ಸಿಡ್ನಿ: ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಇಯಾನ್ ಚಾಪೆಲ್ ಅವರು ಭಾರತ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ವಿರಾಟ್ ಕೊಹ್ಲಿಯನ್ನು ಅಸಾಧಾರಣ ನಾಯಕ ಎಂದು ಕಂಡುಕೊಂಡಿದ್ದಾರೆ. ಅಲ್ಲದೆ, ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ರನ್ನು “ಉತ್ತಮ ಬ್ಯಾಟರ್ ಆದರೆ ಕಳಪೆ ನಾಯಕ” ಎಂದು ಪರಿಗಣಿಸಿದ್ದಾರೆ.
“ಇದು ಇಬ್ಬರು ಕ್ರಿಕೆಟ್ ನಾಯಕರ ಕಥೆ; ಒಬ್ಬರು ತಮ್ಮ ಕೆಲಸದಲ್ಲಿ ಉತ್ತಮ ಮತ್ತು ಇನ್ನೊಬ್ಬರು ವಿಫಲ ನಾಯಕ” ಎಂದು ಚಾಪೆಲ್ ಇಎಸ್‌ಪಿಎನ್ ಕ್ರಿಕ್‌ಇನ್‌ಫೋಗಾಗಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
“ನಾಯಕನಾಗಿ ಕೊಹ್ಲಿ ಅದ್ಭುತವಾಗಿದ್ದರು ಎಂಬುದರಲ್ಲಿ ಸಂದೇಹವಿಲ್ಲ; ಅವರು ತಮ್ಮ ಉತ್ಸಾಹವನ್ನು ತಗ್ಗಿಸಲಿಲ್ಲ ಆದರೆ ಅವರು ಭಾರತ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಇನ್ನೂ ಸಮರ್ಥರಾಗಿದ್ದರು. ಉಪನಾಯಕ ಅಜಿಂಕ್ಯ ರಹಾನೆ ಅವರ ಸಮರ್ಥ ನೆರವಿನೊಂದಿಗೆ ಬೇರೆ ಯಾವ ನಾಯಕನೂ ಮಾಡದ ಹಾಗೆ ವಿರಾಟ್ ಭಾರತವನ್ನು ವಿದೇಶಗಳಲ್ಲಿ ಯಶಸ್ಸಿನತ್ತ ಕೊಂಡೊಯ್ದಿದ್ದರು” ಎಂದು ಚಾಪೆಲ್ ಅಭಿಪ್ರಾಯಪಟ್ಟರು.
ಇಂಗ್ಲೆಂಡ್ ನಾಯಕ ಜೋ ರೂಟ್ ಬಗ್ಗೆ ಕಟುವಾಗಿ ಬರೆದಿರುವ ಇಯಾನ್ ಚಾಪೆಲ್, “ನಾಯಕತ್ವ ವೈಫಲ್ಯ, ಇತರ ಯಾವುದೇ ನಾಯಕರಿಗಿಂತ ಹೆಚ್ಚು ಬಾರಿ ತನ್ನ ದೇಶವನ್ನು ಮುನ್ನಡೆಸಿದ್ದರೂ ಜೋ ರೂಟ್ ಉತ್ತಮ ಬ್ಯಾಟರ್ ಆದರೆ ಕಳಪೆ ನಾಯಕ” ಎಂದಿದ್ದಾರೆ.
ಇದನ್ನೂ ಓದಿ:ಅಪ್ಪುವನ್ನು ಕಳೆದುಕೊಂಡ ನೋವಿನಲ್ಲೇ ಬದುಕುತ್ತಿದ್ದೇನೆ: ಶಿವರಾಜ್ ಕುಮಾರ್
ವೈಯಕ್ತಿಕವಾಗಿ ಕೊಹ್ಲಿ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಓರ್ವ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಬೆಳವಣಿಗೆಗಿಂತ ಅದು ದೊಡ್ಡದಲ್ಲ. ಕೊಹ್ಲಿ ಆಯ್ಕೆ ಮತ್ತು ಕೆಲವು ನಿರ್ಧಾರಗಳು ಪ್ರಶ್ನಾರ್ಹವಾಗಿದೆ. ಆದರೆ ಪಂತ್ ಅವರಿಗೆ ನೀಡಿದ ಬೆಂಬಲವು ಮಾಸ್ಟರ್ ಸ್ಟ್ರೋಕ್ ಎಂಬುದರಲ್ಲಿ ಸಂದೇಹವಿಲ್ಲ” ಎಂದು ಚಾಪೆಲ್ ಹೇಳಿದ್ದಾರೆ.