Advertisement

ಐಬಿಡಿ ಆಹಾರಕ್ರಮ, ಪೌಷ್ಟಿಕಾಂಶಗಳು

03:30 AM Jul 09, 2017 | |

ಹಿಂದಿನ ವಾರದಿಂದ-  ಹೀರಿಕೆಯಾಗದ ಸಕ್ಕರೆಗಳು (ಸಾರ್ಬಿಟಾಲ್‌, ಮಾನಿಟಾಲ್‌)
-ಸಾರ್ಬಿಟಾಲ್‌, ಮಾನಿಟಾಲ್‌ನಂತಹ ಮದ್ಯಸಾರ ಸಕ್ಕರೆಗಳು ಕೆಲವರಲ್ಲಿ ಭೇದಿ, ಹೊಟ್ಟೆಯುಬ್ಬರ ಮತ್ತು ವಾಯು ಪ್ರಕೋಪವನ್ನು ಉಂಟು ಮಾಡುತ್ತವೆ.

Advertisement

ಈ ಸಾಮಗ್ರಿಗಳು ಸಾಮಾನ್ಯವಾಗಿ ಸಕ್ಕರೆರಹಿತ ಗಮ್‌ಗಳು ಮತ್ತು ಕ್ಯಾಂಡಿಗಳಲ್ಲಿ ಕಂಡುಬರುತ್ತವೆ. ಸಾರ್ಬಿಟಾಲ್‌ ಐಸ್‌ಕ್ರೀಮ್‌ ಮತ್ತು ಸೇಬು, ಪೇರ್‌, ಪ್ರೂನ್‌ನಂತಹ ಅನೇಕ ವಿಧದ ಹಣ್ಣುಗಳಲ್ಲಿ ಹಾಗೂ ಅವುಗಳ ಜ್ಯೂಸ್‌ಗಳಲ್ಲಿ ಕೂಡ ಕಂಡುಬರುತ್ತವೆ. 

ಎಫ್ಒಡಿಎಂಎಪಿ (ಫ‌ರ್ಮೆಂಟೇಬಲ್‌ ಒಲಿಗೊ – ಡಿ- ಮೊನೊಸಾಚರೈಡ್ಸ್‌ ಮತ್ತು ಪಾಲೊಸಿಸ್‌)ಎಫ್ಒಡಿಎಂಎಪಿಗಳು ಕೆಲವು ಬಗೆಯ ಪಿಷ್ಠಗಳು ಮತ್ತು ಮದ್ಯಸಾರ ಸಕ್ಕರೆಯಲ್ಲಿ ಕಂಡುಬರುವ ಸಕ್ಕರೆಗಳು. 

ಎಫ್ಒಡಿಎಂಎಪಿ ಅಧಿಕ ಪ್ರಮಾಣದಲ್ಲಿರುವ ಆಹಾರಗಳಿಗೆ ಒಗ್ಗದಿಕೆ ಹೊಂದಿರುವ ವ್ಯಕ್ತಿಗಳಲ್ಲಿ ಇದು ಅತಿಯಾದ ವಾಯುಪ್ರಕೋಪ, ಹೊಟ್ಟೆಯುಬ್ಬರ, ಭೇದಿ ಮತ್ತು ಹೊಟ್ಟೆ ಹಿಡಿದುಕೊಳ್ಳುವಿಕೆಯನ್ನು ಉಂಟು ಮಾಡುತ್ತವೆ.

ಅಲ್ಪ ಆಹಾರ ಮಾರ್ಗದರ್ಶಿ ಆಹಾರಾಭ್ಯಾಸಕ್ಕೆ ಯೋಗ್ಯ ಆಹಾರಗಳು
ಹಣ್ಣುಗಳು

ಬಾಳೆಹಣ್ಣು, ಬ್ಲೂಬೆರಿ, ಬಾಯೆನ್‌ಬೆರಿ, ಕ್ರೇನ್‌ಬೆರಿ, ಡೂರಿಯನ್‌, ದ್ರಾಕ್ಷಿ, ಮೂಸಂಬಿ, ಕಲ್ಲಂಗಡಿ, ಕಿವಿ, ಕಿತ್ತಳೆ, ಪ್ಯಾಶನ್‌ಫ್ರುಟ್‌, ಪಾವ್‌ಪಾವ್‌, ರಾಸ್‌³ಬೆರಿ, ನಕ್ಷತ್ರ ನೇರಳೆ, ಸ್ಟ್ರಾಬೆರಿ, ಟ್ಯಾಂಜೆಲೊ. ಒಣಹಣ್ಣುಗಳಾದರೆ ಅಲ್ಪ ಪ್ರಮಾಣದಲ್ಲಿ ಸೇವಿಸಿ.
 
