Advertisement

ಟಿ20 ವಿಶ್ವಕಪ್‌ ಸೆಮಿ ಮತ್ತು ಫೈನಲ್‌ ಗಾಗಿ ನಿಯಮ ಬದಲಾವಣೆ ಮಾಡಿದ ಐಸಿಸಿ

04:23 PM Nov 04, 2022 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಕೂಟವು ಸದ್ಯ ರೋಚಕವಾಗಿ ಸಾಗುತ್ತಿದೆ. ಕೆಲವು ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸಿದರೂ ಈ ಬಾರಿ ಹಲವು ಕುತೂಹಲಕಾರಿ ಫಲಿತಾಂಶಗಳು ಬಂದಿದೆ. ಇದೀಗ ಕೂಟ ಸೆಮಿ ಫೈನಲ್ ಗೆ ಹತ್ತಿರವಾಗುತ್ತಿದ್ದು, ಕೆಲ ನಿಯಮಗಳ ಬದಲಾವಣೆಗೆ ಐಸಿಸಿ ಮುಂದಾಗಿದೆ.

Advertisement

ಸಾಮಾನ್ಯವಾಗಿ ಟಿ20 ಪಂದ್ಯಗಳಲ್ಲಿ ಮಳೆ ಅಡ್ಡಿಯಾದರೆ ಫಲಿತಾಂಶಕ್ಕಾಗಿ ಐದು ಓವರ್ ಪಂದ್ಯವಾದರೂ ನಡೆಯಲೇಬೇಕು. ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಎರಡನೇ ಇನ್ನಿಂಗ್ಸ ನಲ್ಲಿ ಕನಿಷ್ಠ ಐದು ಓವರ್ ಆಟವಾದರೂ ನಡೆದಿರಬೇಕು.

ಇದೀಗ ಈ ನಿಯಮವನ್ನು ಐಸಿಸಿ ಬದಲಾವಣೆ ಮಾಡಿದ್ದು, ಟಿ20 ವಿಶ್ವಕಪ್ ನ ಸೆಮಿ ಫೈನಲ್ ಗಳು ಮತ್ತು ಫೈನಲ್ ಪಂದ್ಯದಲ್ಲಿ ಫಲಿತಾಂಶ ನೀಡಲು ಎರಡೂ ಇನ್ನಿಂಗ್ಸ್ ಗಳಲ್ಲಿ ಕನಿಷ್ಠ ಹತ್ತು ಓವರ್ ಆಟ ನಡೆಯಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ:ಗೋವಾದ ಯುವಕರನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ : ಸಿಎಂ ಸಾವಂತ್

ನವೆಂಬರ್ 9 ಮತ್ತು 10ರಂದು ಸೆಮಿ ಫೈನಲ್ ಪಂದ್ಯಗಳು ನಡೆದರೆ, ನ.13ರಂದು ಮೆಲ್ಬರ್ನ್ ನಲ್ಲಿ ಫೈನಲ್ ನಡೆಯಲಿದೆ.

Advertisement

ಸೆಮಿ ಫೈನಲ್ ನಲ್ಲಿ ಮಳೆಯ ಕಾರಣಕ್ಕೆ ಒಂದು ವೇಳೆ ತಲಾ ಹತ್ತು ಓವರ್ ನ ಪಂದ್ಯ ನಡೆಯಲು ಅವಕಾಶ ಸಿಗಿದ್ದರೆ ಅದೇ ಪಂದ್ಯ ಮೀಸಲು ದಿನದಂದು ನಡೆಯಲಿದೆ. ಆದರೆ ಮೀಸಲು ದಿನದಲ್ಲೂ ಮಳೆ ಕಾಟ ಎದುರಾಗಿ ಕನಿಷ್ಠ ತಲಾ ಹತ್ತು ಓವರ್ ಪಂದ್ಯ ನಡೆಯದಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮುಂದಿರುತ್ತದೋ ಆ ತಂಡವು ಫೈನಲ್ ಪ್ರವೇಶ ಮಾಡಲಿದೆ.

ಒಂದು ವೇಳೆ ಇದೇ ಪರಿಸ್ಥಿತಿ ಫೈನಲ್ ಪಂದ್ಯಕ್ಕೂ ( ಮೀಸಲು ದಿನದಲ್ಲೂ ಮಳೆ ಬಂದರೆ) ಎದುರಾದರೆ ಆಗ ಎರಡೂ ತಂಡಗಳಲ್ಲನ್ನು ಜಂಟಿ ವಿಜೇತರೆಂದು ಘೋಷಣೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next