Advertisement

ಐಎಎಸ್ ಅಧಿಕಾರಿ ಖೇಮ್ಕಾ ಮತ್ತೊಮ್ಮೆ ಟ್ರಾನ್ಸ್ ಫರ್; 28 ವರ್ಷಗಳಲ್ಲಿ 53 ಬಾರಿ ವರ್ಗಾವಣೆ!

09:44 AM Nov 28, 2019 | Nagendra Trasi |

ಹರ್ಯಾಣ: ಹರ್ಯಾಣದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರನ್ನು ಮತ್ತೊಮ್ಮೆ ವರ್ಗಾವಣೆ ಮಾಡಿದ್ದು, ಇದು ಅವರ 28 ವರ್ಷಗಳ ವೃತ್ತಿ ಜೀವನದಲ್ಲಿನ 53ನೇ ವರ್ಗಾವಣೆಯಾಗಿದೆ.

Advertisement

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಖೇಮ್ಕಾ ಅವರನ್ನು ಬುಧವಾರ ಹರ್ಯಾಣ ಸರ್ಕಾರ ಪತ್ರಾಗಾರ ಇಲಾಖೆಗೆ ವರ್ಗಾವಣೆ ಮಾಡಿದೆ.

ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಖೇಮ್ಕಾ ಅವರನ್ನು ಕ್ರೀಡಾ ಮತ್ತು ಯುವ ವ್ಯವಹಾರಗಳ ಇಲಾಖೆಗೆ ವರ್ಗಾಯಿಸಿದ್ದರು. ಇದೀಗ ಮತ್ತೊಮ್ಮೆ ಟ್ರಾನ್ಸ್ ಫರ್ ಮಾಡಲಾಗಿದೆ. ಅದು ಸಂವಿಧಾನ ದಿನಾಚರಣೆಯ ಮರುದಿನವೇ ವರ್ಗಾವಣೆ ಮಾಡಲಾಗಿದೆ. ಸುಪ್ರೀಂಕೋರ್ಟ್ ಆದೇಶ ಮತ್ತು ಕಾನೂನನ್ನು ಮತ್ತೊಮ್ಮೆ ಉಲ್ಲಂಘಿಸಲಾಗಿದೆ. ಕೊನೆಪಕ್ಷ ನಾವು ಕೆಲವರನ್ನು ಸಂತುಷ್ಟಿಗೊಳಿಸಬೇಕಾಗಿದೆ. ನನ್ನನ್ನು ಕೊನೆಯ ಮೂಲೆಗೆ ತಳ್ಳಿಬಿಟ್ಟಿದ್ದಾರೆ ಎಂದು ಖೇಮ್ಕಾ ಬುಧವಾರ ಟ್ವೀಟ್ ನಲ್ಲಿ ತಮ್ಮ ಒಡಲಾಳವನ್ನು ಬಿಚ್ಚಿಟ್ಟಿದ್ದಾರೆ.

1991ರ ಐಎಎಸ್ ಬ್ಯಾಚ್ ಅಧಿಕಾರಿಯಾಗಿರುವ ಅಶೋಕ್ ಖೇಮ್ಕಾ ಅವರು ಮಾಧ್ಯಮಗಳ ಗಮನ ಸೆಳೆದಿದ್ದು 2012ರಲ್ಲಿ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಒಡೆತನದ ಸ್ಕೈಲೈಟ್ ಹಾಸ್ಪಿಟಾಲಿಟಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಡಿಎಲ್ ಎಫ್ ನಡುವಿನ ಭೂ ಒಪ್ಪಂದವನ್ನು ಖೇಮ್ಕಾ ರದ್ದುಗೊಳಿಸುವ ಮೂಲಕ ಭಾರೀ ಸುದ್ದಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next