ತರಕಾರಿಗಳು
ಅಲ್ಫಾಅಲ್ಫಾ, ಕಣಿಲೆ, ಬೀನ್ಸ್‌ ಚಿಗುರು, ಬಾಕ್‌ ಚಾಯ್‌, ಕ್ಯಾರೆಟ್‌, ಸೆಲೆರಿ, ಚೊಕೊ, ಚೊಯ್‌ಸಮ್‌, ಬದನೆ, ಎಂಡಿವ್‌, ಶುಂಠಿ, ಬೀನ್ಸ್‌, ಲೆಟ್ಯೂಸ್‌, ಆಲಿವ್‌, ಪಾಸ್ನಿìಪ್‌, ಬಟಾಟೆ, ಕುಂಬಳ, ಕೆಂಪು ದೊಣ್ಣೆಮೆಣಸು, ಸಿಲ್ವರ್‌ ಬೀಟ್‌, ಬಸಳೆ, ಸ್ಕ್ವಾಶ್‌, ಸಿಹಿ ಗೆಣಸು, ತಾರೊ, ಟೊಮ್ಯಾಟೊ, ಟರ್ನಿಪ್‌, ಕೆಸುವು, ಝುಚಿನಿ

Advertisement

ಮೂಲಿಕೆಗಳು
ತುಳಸಿ, ಮೆಣಸು, ಕೊತ್ತಂಬರಿ, ಶುಂಠಿ, ಲೆಮನ್‌ಗಾÅಸ್‌, ಮಾಜೊìರಾಮ್‌, ಪುದಿನ, ಕಿತ್ತಳೆ, ಪಾಸ್ಲಿì, ರೋಸ್‌ಮೇರಿ, ಥೈಮ್‌.

ಹೈನು ಉತ್ಪನ್ನಗಳು
ಹಾಲು
ಲ್ಯಾಕ್ಟೋಸ್‌ ಮುಕ್ತ ಹಾಲು, ಓಟ್‌ ಹಾಲು, ಅಕ್ಕಿಹಾಲು, ಸೋಯಾ ಹಾಲು
(ಇವುಗಳಲ್ಲಿ ಸೇರಿಸಲಾದವುಗಳ ಬಗ್ಗೆ ಎಚ್ಚರವಹಿಸಿ)
ಚೀಸ್‌ಗಳು
ಗಟ್ಟಿ ಚೀಸ್‌, ಬ್ರೈ, ಕೇಮೆಂಬರ್ಟ್‌
ಯೋಗರ್ಟ್‌
ಲ್ಯಾಕ್ಟೋಸ್‌ ಮುಕ್ತ ವಿಧಗಳು
ಐಸ್‌ಕ್ರೀಮ್‌ಗೆ ಪರ್ಯಾಯಗಳು
ಗೆಲಾಟಿ, ಸಾರ್ಬೆಟ್‌ ಬೆಣ್ಣೆಗೆ ಪರ್ಯಾಯ
ಆಲಿವ್‌ ಎಣ್ಣೆ

ಇತರ ಕೊಫ‌ು ಸಿಹಿಕಾರಕಗಳು
ಸಕ್ಕರೆ (ಸುಕ್ರೋಸ್‌)
ಗುಕೋಸ್‌, “-ಓಲ್‌’ ಎಂದು ಅಂತ್ಯವಾಗದ ಹೆಸರುಳ್ಳ ಇತರ ಕೃತಕ ಸಿಹಿಕಾರಕಗಳು
ಜೇನಿಗೆ ಪರ್ಯಾಯಗಳು
ಗೋಲ್ಡನ್‌ ಸಿರಪ್‌
ಮೇಪಲ್‌ ಸಿರಪ್‌
ಕಾಕಂಬಿಗಳು, ಟ್ರೀಕಲ್‌
(ಸಣ್ಣ ಪ್ರಮಾಣದಲ್ಲಿ)

