Advertisement

Broccoli ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಇವೆ….?

05:43 PM Aug 21, 2024 | Team Udayavani |

ಹಸಿರು ತರಕಾರಿಗಳನ್ನು ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ನಾವು ಆರೋಗ್ಯವಂತರಾಗಿರಬಹುದು. ಈಗ ತರಕಾರಿಗಳನ್ನು ಇಷ್ಟಪಡುವವರ ಸಂಖ್ಯೆ ಕಡೆಮೆಯಾಗಿದೆ. ಹೆಚ್ಚಿನವರು ತರಕಾರಿ ಸೇವಿಸುವ ಬದಲಾಗಿ ಫಾಸ್ಟ್ ಫುಡ್, ಜಂಕ್‌ ಫುಡ್ ಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಬಹುಬೇಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

Advertisement

ನಮ್ಮ ದಿನನಿತ್ಯದ ಆಹಾರದಲ್ಲಿ ತರಕಾರಿಯಂತಹ ಆರೋಗ್ಯಕಾರಿ ಆಹಾರವನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ ಹಸಿರು ತರಕಾರಿಗಳು ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬ್ರೊಕೊಲಿ ಎಲೆಕೋಸು ವರ್ಗಕ್ಕೆ ಸೇರಿದ ಹಸಿರು ತರಕಾರಿ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು, ಫೈಬರ್, ಖನಿಜಗಳು, ವಿಟಮಿನ್ ಸಿ ಮತ್ತು ಕೆ, ಉತ್ಕರ್ಷಣ ನಿರೋಧಕಗಳು ಮತ್ತು ಕ್ಯಾಲ್ಸಿಯಂಗಳನ್ನು ಒಳಗೊಂಡಿದೆ. ಇದು ಹೃದಯಾಘಾತದಂತಹ ಅಪಾಯದಿಂದ ತಪ್ಪಿಸುತ್ತದೆ ಮಾತ್ರವಲ್ಲದೇ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಉತ್ತಮ ಚರ್ಮ ಮತ್ತು ಕೂದಲಿನ ಆರೋಗ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಕ್ಯಾನ್ಸರ್ ವಿರುದ್ಧ ಹೋರಾಡಲು ಕೂಡಾ ಸಹಾಯ ಮಾಡುತ್ತದೆ. ಬ್ರೊಕೊಲಿ ಸಣ್ಣ ಕರುಳಿನ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಬ್ರೊಕೋಲಿ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ..

ತೂಕ ನಷ್ಟಕ್ಕೆ ಸಹಕಾರಿ: ಹೆಚ್ಚುತ್ತಿರುವ ಎಣ್ಣೆಯುಕ್ತ ಮತ್ತು ಜಂಕ್ ಫುಡ್ ಸೇವನೆಯಿಂದ ತೂಕ ಹೆಚ್ಚಾಗುವ ಸಮಸ್ಯೆ ಸಾಮಾನ್ಯವಾಗಿದೆ. ಮಕ್ಕಳಿಂದ ಹಿರಿಯರವರೆಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಬೊಜ್ಜು ಅಥವಾ ಅಧಿಕ ತೂಕ ಹೊಂದಿದ್ದಾರೆ. ಇದರಿಂದಾಗಿ ಕಾಯಿಲೆಗಳು ಹೆಚ್ಚಾಗಿ ಕಾಡುತ್ತದೆ. ಹೀಗಾಗದೇ ಇರಲು ಆಹಾರದಲ್ಲಿ ಬ್ರೊಕೊಲಿಯನ್ನು ಸೇರಿಸುವುದು ಉತ್ತಮ. ಇದು ವಿಟಮಿನ್-ಸಿ ಮತ್ತು ಆಂಟಿಆಕ್ಸಿಡೆಂಟ್‌(ರೋಗ ನಿರೋಧಕ) ಗಳನ್ನು ಹೊಂದಿದ್ದು, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬ್ರೊಕೊಲಿ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವ ನೀಡುತ್ತದೆ.

Advertisement

ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ: ನಿಯಮಿತವಾಗಿ ಬ್ರೊಕೋಲಿ ಸೇವನೆ ಮಾಡುವುದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಬ್ರೊಕೊಲಿಯು ಸಲ್ಫೊರಾಫೇನ್ ಎಂಬ ಅಂಶ ಹೊಂದಿದ್ದು, ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ಉತ್ತಮ ಫಲಿತಾಂಶಕ್ಕಾಗಿ ಮೊಳಕೆಯೊಡೆದ ಬ್ರೊಕೊಲಿ ತಿನ್ನಬೇಕು.

