Advertisement
ಕೌಶಲ, ಸಂಶೋಧನೆ, ಉದ್ಯಮಕ್ಕೆ ಪೂರಕ ಹಾಗೂ ಗುಣಮಟ್ಟದ ಮಾನವ ಸಂಪನ್ಮೂಲ ರೂಪಿಸುವ ಮೂಲಕ ನಾಡಿಗೆ ಉತ್ತಮ ಉದ್ಯೋಗಿ ಹಾಗೂ ಉದ್ಯಮಿಗಳನ್ನು ನೀಡಿರುವ ಖ್ಯಾತಿ ಇನ್ ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಆ್ಯಂಡ್ ರಿಸರ್ಚ್ (ಐಬಿಎಂಆರ್) ವಿದ್ಯಾಸಂಸ್ಥೆಯಾಗಿದೆ. ಜಾಗತಿಕ ಮಟ್ಟದ ಪೈಪೋಟಿ ಯುಗ, ಬದಲಾಗುತ್ತಿರುವ ಸ್ಥಿತಿಗೆ ಪೂರಕವಾಗಿ ವಿಶ್ವಗುಣಮಟ್ಟಕ್ಕೆ ತಕ್ಕುದಾದ ಮಾನವ ಸಂಪನ್ಮೂಲ ಅಗತ್ಯ ಎಂಬುದು ಉದ್ಯಮ ವಲಯದ ನಿರೀಕ್ಷೆ, ಬೇಡಿಕೆಯಾಗಿದೆ. ಇದಕ್ಕೆ ತಕ್ಕಂತೆ ಅಂತಾರಾಷ್ಟ್ರೀಯ ಗುಣಮಟ್ಟದ ಕಲಿಕೆ, ವಿದ್ಯಾರ್ಥಿಗಳ ಮನದೊಳಗೆ ಸ್ಪರ್ಧಾತ್ಮಕ ಮನೋಭಾವ, ಪರಿಶ್ರಮ, ಬದ್ಧತೆ, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಛಲ ಮೂಡಿಸುವ, ಮನನ ಮಾಡುವ ಕಾರ್ಯದಲ್ಲಿ ತೊಡಗಿದ ಕೆಲವೇ ಕೆಲವು ಸಂಸ್ಥೆಗಳಲ್ಲಿ ಐಬಿಎಂಆರ್ ಒಂದಾಗಿದೆ.
Related Articles
Advertisement
ಐಬಿಎಂಆರ್ ಹುಬ್ಬಳ್ಳಿಯಲ್ಲಿ ವಿದ್ಯಾಸಂಸ್ಥೆ ಹೊಂದಿರುವುದಲ್ಲದೆ ಬೆಂಗಳೂರು, ಗುರುಗಾಂವ್ ಮತ್ತು ಅಹ್ಮದಾಬಾದ್‌ನಲ್ಲಿ ವಿಶಿಷ್ಟ ಕಲಿಕಾ ಸಂಸ್ಥೆಗಳನ್ನು ಆರಂಭಿಸಿದೆ. ರಾಷ್ಟ್ರೀಯ ಶಿಕ್ಷಣ ಕ್ರಾಂತಿಗೆ ಅನುಗುಣವಾಗಿ 2019ರಲ್ಲಿ ಪೂರ್ವ ನಿಯೋಜಿತ ಶಿಕ್ಷಣ 4.0 ಆರಂಭಿಸಿತ್ತು. ಇದೀಗ ನೂತನ ಶಿಕ್ಷಣ ನೀತಿ(ಎನ್‌ಇಪಿ)ಅಡಿಯಲ್ಲಿ 5.0 ಕಲಿಕಾ ರೂಪರೇಷಗಳನ್ನು ಹಮ್ಮಿಕೊಂಡಿದೆ. ರಾಷ್ಟ್ರೀಯ ಮಟ್ಟದ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಆನ್‌ಲೈನ್ ಮುಖಾಂತರ ಪ್ರವೇಶ ಪರೀಕ್ಷೆ ನಡೆಸುತ್ತಿದೆ. ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯವೇತನ ನೀಡುತ್ತಿದೆ. ಸ್ವ ಉದ್ಯೋಗ/ ವ್ಯಾಪಾರ ಆರಂಭಿಸುವ ವಿದ್ಯಾರ್ಥಿಗಳಿಗೆ I Invent Work ವತಿಯಿಂದ ಆಸಕ್ತ ವಿದ್ಯಾರ್ಥಿಗಳಿಗೆ ನುರಿತ ತಜ್ಞರಿಂದ ಪ್ರೇರಣೆ ಮತ್ತು ಪ್ರೋತ್ಸಾಹ ಒದಗಿಸುತ್ತಿದೆ. 2021ರಲ್ಲಿ ಐಬಿಎಂಆರ್ Center of Excelence ಅನ್ನು ಆರಂಭ ಮಾಡಿದ್ದು, ಇದರ ಅಡಿಯಲ್ಲಿ ವಿಶೇಷ ಕಲಿಕಾ ಅಭಿವೃದ್ಧಿ(Special Education Development), ಮಾನವ ಸಂಪನ್ಮೂಲ ಅಭಿವೃದ್ಧಿ (Man Power Development), ಉದ್ಯೋಗ ಮತ್ತು ತರಬೇತಿ ಸೌಲಭ್ಯಗಳು (Job and Training Opportunities), ಮಹಿಳಾ ಸಬಲೀಕರಣ (Woman Empowerment) ಮತ್ತು ಆರ್ಥಿಕ ವಿಷಯಗಳ ಶೋಧನೆಗಳ (Economic Subjects Research) ಬಗ್ಗೆ ವಿಶೇಷ ಸೌಲಭ್ಯಗಳನ್ನು ಪರಿಣಿತರಿಂದ ನೀಡುತ್ತಿದೆ. ಪ್ರಸಕ್ತ ವರ್ಷ ಮಹಾವಿದ್ಯಾಲಯದಲ್ಲಿ ಸುಮಾರು ಹನ್ನೊಂದು Center of Excelence ಆರಂಭಿಸಿದೆ.
