Advertisement
ಮುನ್ನಾರ್ ಮೂಲದ ಶ್ರೀನಾಥ್ ಕೆ. ಕೊಚ್ಚಿ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದಾರೆ.ಕುಟುಂಬಕ್ಕೆ ಒಳ್ಳೆಯ ಭವಿಷ್ಯ ಕಲ್ಪಿಸಬೇಕು ಹಾಗೂ ತನ್ನ ಜೀವನ ಉತ್ತಮಪಡಿಸಿಕೊಳ್ಳಬೇಕು ಎಂಬ ಅಭಿಲಾಷೆಯಲ್ಲಿ ಸರ್ಕಾರಿ ಹುದ್ದೆ ಪಡೆಯುವ ನಿಟ್ಟಿನಲ್ಲಿ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು. ಆದರೆ ಕೂಲಿ ಕೆಲಸದಲ್ಲಿ ಮುಳುಗಿದ ಅವರಿಗೆ ಓದಲು ಹೆಚ್ಚು ಸಮಯ ಸಿಗುತ್ತಿರಲಿಲ್ಲ. 2016ರಲ್ಲಿ ಕೊಚ್ಚಿ ರೈಲು ನಿಲ್ದಾಣದಲ್ಲಿ ರೈಲ್‌ಟೆಲ್ ಉಚಿತ ವೈಫೈ ಸೌಲಭ್ಯ ಪರಿಚಯಿಸಿತು.ಶ್ರೀನಾಥ್ ಅವರು ತಾವು ಕೂಡಿಟ್ಟಿದ್ದ ಹಣದಲ್ಲಿ ಮೊಬೈಲ್, ಸಿಮ್ ಮತ್ತು ಮೆಮೊರಿ ಕಾರ್ಡ್ ಖರೀದಿಸಿದರು. ವೈಫೈ ಬಳಸಿಕೊಂಡು ಸರ್ಕಾರಿ ಪರೀಕ್ಷೆಗಳಿಗೆ ಸಂಬಂಧಿಸಿದ ಆಡಿಯೋ ಬುಕ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರು. ಕೆಲಸ ಮಾಡುವ ಸಮಯದಲ್ಲೇ ಇಯರ್ ಫೋನ್ ಹಾಕಿಕೊಂಡು ಆಡಿಯೋ ಪ್ರಶ್ನೆ-ಉತ್ತರಗಳು ಮತ್ತು ಇತರೆ ಅಗತ್ಯ ಮಾಹಿತಿಗಳನ್ನು ಆಲಿಸಿ, ನೆನಪಿನಲ್ಲಿ ಇಟ್ಟುಕೊಳ್ಳಲು ಆರಂಭಿಸಿದರು.