ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯು 2021ರ ಸಾಲಿನ ವರ್ಷದ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದ ನಾಯಕ ನ್ಯೂಜಿಲ್ಯಾಂಡ್ ನ ಕೇನ್ ವಿಲಿಯಮ್ಸನ್ ಅವರಿಗೆ ಐಸಿಸಿ ವರ್ಷದ ಟೆಸ್ಟ್ ನಾಯಕನ ಸ್ಥಾನ ನೀಡಿದೆ.
ವರ್ಷದ ಟೆಸ್ಟ್ ತಂಡದಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ, ವಿಕೆಟ್ ಕೀಪರ್ ರಿಷಭ್ ಪಂತ್, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಐಸಿಸಿ ಆಯ್ಕೆ ಮಾಡಿದೆ. ಆದರೆ ವಿರಾಟ್ ಕೊಹ್ಲಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.
ಇದನ್ನೂ ಓದಿ:ವರ್ಷದ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತೀಯರಿಗೆ ಸ್ಥಾನವಿಲ್ಲ! ಬಾಬರ್ ಗೆ ನಾಯಕತ್ವ
ತಂಡದಲ್ಲಿ ಮೂವರು ಭಾರತೀಯರು, ಮೂವರು ಪಾಕ್ ಆಟಗಾರರು, ಇಬ್ಬರು ನ್ಯೂಜಿಲ್ಯಾಂಡ್ ಆಟಗಾರರು, ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಇಂಗ್ಲೆಂಡ್ ನಿಂದ ತಲಾ ಒಬ್ಬರು ಆಟಗಾರರು ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.
2021 ರ ಐಸಿಸಿ ಪುರುಷರ ಟೆಸ್ಟ್ ತಂಡ: ದಿಮುತ್ ಕರುಣಾರತ್ನೆ (ಶ್ರೀಲಂಕಾ), ರೋಹಿತ್ ಶರ್ಮಾ (ಭಾರತ), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಮಾರ್ನಸ್ ಲಬುಶೇನ್ (ಆಸ್ಟ್ರೇಲಿಯಾ), ಜೋ ರೂಟ್ (ಇಂಗ್ಲೆಂಡ್), ಫವಾದ್ ಆಲಂ (ಪಾಕಿಸ್ತಾನ), ರಿಷಭ್ ಪಂತ್ ( ಭಾರತ), ರವಿಚಂದ್ರನ್ ಅಶ್ವಿನ್ (ಭಾರತ), ಕೈಲ್ ಜೇಮಿಸನ್ (ನ್ಯೂಜಿಲೆಂಡ್), ಶಾಹೀನ್ ಶಾ ಆಫ್ರಿದಿ (ಪಾಕಿಸ್ತಾನ), ಮತ್ತು ಹಸನ್ ಅಲಿ (ಪಾಕಿಸ್ತಾನ).