Advertisement
“ಬಂಡಾಯವೆದ್ದವರನ್ನು ಕಳೆದುಕೊಳ್ಳದಿರುವುದಕ್ಕೆ ನಾನು ಎನ್‌ಸಿಪಿ, ಕಾಂಗ್ರೆಸ್‌ನೊಂದಿಗಿನ ಮೈತ್ರಿ ಬಿಟ್ಟು ಬಿಜೆಪಿ ಜತೆ ಮೈತ್ರಿಗೂ ಸಿದ್ಧವಾಗಿಬಿಟ್ಟಿದ್ದೆ. ಆದರೆ ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಶಿವಸೇನೆ ನಾಯಕರ ವಿರುದ್ಧ ಬಳಸಿಕೊಂಡಿದ್ದು ಸೇರಿ 2-3 ವಿಚಾರದಲ್ಲಿ ಸ್ಪಷ್ಟನೆ ಸಿಕ್ಕ ನಂತರವೇ ಅವರೊಂದಿಗೆ ಸೇರಿಕೊಳ್ಳುತ್ತಿದೆ’ ಎಂದು ಉದ್ಧವ್ ಶಿವಸೇನೆಯ ಸಂಸದ ಸಂಜಯ್ ರಾವತ್ ಅವರೊಂದಿಗಿನ ಸಂದರ್ಶನದಲ್ಲಿ ಬಾಯಿ ಬಿಟ್ಟಿದ್ದಾರೆ.
ಬುಧವಾರ ಉದ್ಧವ್ ಅವರಿಗೆ ಮುಖ್ಯಮಂತ್ರಿ ಏಕನಾಥ ಶಿಂಧೆ ಹುಟ್ಟು ಹಬ್ಬದ ಶುಭ ಹಾರೈಸಿದ್ದಾರೆ. “ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಹುಟ್ಟಿದ ದಿನದ ಶುಭ ಹಾರೈಕೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ಉದ್ಧವ್‌ರನ್ನು ಶಿವಸೇನೆಯ ಅಧ್ಯಕ್ಷ ಎಂದು ಹೆಸರಿಸದೆಯೇ ಕೇವಲ ಮಾಜಿ ಮುಖ್ಯಮಂತ್ರಿ ಎಂದು ಕರೆದಿರುವುದು ಚರ್ಚೆಗೆ ಕಾರಣವಾಗಿದೆ.