ವರ್ಜಿಸಬೇಕಾದ ಆಹಾರಗಳ ಮಾರ್ಗದರ್ಶಿ
ಅತಿಯಾದ ಫ್ರುಕ್ಟೋಸ್‌

ಹಣ್ಣುಗಳು
ಸೇಬು, ಮಾವು, ನಾಶಿ, ಪೇರ್‌, ನ್ಯಾಚುರಲ್‌ ಜ್ಯೂಸ್‌ ಸಹಿತ ಪೊಟ್ಟಣೀಕೃತ ಹಣ್ಣುಗಳು, ಕಲ್ಲಂಗಡಿ
ಸಿಹಿಕಾರಕಗಳು
ಫ್ರುಕ್ಟೋಸ್‌, ಹೈಫ್ರುಕ್ಟೋಸ್‌ ಉಳ್ಳ ಕಾರ್ನ್ ಸಿರಪ್‌
ಅತಿ ಹೆಚ್ಚು ಪ್ರಮಾಣದ ಫ್ರುಕ್ಟೋಸ್‌
ಸಾಂದ್ರ ಹಣ್ಣಿನ ಮೂಲಗಳು, ದೊಡ್ಡ ಪ್ರಮಾಣದಲ್ಲಿ ಹಣ್ಣುಗಳು, ಒಣಹಣ್ಣುಗಳು, ಹಣ್ಣಿನ ರಸಗಳು
ಜೇನು
ಕಾರ್ನ್ ಸಿರಪ್‌, ಫ್ರುಯಿಸಾನಾ

ಲ್ಯಾಕ್ಟೋಸ್‌
ಹಾಲು
ಹಸು, ಆಡು ಅಥವಾ ಕುರಿ ಹಾಲು, ಕಸ್ಟರ್ಡ್‌, ಐಸ್‌ಕ್ರೀಮ್‌, ಯೋಗರ್ಟ್‌
ಚೀಸ್‌
ಮೃದು, ಮಾಗದ ಚೀಸ್‌: ಉದಾ: ಕಾಟೇಜ್‌, ಕ್ರೀಮ್‌, ಮಾಸ್ಕಾರ್ಪೋನ್‌, ರಿಕೊಟಾ

ಫ್ರುಕ್ಟಾನ್ಸ್‌
ತರಕಾರಿಗಳು

ಆರ್ಟಿಚೋಕ್‌, ಆಸ್ಪರಾಗಸ್‌, ಬೀಟ್‌ರೂಟ್‌, ಬ್ರಾಕೊಲಿ, ಬ್ರುಸೆಲ್ಸ್‌, ಮೊಳಕೆಗಳು, ಕ್ಯಾಬೇಜ್‌, ಫೆನೆಲ್‌, ಬೆಳ್ಳುಳ್ಳಿ, ಲೀಕ್‌, ಒಕ್ರಾ, ನೀರುಳ್ಳಿ, ಶಾಲಟ್‌, ನೀರುಳಿ   ಮೊಳಕೆ

ಧಾನ್ಯಗಳು
ದೊಡ್ಡ ಪ್ರಮಾಣದಲ್ಲಿ ಗೋಧಿ ಮತ್ತು ಕಾಡುಗೋಧಿ, ಉದಾ: ಬ್ರೆಡ್‌, ಬಿಸ್ಕಿಟ್‌ಗಳು, ಕುಕೀಗಳು, ಕಾಸ್ಕಸ್‌, ಚಪಾತಿ