ತ್ವಚೆ ಆರೋಗ್ಯಕ್ಕೆ ಸಹಕಾರಿ: ಬ್ರೊಕೊಲಿಯು ವಿಟಮಿನ್ ಸಿ ಯ ಉತ್ತಮ. ಬ್ರೊಕೊಲಿ ಗ್ಲುಕೋರಾಫಾನಿನ್ ಎಂಬ ಅಂಶ ಹೊಂದಿದೆ. ಇದು ನೇರಳಾತೀತ ವಿಕಿರಣದ ಕಾರ್ಸಿನೋಜೆನಿಕ್ ಪರಿಣಾಮಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಬ್ರೊಕೋಲಿ ನಮ್ಮ ದೇಹವನ್ನು ಆರೋಗ್ಯವಾಗಿಡುವುದರ ಜೊತೆಗೆ ನಮ್ಮ ತ್ವಚೆಯನ್ನು ಸೂರ್ಯನಿಂದ ರಕ್ಷಿಸಲು ಮತ್ತು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಬ್ರೊಕೊಲಿ ಕೊಲೊಜೆನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಮತ್ತು ಕಾಂತಿಯುತ ತ್ವಚೆಗಾಗಿ ಬ್ರೊಕೋಲಿ ಸೇವಿಸುವುದು ಅಗತ್ಯ.

ಚರ್ಮವನ್ನು ಬಿಗಿಯಾಗಿ, ನಯವಾಗಿ, ಸುಕ್ಕುಗಳಿಂದ ಮುಕ್ತವಾಗಿ ಮತ್ತು ಯೌವನದಿಂದ ಕಾಣುವಂತೆ ಮಾಡುವ ಕೊಲೊಜೆನ್ ಉತ್ಪತ್ತಿಯಲ್ಲಿ ವಿಟಮಿನ್ ಸಿ ಕೂಡ ಅತ್ಯಗತ್ಯ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಚಟುವಟಿಕೆ ಗಾಯವನ್ನು ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ವಯಸ್ಸಾದವರಲ್ಲಿ ಚರ್ಮ ಅಥವಾ ಇತರ ರೀತಿಯ ಅಲರ್ಜಿಗಳಿಗೆ ಹಲವು ಕಾರಣಗಳಿವೆ ಮತ್ತು ಒಂದು ಪ್ರೋಟೀನ್ ಕೊರತೆ. ಬ್ರೊಕೊಲಿಯಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಒಳಗೊಂಡಿರುತ್ತವೆ. ಇದರ ಸೇವನೆಯು ದೇಹಕ್ಕೆ ಸಾಕಷ್ಟು ಪ್ರಮಾಣದ ಪ್ರೋಟೀನ್ ಲಭಿಸುತ್ತದೆ ಮತ್ತು ಜೀವಕೋಶಗಳಲ್ಲಿ ಉತ್ಕರ್ಷಣ ನಿರೋಧಕಗಳನ್ನು ರೂಪಿಸುತ್ತದೆ. ಹೀಗಾಗಿ ವಿವಿಧ ರೀತಿಯ ಅಲರ್ಜಿಗಳಿಗೆ ಬ್ರೊಕೊಲಿ ಉಪಯುಕ್ತವಾಗಿದೆ.

