Advertisement

ಬಾಲ್ಯದ ಗೆಳತಿಯ ಕೈಹಿಡಿದ ಇಯಾನ್‌ ಮೊರ್ಗಾನ್‌

06:10 AM Nov 04, 2018 | |

ಲಂಡನ್‌: ಇಂಗ್ಲೆಂಡ್‌ ಏಕದಿನ ತಂಡದ ನಾಯಕ ಇಯಾನ್‌ ಮೊರ್ಗಾನ್‌ ತನ್ನ ಬಾಲ್ಯದ ಗೆಳತಿ ಟಾರಾ ರಿಡ್ವೆ ಅವರನ್ನು ವರಿಸಿದ್ದಾರೆ.

Advertisement

ಶುಕ್ರವಾರ ಸೊಮೇರ್‌ ಸೆಟ್‌ನ ಬಾಬಿಂಗ್‌ಟನ್‌ ಹೌಸ್‌ನಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಇಯಾನ್‌ ಹಾಗೂ ಟಾರಾ ಮದುವೆ ಪ್ರತಿಜ್ಞೆಯನ್ನು ವಿನಿಮಯ ಮಾಡಿ ಕೊಂಡರು.

ಲಂಡನ್‌ ಮೂಲದ ಫ್ಯಾಶನ್‌ ಹೌಸ್‌ ಬರ್ಬೆರಿಯದ ಮಾರ್ಕೆ ಟಿಂಗ್‌ ಸಂಯೋಜಕರಾಗಿರುವ ಟಾರಾ 2010ರಲ್ಲಿ ಇಯಾನ್‌ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಇಯಾನ್‌ ಆಸ್ಟ್ರೇ ಲಿಯಾ ವಿರುದ್ಧ ಆ್ಯಶಸ್‌ ಸರಣಿಯಲ್ಲಿ ಆಟವಾಡುತ್ತಿದ್ದರು. ಈ ಸಮಾರಂಭವು 130 ಅತಿಥಿಗಳ ಸಮ್ಮುಖದಲ್ಲಿ ನಡೆದಿದೆ. ನ್ಯೂಜಿಲ್ಯಾಂಡ್‌ ನಾಯಕ ಬ್ರೆಂಡನ್‌ ಮೆಕಲಮ್‌,ಕುಕ್‌, ಜಾಸನ್‌ ರಾಯ್‌, ಮಾರ್ಕ್‌ ವುಡ್‌ ಹಾಗೂ ಜೊಸ್‌ ಬಟ್ಲರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next