ಹಣ್ಣುಗಳು
ಸೀತಾಫ‌ಲ, ಪರ್ಸಿಮನ್‌, ಕಲ್ಲಂಗಡಿ
ಚಿಕೋರಿ, ದಾಂಡಿಲಿಯನ್‌, ಇನುಲಿನ್‌, ಪಿಸ್ತಾ

ಗಾಲಕ್ಟಾನ್‌
ಬೇಯಿಸಿದ ಬೀನ್ಸ್‌, ಬಿಳಿಕಡಲೆ, ರಾಜ್ಮಾ, ತೊಗರಿ, ಸೋಯಾಬೀನ್‌
ಪೊಲೊÂàಸಿಸ್‌

ಹಣ್ಣುಗಳು
ಸೇಬು, ಏಪ್ರಿಕಾಟ್‌, ಆವಕಾಡೊ, ಬ್ಲಾಕ್‌ಬೆರಿ, ಚೆರಿ, ಲೊಂಗೊನ್‌, ಲಿಚಿ, ನಾಶಿ, ನೆಕ್ಟಾರಿನ್‌, ಪೀಚ್‌, ಪೇರ್‌, ಪ್ಲಮ್‌, ಪ್ರೂನ್‌, ಕಲ್ಲಂಗಡಿ
ತರಕಾರಿಗಳು
ಕಾಲಿಫ್ಲವರ್‌, ಹಸಿರು ದೊಣ್ಣೆಮೆಣಸು, ಅಣಬೆ, ಸ್ವೀಟ್‌ಕಾರ್ನ್
ಸಿಹಿಕಾರಕಗಳು
ಸಾರ್ಬಿಟಾಲ್‌ (420)
ಮಾನಿಟಾಲ್‌ (421)
ಇಸೊಮಾಲ್ಟ್ (953)
ಮಾಲ್ಟಿಟಾಲ್‌ 965)
ಕ್ಸೆ„ಲಿಟಾಲ್‌ (967)

ಕ್ರಾನ್ಸ್‌ ಡಿಸೀಸ್‌ ಮತ್ತು ಅಲ್ಸರೇಟಿವ್‌ ಕೊಲೈಟಿಸ್‌ ಕಾಯಿಲೆಗಳ ಔಷಧ ಸೇವನೆ, ಶಸ್ತ್ರಚಿಕಿತ್ಸೆ ಅಥವಾ ಕರುಳಿನ ಉರಿಯೂತದಿಂದಾಗಿ ಕೊರತೆ ಬೀಳಬಹುದಾದ ಪೌಷ್ಟಿಕಾಂಶಗಳ ಪಟ್ಟಿ, ಅವುಗಳ ಸಮೃದ್ಧ ಮೂಲಗಳು

– ವಿಟಮಿನ್‌ ಬಿ12
ಸಣ್ಣ ಕರುಳಿನ ಕೆಳಭಾಗದಲ್ಲಿ ಅಪರಿಮಿತ ಉರಿಯೂತದ ಅಪಾಯ ಅಥವಾ ಆ ಭಾಗವನ್ನು ತೆಗೆದುಹಾಕಿರುವುದು

ವಿಟಮಿನ್‌ ಎ: ಕೊಬ್ಬಿನ ಅಸಮರ್ಪಕ ಹೀರಿಕೆಯ ಅಪಾಯ, ಸಣ್ಣ ಕರುಳಿನ ಮೇಲ್ಭಾಗ  ಅಥವಾ ಸಣ್ಣ ಕರುಳಿನ ಮಧ್ಯಭಾಗದ ತುದಿ ಕಾಯಿಲೆಯಲ್ಲಿ ಒಳಗೊಂಡಿರುವುದು.

 ಫೊಲೇಟ್‌: ಸಲ್ಫಾಸಲಾಝೈನ್‌ ಬಳಕೆಯ ಅಪಾಯಾಂಶ, ಸಣ್ಣ ಕರುಳಿನ ಮಧ್ಯಭಾಗದಲ್ಲಿ ಅತಿಯಾದ ಉರಿಯೂತ ಅಥವಾ ಆ ಭಾಗವನ್ನು ತೆಗೆದುಹಾಕಿರುವುದು

ಕಬ್ಬಿಣಾಂಶ: ಐಬಿಡಿ ಹೊಂದಿರುವ ಕೆಲವರಲ್ಲಿ ಕರುಳಿನ ಉರಿಯೂತ ಮತ್ತು ಹುಣ್ಣಿನಿಂದ ರಕ್ತನಷ್ಟ ಉಂಟಾಗಬಹುದು. ರಕ್ತನಷ್ಟವು ರಕ್ತಹೀನತೆಗೆ ಕಾರಣವಾಗುತ್ತದೆ. 

