Advertisement
16 ತಂಡಗಳು ಪಾಲ್ಗೊಳ್ಳಲಿರುವ ಈ ಪ್ರತಿಷ್ಠಿತ ಕೂಟಕ್ಕಾಗಿ ಐಸಿಸಿ ಒಟ್ಟು 5.6 ಮಿಲಿಯನ್ ಡಾಲರ್ ಮೊತ್ತವನ್ನು (45.5 ಕೋ.ರೂ.) ಬಹುಮಾನಕ್ಕಾಗಿ ವ್ಯಯಿಸಲಿದೆ.
Related Articles
ಟಿ20 ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೇ 8 ತಂಡಗಳು ನೇರವಾಗಿ ಸೂಪರ್-12 ಹಂತವನ್ನು ಪ್ರವೇಶಿ ಸಿವೆ. ಇವುಗಳೆಂದರೆ ಆಸ್ಟ್ರೇಲಿಯ, ಭಾರತ, ಪಾಕಿಸ್ಥಾನ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ.
Advertisement
ಉಳಿದ 8 ತಂಡಗಳು ಮೊದಲ ಸುತ್ತಿನಲ್ಲಿ ಸೆಣಸಲಿವೆ. “ಎ’ ವಿಭಾಗದಲ್ಲಿ ಶ್ರೀಲಂಕಾ, ನಮೀ ಬಿಯಾ, ನೆದರ್ಲೆಂಡ್ಸ್ ಮತ್ತು ಯುಎಇ; “ಬಿ’ ವಿಭಾಗದಲ್ಲಿ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳಿವೆ. ಈ ಎಲ್ಲ ತಂಡಗಳಿಗೆ ತಲಾ 40 ಸಾವಿರ ಡಾಲರ್ ಲಭಿಸಲಿದೆ.
ಸೂಪರ್-12 ಮುಖಾಮುಖಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಮತ್ತು ರನ್ನರ್ ಅಪ್ ನ್ಯೂಜಿಲ್ಯಾಂಡ್ ಮಧ್ಯೆ ಅ. 22ರಂದು ಸಿಡ್ನಿಯಲ್ಲಿ ನಡೆಯುತ್ತದೆ. ಅದೇ ದಿನ ಪರ್ತ್‌ನಲ್ಲಿ ಇಂಗ್ಲೆಂಡ್-ಅಫ್ಘಾನಿಸ್ಥಾನ ಪರಸ್ಪರ ಎದುರಾಗಲಿವೆ.