Advertisement

ಎಲ್ಲಾ ಕ್ಷೇತ್ರಗಳಲ್ಲೂ ಕೈ ಗೆಲ್ಲಿಸ್ತೇನೆ ;ಬಿಜೆಪಿ ಅಭ್ಯರ್ಥಿ ಎಡವಟ್ಟು

10:39 AM Mar 25, 2019 | Team Udayavani |

ಬೇಲೂರು: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಎ. ಮಂಜು ಇನ್ನೂ ಕಾಂಗ್ರೆಸ್‌ ಗುಂಗಿನಲ್ಲಿರುವಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಅವರು 2023 ರ ವೇಳೆಗೆ ಹಾಸನದ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವುದಾಗಿ ಹೇಳಿದ್ದಾರೆ. 

Advertisement

ಶನಿವಾರ ಹಾಸನದಲ್ಲಿ  ಬಿಜೆಪಿ ಕಾರ್ಯಕರ್ತರ ಸಭೆಯನ್ನು ದ್ದೇಶಿಸಿ ಮಾತನಾಡಿದ ಮಂಜು ಮಾತಿನ ಭರದಲ್ಲಿ ಬಾಯ್‌ತಪ್ಪಿ  ಹಾಸನದ ಎಲ್ಲಾ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರನ್ನಾಗಿ ಮಾಡತಕ್ಕಂತ ಜವಾಬ್ಧಾರಿ ನನ್ನದು ಎಂದು ಹೇಳಿದ್ದಾರೆ. ತಕ್ಷಣ ನೆರೆದಿದ್ದ ಕಾರ್ಯಕರ್ತರು ಕಾಂಗ್ರೆಸ್‌ ಅಲ್ಲ ಬಿಜೆಪಿ  ಎಂದು ಕೂಗಿದರು.

ಗೌಡರಿಗೆ 9 ಕಂಟಕ 
ಇದೇ ವೇಳೆ ಮಾತನಾಡಿ ಎ ಮಂಜು ದೇವೇಗೌಡರಿಗೆ ಈ ಬಾರಿ 9 ಕಂಟಕವಾಗಲಿದೆ. 1989, 1999 ರಲ್ಲಿ ಸೋತಂತೆ 2019 ರಲ್ಲೂ ಸೋಲಾಗಲಿದೆ. ಚುನಾವಣೆಯೂ 18 ಕ್ಕೆ ಬಂದಿದ್ದು, 1+8 =9 ಅದು ಸರಿಯಾಗಿಯೆ ಬಂದಿದೆ ಎಂದು ಸಂಖ್ಯಾ ಶಾಸ್ತ್ರ ನುಡಿದರು. 

Advertisement

Udayavani is now on Telegram. Click here to join our channel and stay updated with the latest news.

Next