ಮೆಗ್ನಿಸಿಯಂ: ಸಣ್ಣ ಕರುಳಿನ ಕೆಳಭಾಗ ಮತ್ತು ಮಧ್ಯಭಾಗಗಳಲ್ಲಿ ಅತಿಯಾದ ಉರಿಯೂತ ಮತ್ತು /ಅಥವಾ ಆ ಭಾಗಗಳ ದೊಡ್ಡ ಭಾಗಗಳನ್ನು ತೆಗೆದುಹಾಕಿರುವುದು, ಮೂಲವ್ಯಾಧಿ ನಷ್ಟ ಮತ್ತು ದೀರ್ಘ‌ಕಾಲಿಕ ಭೇದಿಯಿಂದ ಹೆಚ್ಚಿನ ಅಪಾಯ. 

 ಝಿಂಕ್‌: ಸಣ್ಣ ಕರುಳಿನ ಮಧ್ಯಭಾಗದಲ್ಲಿ ಅತಿಯಾದ ಉರಿಯೂತ ಮತ್ತು / ಅಥವಾ ಆ ಭಾಗವನ್ನು ತೆಗೆದುಹಾಕುವುದರಿಂದ, ಭೇದಿ, ಮೂಲವ್ಯಾಧಿ ನಷ್ಟ, ಪ್ರಡ್ನಿಸೋನ್‌ ಔಷಧಿ ಬಳಕೆ ಅಥವಾ ರಕ್ತದಲ್ಲಿ ಕಂಡುಬಂದಿರುವ ಕಡಿಮೆ ಝಿಂಕ್‌ ಪ್ರಮಾಣಗಳಿಂದ ಅಪಾಯ ಹೆಚ್ಚಳ. 

 ಕ್ಯಾಲ್ಸಿಯಂ: ಲ್ಯಾಕ್ಟೋಸ್‌ ಒಗ್ಗದಿರುವಿಕೆಯಿಂದಾಗಿ ಹೈನು ಆಹಾರಗಳನ್ನು ವರ್ಜಿಸುವುದರಿಂದ, , ಕೊಬ್ಬಿನ ಅಸಮರ್ಪಕ ಹೀರಿಕೆ, ಪ್ರಡ್ನಿಸೋನ್‌ ಔಷಧಿ ಬಳಕೆ, ಅತಿಯಾದ ಉರಿಯೂತ ಅಥವಾ ಸಂಪೂರ್ಣ ಸಣ್ಣ ಕರುಳಿನಲ್ಲಿ ಶಸ್ತ್ರಚಿಕಿತ್ಸೆಯಿಂದ ಅಪಾಯ ಹೆಚ್ಚಳ.

ಪೊಟ್ಯಾಸಿಯಂ: ದೀರ್ಘ‌ಕಾಲಿಕ ವಾಂತಿ ಮತ್ತು ಭೇದಿಯಂದ ಅಪಾಯ ಹೆಚ್ಚಳ.

ವಿಟಮಿನ್‌ ಡಿ, ಇ ಮತ್ತು ಕೆ: ಕೊಬ್ಬಿನ ಅಸಮರ್ಪಕ ಹೀರಿಕೆಯ ಅಪಾಯ, ಸಣ್ಣ ಕರುಳಿನ ಮಧ್ಯಭಾಗ ಅಥವಾ ಸಣ್ಣ ಕರುಳಿನ ಕೆಳಭಾಗದಲ್ಲಿ ಉರಿಯೂತ ಅಥವಾ ಸಣ್ಣ ಕರುಳಿನ ಆ ಭಾಗಗಳನ್ನು ಆಂಶಿಕವಾಗಿ ತೆಗೆದುಹಾಕಿರುವುದು.

Advertisement

Udayavani is now on Telegram. Click here to join our channel and stay updated with the latest news.

Next