ಮೂಳೆಯ ಆರೋಗ್ಯಕ್ಕೆ ಸಹಕಾರಿ: ಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಂತಹವರು ತಮ್ಮ ಆಹಾರದಲ್ಲಿ ಬ್ರೊಕೊಲಿ ಸೇರಿಸುವುದು ಒಳ್ಳೆಯದು. ಬ್ರೊಕೊಲಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿವೆ, ಇದು ನಿಮ್ಮ ಮೂಳೆಗಳ ಆರೋಗ್ಯಕ್ಕೆ ಅವಶ್ಯಕವಾಗಿದೆ. ಬ್ರೊಕೊಲಿಯು ವಿಟಮಿನ್ ಕೆ ಯ ಉತ್ತಮ ಆಹಾರ ಮೂಲವಾಗಿದೆ. ಇದು ಮೂಳೆಯ ಸಾಂದ್ರತೆಯನ್ನು ಸುಧಾರಿಸುವುದು ಮತ್ತು ಮುರಿತದ ಅಪಾಯವನ್ನು ಕಡಿಮೆ ಮಾಡುವುದು ಸೇರಿದಂತೆ ಮೂಳೆಯ ಆರೋಗ್ಯದ ಮೇಲೆ ಅನೇಕ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಕಣ್ಣಿನ ಆರೋಗ್ಯಕ್ಕೆ ಸಹಕಾರಿ: ಕಣ್ಣುಗಳು ದೇಹದ ಅವಿಭಾಜ್ಯ ಅಂಗ. ದೇಹದ ಇತರ ಭಾಗಗಳಂತೆ ಕಣ್ಣಿಗೂ ಪೋಷಕಾಂಶಗಳು ಅಗತ್ಯವಾಗಿರುತ್ತದೆ. ಇಂದಿನ ಕಾಲದಲ್ಲಿ ಚಿಕ್ಕವಯಸ್ಸಿನಲ್ಲೇ ಕಣ್ಣುಗಳ ಸಮಸ್ಯೆಗೆ ಒಳಗಾಗುವವರು ಅನೇಕ ಜನರಿದ್ದಾರೆ. ಅಂತಹವರಿಗೆ ಬ್ರೊಕೊಲಿ ಸೇವನೆ ಪರಿಣಾಮಕಾರಿಯಾಗಲಿದೆ. ಬ್ರೊಕೊಲಿಯು ಲುಟೀನ್ ಮತ್ತು ಜಿಯಾಕ್ಸಾಂಥಿನ್‌ನಂತಹ ಗುಣಗಳನ್ನು ಹೊಂದಿದ್ದು, ಇವುಗಳು ಕಣ್ಣುಗಳಿಗೆ ಉತ್ತಮ ಪೋಷಕಾಂಶ ಎಂದು ಪರಿಗಣಿಸಲಾಗಿದೆ. ಇದು ಹಿರಿಯರ ಕಣ್ಣುಗಳು ದುರ್ಬಲಗೊಳ್ಳುವುದನ್ನು ತಡೆಯುತ್ತದೆ. ಆದ್ದರಿಂದ ಹಿರಿಯರು ದೃಷ್ಟಿ ಸುಧಾರಿಸಲು ಬ್ರೊಕೊಲಿ ಸೇವಿಸಬಹುದು.

ಮಧುಮೇಹ ನಿಯಂತ್ರಣಕ್ಕೆ ಸಹಕಾರಿ: ಬ್ರೊಕೊಲಿ ಮಧುಮೇಹವನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ. ಬ್ರೊಕೊಲಿಯಲ್ಲಿರುವ ಪೋಷಕಾಂಶಗಳು ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬ್ರೊಕೊಲಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ವಯಸ್ಕರಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮತ್ತು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬ್ರೊಕೊಲಿಯಲ್ಲಿ ಕಂಡುಬರುವ ಫೈಬರ್‌ನಿಂದ ಸಾಧ್ಯ. ಇದು ಹಿರಿಯರಲ್ಲಿ ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ: ಬ್ರೊಕೊಲಿ ಗ್ಲುಕೋಸಿನೊಲೇಟ್‌ಗಳು, ಫೈಬರ್ ಮತ್ತು ವಿಟಮಿನ್-ಸಿ ಅಂಶ ಹೊಂದಿದ್ದು, ಇದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ವಯಸ್ಸಾದಂತೆ, ಜೀರ್ಣಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ಹಿರಿಯರಿಗೆ ಆಹಾರ ಸರಿಯಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಬ್ರೊಕೊಲಿಯಲ್ಲಿರುವ ಫೈಬರ್‌ಗಳು ಹಿರಿಯರಿಗೆ ಉತ್ತಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ ಸಹಕಾರಿ: ದೇಹದಲ್ಲಿ ಸಾಕಷ್ಟು ಪೌಷ್ಟಿಕಾಂಶದ ಕೊರತೆಯಿಂದಾಗಿ ವೃದ್ಧಾಪ್ಯದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಉದ್ಭವಿಸುತ್ತವೆ. ಬ್ರೊಕೊಲಿಯಲ್ಲಿರುವ ಸೆಲೆನಿಯಮ್ ಮತ್ತು ಗ್ಲುಕೋಸಿನೊಲೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇವು ದೇಹದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿಸುವ ಮೂಲಕ ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಯಾವುದೇ ರೀತಿಯ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹೃದಯ ಆರೋಗ್ಯಕರವಾಗಿರುತ್ತದೆ.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next