:ಸರಿಯಾದ ಮನಸ್ಥಿತಿಯ ಆಟಗಾರರೊಂದಿಗೆ ಆಡಬೇಕಾದ ಅವಶ್ಯಕತೆಯಿದೆ: ಬದಲಾವಣೆ ಸುಳಿವು ನೀಡಿದ ಕೊಹ್ಲಿ
ತಕ್ಷಣ ಭದ್ರತಾ ಸಿಬ್ಬಂದಿಗೆ ಆ ಅಭಿಮಾನಿಗಳನ್ನು ಹೊರಹಾಕುವಂತೆ ಐಸಿಸಿ ಸೂಚನೆ ನೀಡಿದೆ. ವಿಚಿತ್ರವೆಂದರೆ ಕಿವೀಸ್ ಬೌಲರ್ ಟಿಮ್ ಸೌಥಿ, ತಮಗೆ ಇಂತಹ ಯಾವುದೇ ಘಟನೆಗಳು ಗಮನಕ್ಕೇ ಬಂದಿಲ್ಲವೆಂದು ಹೇಳಿದ್ದಾರೆ!
ಇದೇ ವರ್ಷ ಜನವರಿಯಲ್ಲಿ ಸಿಡ್ನಿ ಮೈದಾನದಿಂದ ಕೆಲವರನ್ನು ಹೊರಹಾಕಲಾಗಿತ್ತು. ಭಾರತದ ವೇಗಿ ಮೊಹಮ್ಮದ್ ಸಿರಾಜ್, ತನ್ನನ್ನು ಕೆಲವು ಪ್ರೇಕ್ಷಕರು ಅಣಕಿಸುತ್ತಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿತ್ತು