Advertisement

ಇಬ್ರಾಹಿಂ ನನ್ನ ಆತ್ಮೀಯ ಸ್ನೇಹಿತರು, ಯಾವಾಗ ಜ್ಞಾನೋದಯ ಆಗುತ್ತದೋ ಗೊತ್ತಿಲ್ಲ

01:58 PM Oct 16, 2021 | Team Udayavani |

ದಾವಣಗೆರೆ : ‘ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ನನ್ನ ಆತ್ಮೀಯ ಸ್ನೇಹಿತರು,ಅವರಿಗೆ ಯಾವಾಗ ಜ್ಞಾನೋದಯ ಆಗುತ್ತದೆ ಎನ್ನುವುದು ಅವರಿಗೇ ಗೊತ್ತಿಲ್ಲ. ಅವರ ಜೊತೆ ನಾನು ಮಾತನಾಡುತ್ತೇನೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ದಾವಣಗೆರೆಯ ಹೊನ್ನಾಳಿಯ ಸುರಹೊನ್ನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಟಿಪ್ಪು ಜಯಂತಿ ಬಗ್ಗೆ ಹೇಳಿಕೆ ನೀಡಿದ್ದ ಮತ್ತು ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನದ ಬಗ್ಗೆ ಪ್ರಶ್ನಿಸಿದ್ದ ಸಿ.ಎಂ. ಇಬ್ರಾಹಿಂ ಅವರ ಕುರಿತು ಪ್ರತಿಕ್ರಿಯಿಸಿ ‘ಅವರ ಜೊತೆ ನಾನು ಮಾತಾಡುತ್ತೇನೆ. ಟಿಪ್ಪು ಜಯಂತಿ ಬಗ್ಗೆ ಕಾಂಗ್ರೆಸ್ ನವರಿಗೆ ಸಿ.ಎಂ. ಇಬ್ರಾಹಿಂ ಅವರೇ ಉತ್ತರ ಕೊಟ್ಟಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಕುರಿತಾಗಿ ಏನೂ ಹೇಳುವುದಿಲ್ಲ. ಅವರು ದೊಡ್ಡವರು. ಟಿಪ್ಪು ಜಯಂತಿ ಆಚರಿಸಿದ್ದು ರಾಜಕೀಯಕ್ಕಾಗಿ, ನಾನು ಅಂದೇ ಜಯಂತಿ ವಿರೋಧಿಸಿದ್ದೆ . ಜಯಂತಿ ಆಚರಣೆ, ಫೋಟೊಗೆ ಹಾರ ಹಾಕಿ ಪೂಜೆ ಮಾಡುವ ಪದ್ಧತಿ ನಮ್ಮದಲ್ಲ’ ಎಂದು ಸಿ.ಎಂ. ಇಬ್ರಾಹಿಂ ಹೇಳಿಕೆ ನೀಡಿದ್ದರು.

ಗೊಂದಲಕ್ಕೆ ತೆರೆ ಎಳೆದ ಸಿಎಂ

ಬಿ. ಎಸ್. ಯಡಿಯೂರಪ್ಪ ಅವರು ಉಪಚುನಾವಣೆಯ ಪ್ರಚಾರಕ್ಕೆ ಬಂದೇ ಬರುತ್ತಾರೆ.  ಎರಡು ದಿನ ಹಾನಗಲ್, ಎರಡು ದಿನ ಸಿಂದಗಿಯಲ್ಲಿ ಪ್ರಚಾರ ನಡೆಸಲಿದ್ದಾರೆ, ರೋಡ್ ಶೋ ಗೂ ಬರಲಿದ್ದಾರೆ ಎಂದರು. ಈ ಬಗ್ಗೆ ಬಿಎಸ್ ವೈ ಅವರ ಜೊತೆ ನಾನೇ ಖುದ್ದಾಗಿ  ಚರ್ಚೆ ನಡೆಸಿದ್ದು ಪ್ರಚಾರಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

Advertisement

ಉಪಚುನಾವಣೆಯಲ್ಲಿ ಬಿಜೆಪಿಗೆ ವಾತಾವರಣ ಪೂರಕವಾಗಿದ್ದು ಒಗ್ಗಟ್ಟಾಗಿ ಚುನಾವಣೆ ಪ್ರಚಾರ ಮಾಡಿ ಎರಡು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದರು.

ತಜ್ಞರ ಜೊತೆ ಚರ್ಚಿಸಿ ತೀರ್ಮಾನ

ರಾಜ್ಯದಲ್ಲಿ ಕೊವಿಡ್ 1 % ಕ್ಕಿಂತ ಕಡಿಮೆಯಾಗಿದ್ದು, ಕೊವಿಡ್ ನಿಯಮ ಸರಳೀಕರಣದ ಕುರಿತಾಗಿ ಎರಡು ದಿನದಲ್ಲಿ ತಜ್ಞರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. 1ರಿಂದ 5ನೇ ತರಗತಿ ಆರಂಭದ ಬಗ್ಗೆ ತಜ್ಞರ ಸಲಹೆ ನಂತರ ಕ್ರಮ ಎಂದು ಸಿಎಂ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next