ಇಂದಿನ ಪೈಪೋಟಿ ಯುಗದಲ್ಲಿ ಸಾಂಪ್ರದಾಯಿಕ ರೀತಿಯ ಕಲಿಕೆ, ಪದವಿ ಪಡೆದರೆ ಸಾಲದು, ಬದಲಾದ ಸ್ಥಿತಿಗೆ ತಕ್ಕಂತೆ ಬದಲಾವಣೆಗೆ ಸಜ್ಜಾಗಬೇಕೆಂಬ ದೃಷ್ಟಿಕೋನದಡಿ ಸುಮಾರು 11 ಸೆಂಟರ್ ಆಫ್ ಎಕ್ಸ್‌ಲೆನ್ಸ್ ಆರಂಭಿಸಿದ ವಿರಳ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ರಗಣ್ಯ ರೂಪದಲ್ಲಿ ಗೋಚರಿಸುತ್ತಿದೆ. ಐಬಿಎಂಆರ್‌ನ TCS ಅಯೋನ್ ಐಡಿಯಾ ಸಂಸ್ಥೆಯು ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಒಂದು ಸಾವಿರ ಗಣಕಯಂತ್ರವುಳ್ಳಆನ್ಲೈನ್ ಪರೀಕ್ಷಾ ಕೇಂದ್ರ ಆರಂಭಿಸಿದ್ದು, ಇಲ್ಲಿಯವರೆಗೆ ಅಂದಾಜು 5ಲಕ್ಷ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದಿದ್ದಾರೆ. ಪ್ರತಿಷ್ಠಿತ ಐಐM ಸಂಸ್ಥೆಯ ಮಾದರಿಯಲ್ಲಿ ಐಬಿಎಂಆರ್ ಮಹಾವಿದ್ಯಾಲಯದಲ್ಲಿ ವಿಶೇಷ ಕಾರ್ಯಾಗಾರ, ಕೌಶಲ ತರಬೇತಿ, ಸಂಶೋಧನೆಗೆ ಉತ್ತೇಜಿಸಲು ಐಬಿಎಂಆರ್ ಸಂಶೋಧನಾ ಕೇಂದ್ರ ಸ್ಥಾಪಿಸಿದೆ ಹಾಗೂ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಪ್ರೋತ್ಸಾಹ ನೀಡುತ್ತಿದೆ. ಪ್ರಗತಿಯ ಪಥದಲ್ಲಿ ತನ್ನದೆಯಾದ ಛಾಪು ಮೂಡಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳಾದ ಫ್ರಾನ್ಸ್ ದೇಶದ ಜಿನೇಬಲ್, ಸ್ಟರ್ಲಿಂಗ್, ಮಲೇಷಿಯಾ, ನೈಜರೀಯಾ ಮುಂತಾದ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ವಿದ್ಯಾರ್ಥಿಗಳನ್ನು ಕ್ರೀಡೆಗೆ ಪ್ರೋತ್ಸಾಹಿಸಿ ಅವರಿಗೆ ನುರಿತ ತರಬೇತುದಾರರಿಂದ ತರಬೇತಿ ಕೊಡಿಸುತ್ತಿದೆ. ಪ್ರಸಕ್ತ ವರ್ಷ 2022-23ನೇ ಸಾಲಿನಲ್ಲಿ ಒಟ್ಟು 12 ವಿದ್ಯಾರ್ಥಿಗಳು ಐಬಿಎಂಆರ್ ನಿಂದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ತೋರಿದ್ದಾರೆ. ಐಬಿಎಂಆರ್ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲು ಮತ್ತು ವಿವಿಧ ದೂರ ಶಿಕ್ಷಣದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲು NBA ಮಾನ್ಯತೆ ಮತ್ತು ಕರ್ನಾಟಕ ದೂರ ಶಿಕ್ಷಣ ಪ್ರಾಧಿಕಾರದ ಪ್ರಯೋಜನ ಪಡೆದು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಸಂಶೋಧನಾ ಕೇಂದ್ರ ಸ್ಥಾಪಿಸಲು ಕಾರ್ಯತಂತ್ರ ರೂಪಿಸಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಐಬಿಎಂಆರ್‌ನ ಅಧೀನಕ್ಕೊಳಪಟ್ಟ ವಿವಿಧ ತಾಂತ್ರಿಕ ಶಿಕ್ಷಣ ಕಾಲೇಜ್ (Diploma College) ಅನ್ನು 2008ರಲ್ಲಿ ಶೇರೆವಾಡ ಗ್ರಾಮದಲ್ಲಿ ಆರಂಭಿಸಿದೆ. ಇಲ್ಲಿಯವರೆಗೆ ಸುಮಾರು 5000 ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗುವುದಲ್ಲದೆ ನಾಡು-ದೇಶಕ್ಕೆ ಕೌಶಲಯುತ ಮಾನವ ಸಂಪನ್ಮೂಲ ನೀಡಿದ ಕೀರ್ತಿ ಐಬಿಎಂಆರ್‌ದ್ದಾಗಿದೆ.